ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೨೮೮
ಅಕಬರ ಬೀರಬಲ ಚಾತುರ್ಯವಾದ ವಿನೋದಕಥೆಗಳು

ಕ್ಕೆ ಬೀರಬಲನು ಮಹಾರಾಜ ! ನಾಳೆಗೆ ತೋರಿಸುವದು ಆಗಲಿಕ್ಕಿಲ್ಲ ಒಂ ದು ಸವಂತ್ಸರದ ವಧಿಯು ಬೇಕು, ಮತ್ತು ದ್ರವ್ಯಸಹಾಯವೂ ಬಹಳಬೇ ಕಾಗುವದು, ಎಂದನು “ ಏನೂ ಚಿಂತೆಯಿಲ್ಲ, ಒಂದು ಸಂವತ್ಸರದ ಅವಧಿ ಯನ್ನು ಕೊಟ್ಟಿದ್ದೇನೆ ದ್ರವ್ಯವು ಎಷ್ಟು ಬೇಕಾದೀತೆಂಬದನ್ನು ತಿಳಿಸು" ಎಂದು ಬಾದಶಹನು ಕೇಳಿದನು ಎರಡು ಲಕ್ಷರೂಪಾಯಿಗಳು ಬೇಕಾಗ ಬ ಹುದೆಂದು ಬೀರಬಲನು ಹೇಳಿದ ಕೂಡಲೆ ಹಣವನ್ನು ಅವನ ಸ್ವಾಧೀನಪಡಿ ಸಿದನು ಬೀರಬಲನು ಆ ದ್ರವ್ಯದಲ್ಲಿ ಅರ್ಧದ್ರವ್ಯವನ್ನು ಬ್ರಾಹ್ಮಣರಿಗೆ ದಾ ನಮಾಡಿ, ಉಳಿದ ದ್ರವ್ಯವನ್ನು ಮನೆಯಲ್ಲಿಟ್ಟುಕೊಂಡು ಕುಳಿತು ಬಿಟ್ಟನು ಕೆಲವು ಕಾಲದ ತನಕ ಬಾದಶಹನ ಅರಮನೆಯ ಕಡೆಗೇ ಹಾಯಲಿಲ್ಲ ಅದ ನ್ನು ಕಂಡು ಬಾದಶಹನು ಅವನನ್ನು ಕರೆಯ ಕಳುಹಿದನು. ಆಗ ಬೀರಬ ಲನು “ ನನಗೆ ಈಗ ಸ್ವಲ್ಪದಿವಸಗಳಿಂದ ಜಾಡ್ಯವುತ್ಸನ ವಾಗಿದೆ ಅದರಿಂದ ಬಾದಶಹರ ದರುಶನಕ್ಕೆ ಬರಲಸಮರ್ಥನಾಗಿದ್ದೇನೆ, ” ಎಂದು ಹೇಳಿ ಕಳು ಹಿಸಿದನು ಆಗ ಬಾದಶಹನು ಜಾಡ್ಯಗೆ ಪರೀಕ್ಷೆಯನ್ನು ಮಾಡಲಿಕ್ಕೂ ಔಷ ಧೋಪಚಾರಮಾಡಲಿಕ್ಕೂ ಪ್ರಸಿದ್ಧರಾದ ಧನ್ವಂತರಿಗಳನ್ನು ಕಳುಹಿಸಿಕೊ ಟ್ಟನು ಅದರಿಂದ ಏನೂ ಪ್ರಯೋಜನ ವಾಗಲಿಲ್ಲ ಬಾದಶಹನು ಸ್ವತಃನೋ ಡಲಿಕ್ಕೆ ಬಂದನು. ಆಗ ಬೀರಬಲನು ಅತಿತ್ರಾಣಗುಂದಿದವನಂತೆ " ಪೃಥ್ವಿ ನಾಥ ! ನನ್ನ ಆ ಯುರ್ಮರ್ಯೋದೆಯಾ ಕಾಲವು ಸಮೀಪಿಸಿದಂತೆ ಕಾಣು ತ್ತದೆ, ಇನ್ನು ನಾನು ಬಹಳ ದಿವಸ ಬದುಕುವದಿಲ್ಲ, ” ಎಂದು ಕ್ಷೀಣಸ್ವರ ದಿಂದ ಮಾತಾಡಿದನು ಬಾದಶಹನು ಧೈರ್ಯಹೇಳಿ “ಛೇ; ನೀನು ಎದೆಯೊ ಡಕೊಳ್ಳಬೇಡ ! ನಿನಗೆ ಬೇಗನೆ ರೋಗವು ವಾಸಿಯಾಗುವದು ನೀನಿಲ್ಲದಿದ್ದರೆ ನನ್ನ ಅವಸ್ಥೆಯು ಏನಾಗುತ್ತದೆಂಬದು ಪರಮೇಶ್ವರನು ಬಲ್ಲನು ” ಎಂದ ನು ಅದಕ್ಕೆ ಬೀರಬಲನು- ಮಾನ್ಯವರ : ಈಶ್ವರೇಚ್ಛೆಗೆ ಉಪಾಯವಿಲ್ಲ; ಅವನ ಅಪ್ಪಣೆಯನ್ನು ಮೀರಲಸಾಧ್ಯವು ನನ್ನಿಂದ ಏನಾದರೂ ಅಪರಾಧ ಗಳುಂಟಾಗಿದ್ದರೆ ಕ್ಷಮಿಸಬೇಕು; ಮತ್ತು ನಾನು ಮರಣ ಹೊಂದಿದಮೇಲೆ ನನ್ನ ಸತಿಸುತರ ಯೋಗಕ್ಷೇಮವನ್ನು ನಡೆಯಿಸಬೇಕು ಎಂದು ಪ್ರಾರ್ಥ ನೆಮಾಡಿಕೊಂಡನು ಅದನ್ನು ಕೇಳಿ ಬಾದಶ ಹನು ದುಃಖಿತನಾಗಿನಿನ್ನ ಅಪೇಕ್ಷೆ ಯನ್ನು ಪೂರ್ಣ ಮಾಡುತ್ತೇನೆಂದು ಹೇಳಿ ಹೊರಟು ಬಂದನು ಅದೇದಿವಸ ರಾತ್ರಿಯಲ್ಲಿ ಬೀರಬಲನು ಮರಣ ಹೊಂದಿದನೆಂಬ ವಾರ್ತೆಯು ನಗರವನ್ನೆ ಲ್ಲ ವ್ಯಾಪಿಸಿತು ನೆರೆಹೊರೆಯವರು ಬಂದು ಕೂಡಿದರು ಬೀರಬಲನು ತನ್ನ ಆಕಾರದಷ್ಟು ಆಕಾರವುಳ ಒಂದು ಸಿಸ್ಟಪ್ರತಿಮೆಯನ್ನು ಮಾಡಿಟ್ಟು, 66