ವನೋ ಎಂಬದಾಗಿ ಬೆದರಿ ಆ ಸರದಾರನನ್ನು ಬಹುಪರಿಯಾಗಿ ಪ್ರಾರ್ಥಿಸ
ಹತ್ತಿದರು ಮತ್ತು ತಮ್ಮ ತಮ್ಮ ಯೋಗ್ಯತಾನುಸಾರವಾಗಿ ಹಣವನ್ನು
ಕೊಡಲೊಪ್ಪಿಕೊಂಡರು ಮರುದಿವಸ ಯಾವನು ನೂರು ಯಾವನು ಎರಡು
ನೂರು ಯಾವನು ಐದುನೂರು ಹೀಗೆ ರೂಪಾಯಿಗಳನ್ನು ಚೀಲದಲ್ಲಿ ತುಂಬಿಕೊಂಡು ಬಂದು ಆ ಸರದಾರನಮುಂದೆ ಇಟ್ಟು “ ನಮ್ಮ ಕೃತ್ಯವು ಏನೇ
ಇರಲಿ; ಅದನ್ನು ನಿಮ್ಮ ಹೊಟ್ಟೆಯಲ್ಲಿಯೇ ಇಟ್ಟುಕೊಳ್ಳಬೇಕು ಪ್ರಕಟಪಡಿಸ ಬೇಡಿರಿ ಆ ಶ್ರಮದ ಸಲುವಾಗಿ ನಾವು ಕೊಟ್ಟ ಕಿಂಚಿತ್ ದ್ರವ್ಯವನ್ನು
ಸ್ವೀಕರಿಸಬೇಕು” ಎಂದು ಹೇಳಿದರು ಅದಕ್ಕೆ ಪ್ರತ್ಯುತ್ತರವಾಗಿ ಸರದಾರನು ನೀವು ಅತ್ಯಾಗ್ರಹ ಪಡಿಸಿದ್ದರಿಂದ ನಿಮ್ಮ ಮಾತಿಗೆ ಒಪ್ಪಿಕೊಳ್ಳಬೇಕಾಯಿತು; ನೀವು ಒಳ್ಳೇ ದೈವಶಾಲಿಗಳು ಅಂತೆಯೇ ಬಾದಶಹನ ಸಂಕೇತವು ನಿಮ್ಮ ದೃಷ್ಟಿಗೆ ಬಿದ್ದು ಸುರಕ್ಷಿತವಾಗಿರುವ ಹಂಚಿಕೆಯನ್ನು ಹುಡುಕಿಕೊಂಡಿರಿ ” ಎಂದು ಹೇಳಿದನು ಆ ಜನರೆಲ್ಲ ಹೊರಟು ಹೋದರು.
ಸಾಯಂಕಾಲದಲ್ಲಿ ಎಲ್ಲ ರಾಜಕಾರ್ಯಗಳಿಂದ ನಿವೃತ್ತನಾಗಿ ಬಾದ
ಶಹನು ಆ ದರಿದ್ರ ಸರದಾರನ ಮನೆಗೆ ಬಂದನು. ಆ ಸರದಾರನು ಆ ಜನರಿಂದ ಸಂಪಾದಿತ ವಾದ ದ್ರವ್ಯವನ್ನು ಬಾದಶಹನ ಮುಂದೆ ಇಟ್ಟು “ "
ಪೃಥ್ವಿ ನಾಥ ? ಇದನ್ನು ಸ್ವೀಕರಿಸಬೇಕು ” ಎಂದನು ಆಗ ಬಾದಶಹನು ಆಶ್ಚ ರ್ಯನ್ವಿತನಾಗಿ ಈ ಸದ್ಗೃಹಸ್ತನೇ ನೀನು ಕೂಲಿಯಿಂದ ಧಾನ್ಯವನ್ನು
ಬೀಸಿ ಹೊಟ್ಟೆ ಹೊರಕೊಳ್ಳು! ಹೀಗಿದ್ದು ಇಷ್ಟುದ್ರವ್ಯವು ನಿನ್ನ ಬಳಿಯಲ್ಲಿ ಹ್ಯಾಗೆ ಬಂತು ” ಎಂದು ಕೇಳಿದನು. ಆಗ ಅವನು ನಸುನಗುತ್ತ ಖುದಾವಂದ ! ನಿನ್ನೆ ನೀವು ಓಲಗದಲ್ಲಿ ಅಂಗುಲ ಸಂಕೇತವನ್ನು ಮಾಡಿದ್ದರ
ಫಲವು ! ಈ ದ್ರವ್ಯರೂಪದಿಂದ ಬಂದಿರುತ್ತದೆ.” ಎಂದು ಹೇಳಿದನು ಸರದಾರನ ಬುದ್ಧಿ ಚಾತುರ್ಯವು ಬಾದಶಹನಿಗೆ ತಿಳಿಯ ಬಂದಿದ್ದರೂ ಸಹ ಅವನ
ಬಾಯಿಂದಲೇ ಹೊರಡಿಸಬೇಕೆಂಬ ಉದ್ದೇಶದಿಂದ "ವೃದ್ಧಸರದಾರನೇ
ನಿನ್ನ ಅಭಿಪ್ರಾಯವು ನನಗೆ ತಿಳಿಯಲಿಲ್ಲ' ಎಂದನು ಆಗ ಅವನು ಸಮಗ್ರ
ವೃತ್ತಾಂತವನ್ನು ಕಥನ ಮಾಡಿದನು, ಬಾದಶಹನು ಪ್ರಸನ್ನನಾಗಿ ಆ ಸಮಸ್ತ ದ್ರವ್ಯವನ್ನು ಅವನಿಗೆ ಕೊಟ್ಟು ನ್ಯಾಯಾಸನದಲ್ಲಿ ಒಂದು ಕಾರ್ಯಕ್ಕೆ ನಿಯಮಿಸಿ, “ ನನಗೆ ಆ ಮೋಸಗಾರರ ಪರಿಚಯವದೆ ಎಂದನು.
-(೧೬೧. ಸ ಸಯಾಸೋಕ ಏಕಮತ)-
ಒಂದು ದಿವಸ ಬೀರಬಲನೂ ಬಾದಶಹನೂ ಏಕಾಂತದಲ್ಲಿ ಕುಳಿತು
ಕೊಂಡು ವಿನೋದದಿಂದ ಮಾತುಗಳನ್ನಾಡುತ್ತಿದ್ದರು. ಆಗ ಬಾದಶಹನು
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೪೨
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೭೧