ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೫
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೭೩


ಹಾಕಿ ಹೋಗುತ್ತಿದ್ದನು, ಯಾವನಾದರೂ ಸೂಕ್ಷ್ಮ ಬುದ್ಧಿಯವನು ಹೌದಿನಹತ್ತಿರ ಬಂದು ಪರೀಕ್ಷಿಸಿನೋಡಿದರೂ ಸಹ ಮೇಲೆ ಹೊಂದಿಸಲ್ಪಟ್ಟ ಶುಭ್ರವಾದ ವಸ್ತ್ರದಿಂದ ನೀರು ಸಹಾ ಹಾಲಿನಂತೆ ಶುಭ್ರವಾಗಿಯೇ ತೋರುತಿತ್ತು. ಮರುದಿವಸ ಪ್ರಾತಃಕಾಲದಲ್ಲಿ ಬೀರಬಲನು ಬಾದಶಹನನ್ನು ಕರಕೊಂಡು ಹೌದಿನಹತ್ತರ ಬಂದನು, ಹೌದಿನಮೇಲೆ ಆಚ್ಚಾದಿಸಲ್ಪಟ್ಟಿದ್ದ ವಸ್ತ್ರವನ್ನು ತೆಗೆದನು ಆ ಹೌದು ಹಾಲಿನಿಂದ ತುಂಬುವದರ ಬದಲು ನೀರಿ ನಿಂದಲೇ ತುಂಬಿಹೋಗಿತ್ತು, ಅದರಲ್ಲಿ ಹಾಲಿನ ಹೆಸರೇ ಇದ್ದಿಲ್ಲ ಅದನ್ನು ಕಂಡು ಬಾದಶಹನಿಗೆ ಬಹು ಸೋಜಿಗವಾಯಿತು ಯೋಚನೆಯಲ್ಲಿ ಬಿದ್ದನು.
ಅದನ್ನು ಕಂಡು ಬೀರಬಲನು- “ ಪೃಥ್ವಿನಾಥ ? ಸೌನಯಾನೋಕಾ ಏಕಮತ ” ನಾನು ಹೇಳಿದಸಾಮತಿಯು ಸತ್ಯವಾಯಿತೋ ಇಲ್ಲವೋ ಎಂದು ಕೇಳಿದನು.
ಬಾದಶಹ-ಪ್ರತ್ಯಕ್ಷವಾಗಿದ್ದ ಮಾತಿನಲ್ಲಿ ಸಂದೇಹವೇನು ! ಆದರೂ ಈ ವಿಷಯವನ್ನು ಇನ್ನೂ ಸ್ವಲ್ಪ ಹೆಚ್ಚು ಪರೀಕ್ಷಿಸಿನೋಡಬೇಕೆಂದು ಅಭಿಲಾಷೆಯದೆ.
ಬೀರಬಲ-ಒಳ್ಳೇದು ಹಾಗೇ ಆಗಲಿ,
ಆಗ ಬಾದಶಹನು ಪ್ರಚ್ಛನ್ನ ವೇಷಧಾರಿಯಾಗಿ ಸಾಯಂಕಾಲದಲ್ಲಿ ನಗರದ ಸಂಚಾರಾರ್ಥವಾಗಿ ಹೊರಟನು. ಸಂಚರಿಸುತ್ತಾ ಸಂಚರಿಸುತ್ತಾ ಕತ್ತಲೆಯಾಗಲು ಒಂದುಮನೆಯ ಸಮೀಪಕ್ಕೆ ಬಂದನು. ಆ ಗೃಹವು ಬಹಳ ಎತ್ತರವಾಗಿದ್ದರೂ ಸುಂದರವಾಗಿತ್ತು, ಈ ಮನೆಯಲ್ಲಿ ಪರೀಕ್ಷಿಸಿ ನೋಡ ಬೇಕೆಂದು ಯೋಚಿಸಿ ಮುಂದೆಮಾಡಿದ ಬಾಗಿಲವನ್ನು ಅಂಗುಲಿಯಿಂದ ಟಕ ಟಕ ಬಾರಿಸಿದನು. ಆಗ ಒಳಗಿನಿಂದ ಯಾರವರು ? ಎಂಬ ಧ್ವನಿಯು ಕೇಳ ಬಂತು; ಆಗ ಬಾದಶಹನು. " ಯಜಮಾನರೇ ! ನಾನು ಪ್ರವಾಸಿಯು ಈ ಪಟ್ಟಣಕ್ಕೆ ಬಂದು ಎರಡು ದಿವಸಗಳಾದವು ಈ ದಿವಸ ಸಾಯಂಕಾಲದ ಮುಂದೆ ನಗರವನ್ನು ನೋಡಬೇಕೆಂದು ಇಚ್ಛಿಸಿ ಸಂಚಾರಮಾಡುತ್ತ ಮಾಡುತ್ತ ಬರಲು ನಾನು ಇಳಿದುಕೊಂಡಿದ್ದ ಸ್ಥಳವು ಗೊತ್ತಾಗದೆ ಹೋಯಿತು ಮತ್ತು ನಡೆದುನಡೆದು ಬೇಸತ್ತುಹೋಗಿದ್ದೇನೆ, ಆದ್ದರಿಂದ ನನಗೆ ವಿಶ್ರಾಂತಿ ಗೋಸುಗ ಕಿಂಚಿತ್‌ಸ್ಥಳವನ್ನು ಕೊಟ್ಟರೆ ತಮಗೆ ಬಹಳೇಪುಣ್ಯವು ಬರು ವದು ” ಎಂದನು. ಆಗ ಮನೆಯ ಯಜಮಾನನು ಬಂದು ಬಾಗಿಲತೆರೆದು ಬಾದಶಹನನ್ನು ಒಳಗೆ ಕರೆದುಕೊಂಡು ಭೋಜನದ ವಿಷಯದಲ್ಲಿ ವಿಚಾರಿ ಸಿದನು, ಬಾದಶಹನು ಧನ್ಯವಾದಸಹಿತ ಅಸ್ವೀಕಾರಮಾಡಿದನು. ಮುಂದೆ