"ಈ ಭೂಮಂಡಲದಲ್ಲಿಯ ಮನುಷ್ಯರ ಮನಸ್ಸೂ ಮತ್ತು ಬುದ್ಧಿಯೂ
ಒಂದೇಪ್ರಕಾರವಾಗಿರುವದೋ ಅಥವಾ ಭಿನ್ನ ಭಿನ್ನ ವಾಗಿರುವದೋ !
ಬೀರಬಲ - ಪೃಥ್ವಿನಾಥ ; ಮನಸ್ಸೂ ಮತ್ತು ಬುದ್ಧಿಯೂ ಭಿನ್ನ ಭಿನ್ನ
ವಾಗಿರುವವು.
ಬಾದಶಹ-ಬುದ್ಧಿಯು ಭಿನ್ನ ಭಿನ್ನವಾಗಿರುವಂತೆ ಅವರವರ ಅಭಿಪ್ರಾಯ
ಗಳೂ ಭಿನ್ನವಾಗಿರ ಬೇಕಾಯಿತು.
ಬೀರಬಲ-ಹಿಂದೀಭಾಷೆಯಲ್ಲಿ " ಔಸಯಾನೋಕಾ ಏಕಮತ ಎಂಬ ಒಂದು ಸಾಮತಿಯಿರುವದು ಯಾಕಂದರೆ ಸ್ವಾರ್ಥ ಸಾಧನದ ವಿಷಯದಲ್ಲಿ ಮಾತ್ರ ಎಲ್ಲರ ಅಭಿಪ್ರಾಯವು ಒಂದೇ ಬಗೆಯಾಗಿ ವ್ಯಕ್ತವಾಗುವನು.
ಬಾದಶಹ-ಬುದ್ಧಿಯು ಭಿನ್ನ ಭಿನ್ನವಾಗಿದ್ದ ಮೇಲೆ ಅವರ ಅಭಿಪ್ರಾಯ
ಗಳಾದರೂ ಭಿನ್ನವೇಕೆ ಆಗಬಾರದು !
ಬೀರಬಲ-ಈ ವಿಷಯವನ್ನು ತಾವು ಪ್ರಮಾಣಿಸಿ ನೋಡಬೇಕೆಂಬದಿದ್ದರೆ
ನಾಳೆಯ ದಿವಸದಲ್ಲಿಯೇ ತೋರಿಸುವೆನು.
ಬಾದಶಹ - ಒಳ್ಳೇದು, ತೋರಿಸು !
ಬೀರಬಲನು ಸರಕಾರದ ಉಪವನದಲ್ಲಿದ್ದ ಒಂದು ಹೌದನ್ನು ” ನೀರಿಲ್ಲದಂತೆ ಮಾಡಿಸಿ, ಬಾದಶಹನ ಅಪ್ಪಣೆಯನ್ನು ಪಡೆದು ! ನಾಳೆ ಪ್ರಾತಃ
ಕಾಲದೊಳಗಾಗಿ ಈ ಪಟ್ಟಣದ ವಾಸಿಗಳಲ್ಲಿ ಪ್ರತಿಯೊಂದು ಕುಟುಂಬದವರು ಒಂದೊಂದು ಕೊಡ ಹಾಲನ್ನು ತಂದು, ಬಾದಶಹರವರ ಉಪವನದಲ್ಲಿದ್ದ ಹೌದಿನಲ್ಲಿ ತಂದು ಹಾಕಬೇಕು ” ಎಂಬದಾಗಿ ಡಂಗುರವನ್ನು ಸಾರಿಸಿದನು ಮತ್ತು ಆ ಹೌದಿನಮೇಲೆ ಒಂದು ಶುಭ್ರವಾದ ವಸ್ತ್ರವನ್ನು ಆಚ್ಛಾದನ ಮಾಡಿ ಬಾದಶಹನಿಗೆ ಈ ಸಂಗತಿಯನ್ನು ತಿಳಿಸಿದನು
ಆಗ ಪ್ರತಿಯೊಂದು ಕುಟುಂಬದವರು ಯೋಚಿಸಿದ್ದೇನೆಂದರೆ " ಬಾದಶಹರವರ ಉಪವನದಲ್ಲಿಯ ಹೌದಿನಲ್ಲಿ ಸಾವಿರಾರು ಕುಟುಂಬದವರು
ಹಾಲನ್ನು ತಂದು ಹಾಕುತ್ತಾರೆ ನಾವೊಬ್ಬರು ಆದರಲ್ಲಿ ಒಂದು ಕೊಡ ನೀರನ್ನು ಸುರುವಿದರೆ ನಮ್ಮ ಅಪರಾಧವು ಯಾರಿಗೂ ಗೊತ್ತಾಗುವದಿಲ್ಲ;
ಈ ಪ್ರಕಾರ ಆ ಲೋಚನೆ ಮಾಡಿಕೊಂಡು ಪ್ರತಿಯೊಬ್ಬನು ಒಂದು ರಾತ್ರಿಯಲ್ಲಿ ಬಂದು ಒಂದೊಂದು ಕೊಡ ನೀರನ್ನು ತಂದು ಸುರುವಿ ಸುಮ್ಮನೆ
ಹೋಗ ಹತ್ತಿದರು ಪ್ರತಿಯೊಬ್ಬನ ಮನಸ್ಸಿನಲ್ಲಿ ನನ್ನ ಹೊರತು ಎಲ್ಲರೂ
ಹಾಲನ್ನೇ ತಂದು ಸುರುವಿದ್ದಾರೆ; ಎಂದು ನಿಶ್ಚಯಿಸಿಕೊಂಡೇ ನೀರನ್ನು