ತುತ್ತು ಬಾಯಿಗೆ ಬರಲಿಲ್ಲ ” ವೆಂಬ ಸಾಮತಿಯಂತೆ ಈ ಮನುಷ್ಯನು ತಂದಿರುವ ಬೆಲೆಯುಳ್ಳ ಆಭರಣಗಳೆಲ್ಲ ಕೈಬಿಟ್ಟು ಹೋದಾವು ! ” ಎಂದು ಯೋಚಿಸಿಕೊಂಡು ಆ ಬ್ರಾಹ್ಮಣನನ್ನು ಕುರಿತು " ಎಲೈ ತಿಳಿಗೇಡಿಯಾದ ಬ್ರಾಹ್ಮಣನೇ ! ನೀನು ನಿನ್ನೆಯ ದಿವಸ ವ್ಯರ್ಥಶ್ರ ಮಮಾಡಿದಂತಾಯಿತು. ಮೊದಲು ಇಟ್ಟ ಸ್ಥಳವನ್ನು ಬಿಟ್ಟು ಬೇರೆಕಡೆಗೆ ಶೋಧಮಾಡಿದರೆ ಹಣವು ಸಿಗುವ ಬಗೆಹೇಗೆ ? ” ಎಂದುನುಡಿದು ಅಂಗುಲಿ ಸಂಕೇತದಿಂದ ಈ ಸ್ಥಳ
ದಲ್ಲಿ ಅಗಿದು ನೋಡು ! ಅಂದರೆ ಸಿಕ್ಕಿತು ! ” ಎಂದು ಹೇಳಿದನು ಫಕೀರನು ನಿರ್ದೇಶ ಮಾಡಿ ತೋರಿಸಿದ ಸ್ಥಳದಲ್ಲಿ ಅಗಿದು ನೋಡಲು ಯಾವತ್ತು ದ್ರವ್ಯವು ಸಿಕ್ಕಿತು ಬ್ರಾಹ್ಮಣನು ದ್ರವ್ಯವನ್ನು ತಕ್ಕೊಂಡು ಬೀರಬಲನ ಬಳಿಗೆ ನ್ಯಾಯಾಲಯಕ್ಕೆ ಬಂದನು.
ಆ ಮೇಲೆ ಬೀರಬಲನು ಪ್ರತಿಷ್ಕೃತನಾದ ಒಬ್ಬ ಸೇವಕನನ್ನು ಕರೆದು ಅವನ ಕಿವಿಯಲ್ಲಿ ಏನೋ ಹೇಳಿ ಆಭರಣದ ಗಂಟನ್ನು ತೆಗೆದು ಕೊಂಡು ಫಕೀರನ ಬಳಿಗೆ ಹೋಗಿದ್ದ, ಮನುಷ್ಯನನ್ನು ಕರೆಯ ಕಳುಹಿದನು. ಅವನು ಹೋಗಿ ಆ ಮನುಷ್ಯನನ್ನು ಕುರಿತು “ ಪರದೇಶಕ್ಕೆ ಹೋಗಿದ್ದ ನಿನ್ನ ಸಹೋದರನು ಇದೇ ಈಗ ಬಂದನು ಅದರಿಂದ ತಾವು ಬೇಗನೇ ಬರ
ಬೇಕು ” ಎಂದು ವಿಜ್ಞಾಪನೆ ಮಾಡಿಕೊಂಡನು. ಆಗ ಮೊದಲಿನ ಮನುಷ್ಯನು ಆ ಫಕೀರನನನ್ನು ಕುರಿತು "ಶಾಹಸಾಹೇಬ ! ನಾನು ಯಾವನ ಸಲುವಾಗಿ ಪ್ರಯಾಣಕ್ಕೆ ಸಿದ್ದನಾಗಿದ್ದೆನೋ ಅವನೇ ಇಲ್ಲಿಗೆ ಬಂದಮೇಲೆ ಆಭರಣಗಳನ್ನು ನಿಮ್ಮ ಬಲಿಯಲ್ಲಿ ಇಡುವ ಅವಶ್ಯಕತೆಯೇ ಉಳಿಯಲಿಲ್ಲ' ಎಂದು ಹೇಳಿ ಆಭರಣಗಳನ್ನೆಲ್ಲ ಕಟ್ಟಿಕೊಂಡು ಆ ಫಕೀರನಿಗೆ ಸಲಾಮು ಮಾಡಿ, ಹೊರಟುಬಂದು ಬೀರಬಲನಿಗೆ ಬೆಟ್ಟಿಯಾದನು.
ಬೀರಬಲನ ಅನುರೋಧದಂತೆ ಆ ಬ್ರಾಹ್ಮಣನೂ ಆ ಈರ್ವರು ಮನುಪ್ಯರೂ ಸಮಗ್ರ ವೃತ್ತಾಂತವನ್ನು ಬಾದಶಹನಮುಂದೆ ಕಥನಮಾಡಿದರು, ಬಾದಶಹನು ಬೀರಬಲನ ಚಾತುರ್ಯವನ್ನು ಪ್ರಶಂಸೆಮಾಡಿ ಫಕೀರನನ್ನು ಕರೆಯಿಸಿ ಉಚಿತವಾದ ದಂಡನೆಯನ್ನು ವಿಧಿಸಿದನು.
—( ೧೫೮, ಕೃಷಣನ ಸಂಪಾದನೆ. )—
ದಿಲ್ಲಿಯಲ್ಲಿ ಒಬ್ಬ ಕೃಪಣನಿದ್ದನು. ಅವನು ಹೊಟ್ಟಗೆಸಹಾ ಪೂರಾತಿನ್ನದೆ ಬಹಳದ್ರವ್ಯವನ್ನು ಸಂಪಾದಿಸಿದ್ದನು. ಆ ದ್ರವ್ಯವನ್ನು ಮನೆಯಲ್ಲಿಟ್ಟರೆ ಚೋರೋಪದ್ರವವು ಆಗುವದೆಂಬ ಭಯದಿಂದ ಆ ದ್ರವ್ಯವನ್ನೆಲ್ಲ ತೆಗೆದುಕೊಂಡು ಹೋಗಿ ಅರಣ್ಯದಲ್ಲಿ ಒಂದುಬಿಲ್ವವೃಕ್ಷದ ಅಡಿಯಲ್ಲಿ ಹೂಳಿಟ್ಟ
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೩೬
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
(೩೪)
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೬೫