ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು
೨೮೫


ರಗೆ ತೆಗೆದುಕೊಂಡು ಬರಿದಾದಕೊಡವನ್ನು ಪುನಃ ನಮಗೆ ಕಳುಹಿಸಬೇಕು ಒಂದುವೇಳೆ ಕೊಡವನ್ನು ಒಡೆಯದೆ ಬುದ್ದಿಯನ್ನು ಹೊರಗೆತಕೊಳ್ಳುವದು ಅಸಾಧ್ಯವಾಗಿ ಕಂಡುಬಂದರೆ ನಾಲ್ವತ್ತು ಸಹಸ್ರ ರೂಪಾಯಿಗಳನ್ನು ಕಳು ಹಿಸಬೇಕು, ಹಣವಾಗಲೀ ಕೊಡವಾಗಲೀ ಎಂಟು ದಿವಸಗಳೊಳಗಾಗಿ ನ ಮಗೆ ತಲ್ಪದಿದ್ದರೆ ನಿಮ್ಮ ಮೇಲೆ ದಂಡೆತ್ತಿ ಬರುತ್ತೇವೆ, ಯುದ್ಧದ ಸಿದ್ಧತೆಯ ಲ್ಲಿರಿ” ಎಂಬ ಅಭಿಪ್ರಾಯವುಳ್ಳ ಪತ್ರವನ್ನು ಬರೆದು ಬಾದಶಹನ ಮುದ್ರೆಯ ನ್ನು ಒತ್ತಿ ಕಳುಹಿಸಿಕೊಟ್ಟನು. ಆ ಪತ್ರವನ್ನೂ, ಕೊಡವನ್ನೂ, ತೆಗೆದು ಕೊಂಡು ఒబ్బ ಒಂಟೆಯಸವಾರನು ಬಲ್ಕಶಹರಕ್ಕೆ ಪ್ರಯಾಣಮಾಡಿತಲುಪಿ ಅಲ್ಲಿಯ ಬಾಲಕನಿಗೆ ಪತ್ರವನ್ನೂ ಕೊಡವನ್ನೂ ಒಪ್ಪಿಸಿದನು. ಆ ಕೂಡ ಲೇ ಬಾದಶಹನು ಆ ಪತ್ರವನ್ನು ಸ್ವತಃ ತಾನೇ ಓದಿಕೊಂಡನು, ಅಭಿಪ್ರಾ ಯವು ತಿಳಿದಕೂಡಲೇ ಮುಖವು ಕಳೆಗುಂದಿತು, ಕೈಯು ನಡುಗಹತ್ತಿತು. ಅನುಚರರನ್ನು ಕಳುಹಿ ತನ್ನ ಅನುಯಾಯಿಗಳನ್ನು ಕರೆಯಿಸಿಕೊಂಡನು ಅವರೆಲ್ಲರೂ ಒಂದು ಕುಳಿತುಕೊಂಡಮೇಲೆ ಅಕಬರಬಾದಶಹನ ಪತ್ರವನ್ನು ತೋರಿಸಿ ಕೊಡವು ಒಡೆಯದಂತೆಯೂ, ಬುದ್ಧಿಯು ನಿನ್ನ ವಿಚ್ಛಿನ್ನವಾಗಿ ದಂತೆಯೂ ಹೊರಗೆ ತೆಗೆಯಿರಿ ! ಎಂದು ಆಜ್ಞಾಪಿಸಿದನು, ಎತ್ತರೂ ಅನೇಕ ಹಂಚಿಕೆಗಳನ್ನು ಹಾಕಿದರೂ ಸಾಧ್ಯವಾಗಲಿಲ್ಲ ಅಂತ್ಯದಲ್ಲಿ ಮುಖ್ಯ ಮಂತ್ರಿಯು ಎದ್ದು ನಿಂತು “ ಮಹಾರಾಜ ! ಅಕಬರಬಾಹನ ಒಲಗದಲ್ಲಿ ಚತುರರಾದ ಮಂತ್ರಿಗಳು ಅನೇಕಜನರಿದ್ದಾರೆ, ಅವನಿಗೆ ದೈವಸಹಾಯವು ಇನ್ನೂ ಬಲವತ್ತರವಾಗಿದೆ ಅವರನ್ನು ಯುದ್ಧದಲ್ಲಿ ಪರಾಜಿತರನ್ನಾಗಿ ಮಾ ಡುವದು ಅಸಾಧ್ಯವು. ಇದರಿಂದ ನಮ್ಮ ಪ್ರಜೆಗಳನ್ನು ಮರಣಕ್ಕೆ ಗುರಿಮಾ ಡದೆ ನಾಲ್ವತ್ತು ಸಹಸ್ರ ರೂಪಾಯಿಗಳನ್ನು ಕೊಟ್ಟು ಕಳುಹಿಸುವದೇ ಮೇ ಲಾವ ಉಪಾಯವು ” ಎಂದು ತನ್ನ ಅಭಿಪ್ರಾಯವನ್ನು ಕೊಟ್ಟನು. ಸ ಸಭಾಸದರೂ ಮಂತ್ರಿಯ ಅಭಿಪ್ರಾಯವು ಸರಿಯಾದದ್ದೆಂದು ಮುಕ್ತಕಂಠ ರಾಗಿ ಹೇಳಿದರು, ಅವರೆಲ್ಲರ ಅಭಿಪ್ರಾಯದಂತೆ ಬಲ್ಲದ ಬಾದಶಹನು ನಾಲ್ವ ತ್ತು ಸಾವಿರ ರೂಪಾಯಿಗಳನ್ನು ಕೊಟ್ಟು ಕಳುಹಿಸಿ ಅಕಬರನ ಸ್ನೇಹವ ನ್ನು ಸಂಪಾದಿಸಿದನು.
-( ೧೬೪, ಜೀವವು ಅತ್ಯಂತ ಪ್ರಿಯವಾದದ್ದು. )
ಒಂದುದಿವಸ ಬಾದಶಹನು ಓಲಗದಲ್ಲಿ ಬಂದು ಕುಳಿತುಕೊಂಡಿದ್ದನು ಎರಡುವರುಷದ ಬಾಲಕನಾದ ಸೇಲೀಮನು ಅಲ್ಲಿಯೆ ಮಗ್ಗಲಲ್ಲಿ ಆಡುತ್ತಿದ್ದ ನು ಆ ಹುಡುಗನ ಬಾಲಲೀಲೆಗಳನ್ನು ನೋಡುವದರಲ್ಲಿ ಬಾದಶಹನಮನಸ್ಸು