ಅಂತರ್ಗಹದಲ್ಲಿ ಯಾರಿಗುತಿಳಿಯದಂತೆ ಕುಳಿತುಬಿಟ್ಟನು ಆಪ್ತರು ನೆ ರೆದರು ಸ್ಮಶಾನ ಯಾತ್ರೆಯನ್ನು ಪೂರೈಸಿ ಬಿಟ್ಟರು ಈಸಂಗತಿಯು ಅನ್ಯರಿ ಗೆತಿಳಿಯಗೊಡದಂತೆ ಜಾಗರೂಕತೆಯಿಂದ ವರ್ತಿಸಿರಿ ಎಂದು ತನ್ನ ಆಪ್ತೇಷ್ಟ ರಿಗೆಲ್ಲ ಕಟ್ಟಪ್ಪಣೆ ಮಾಡಿಬಿಟ್ಟನು ಬೀರಬಲನ ಮರಣದ ವಾರ್ತೆಯು ಬಾದಶಹನಿಗೆ ತಿಳಿದ ಕೂಡಲೆ ಅವನು ಅತಿದುಃಖಪಟ್ಟನು ಆದರೆ ಮುಸ ಲ್ಮಾನ ಜಾತಿಯ ಮಂತ್ರಿಗಳಿಗೂ ಮುತ್ಸದ್ದಿಗಳಿಗೂ ಈ ವಾರ್ತೆಯನ್ನು ಕೇಳಿ ಸಂತೋಷಿತರಾದರು. ಅವರು ಸಕ್ಕರೆಯನ್ನು ಹಂಚಿದರು ಹಿಂದುಗ ಲಾದವರು ದುಃಖಿಸಿದರು ಎರಡು ದಿವಸ ಅನ್ನೋದಕಗಳನ್ನು ಸಹಸ್ವೀಕರಿ ಸಲಿಲ್ಲ; ಬಾದಶಹನು ಬೀರಬಲನ ಉತ್ತರ ಕ್ರಿಯಾದಿಗಳನ್ನು ಯಥಾಸಾಂ ಗವಾಗಿ ನಡೆಯಿಸುವಂತೆ ಅವನ ಮಗನಿಗೆ ಹೇಳಿ ಬಹಳದವ್ಯವನ್ನು ಕೊಟ್ಟ ನು ದಿವಸಗಳು ಹೆಚ್ಚು ಹೆಚ್ಚು ಹೋದಹಾಗೆ ಪ್ರಜೆಗಳಿಗೆ ವಿಸ್ಮರಣೆ ಯಾಗುತ್ತ ಬಂತು ಅವನ ಸ್ಥಾನದಲ್ಲಿ ಒಬ್ಬ ಯವನ ಮಂತ್ರಿಯು ನಿಯಮಿ ಸಲ್ಪಟ್ಟನು ಅವನ ಕಾರಭಾರಕ್ಕೆ ಪ್ರಜೆಗಳು ತ್ರಸ್ತರಾಗಿ ಬಿಟ್ಟರು ಪ್ರಜೆಗಳ ಸುಖದುಃಖಗಳನ್ನು ಕೇಳುವವರೇ ಇಲ್ಲವಾಗಿ ಹೋದರು ಈ ಪ್ರಕಾರ ಅಂತೂ ಇಂತೂ ದಶಮಾನಗಳು ಕಳೆದು ಹೋದವು. ಆಮೇಲೆ ಬೀರಬಲನು ತನ್ನ ಪುತ್ರನನ್ನು ಕರೆದು, ಸುಕುಮಾರನೇ ಸುತ್ತು ಮುತ್ತು ಒಂದು ಹರ ದಾರಿಯವರೆಗೆ ಪ್ರಕಾಶಮಾನವಾಗಿ ಕಾಣುವಂಥ ಏಳು ಅಂತಸ್ತುಗಳುಳ್ಳ ಒಂದು ಮನೆಯನ್ನು ಇಲ್ಲಿಗೆ ಸಮೀಪವಾಗಿರುವ ಗುಡ್ಡದ ಮೇಲೆ ಒಂದೇ ರಾತ್ರಿಯಲ್ಲಿ ಸಿದ್ಧ ಪಡಿಸು ” ಎಂದು ಹೇಳಿ ಒಂದು ಲಕ್ಷ ರೂಪಾಯಿಗಳ ನ್ನು ಅವನ ವಶಕ್ಕೆ ಕೊಟ್ಟನು. ಪುತ್ರನಾದರೂ ತಂದೆಯಂತೆ ಚತುರನಿದ್ದ ನು. ಅವನು ಎರಡು ದಿವಸಗಳ ವರೆಗೆ ಎಲ್ಲಪದಾರ್ಥಗಳನ್ನು ಗುಪ್ತ ರೀತಿ ಯಿಂದ ಸಂಗ್ರಹಿಸಿ ಇಟ್ಟುಕೊಂಡು ಒಬ್ಬ ಚತುರನಾದ ಶಿಲ್ಪಿಗನನ್ನು ಕರೆ ದು ಒಂದು ರಾತ್ರಿಯೊಳಗಾಗಿ ಏಳು ಉಪ್ಪರಿಗೆಗಳುಳ್ಳ ಒಂದು ಮನೆಯ ನ್ನು ಸಿದ್ಧಪಡಿಸಬೇಕೆಂದು ಹೇಳಿದನು ಅವನ ಅಪ್ಪಣಿಯ ಮೇರೆಗೆ ಕಾವ್ಯ ನಿರ್ಮಿತ ಗ್ರಹವು ಸಿದ್ಧವಾಯಿತು ಅದರ ಪ್ರಕಾಶವು ದೂರದ ವರೆಗೆ ವಸರಿ ಸುವಂತೆ ಹೊರಮಲ್ಗಲಿಗೆ ದೊಡ್ಡದೊಡ್ಡ ಕನ್ನಡಿಗಳು ಹಚ್ಚಲ್ಪಟ್ಟವು ಒಳ ಮಗ್ಗುಲಲ್ಲಿ ಅಂದವಾದ ಬಣ್ಣವನ್ನು ಹಚ್ಚಿಸಿ ಬಿಟ್ಟಿದ್ದನು. ಈ ಪ್ರಕಾರ ಗೃ ಹಸಿದ್ಧತೆಯಾದ ಕೂಡಲೆ ಅದೇ ದಿವಸ ರಾತ್ರಿಯಲ್ಲಿ ಬೀರಬಲನು ಅತ್ಯುತ್ಕೃಷ್ಟ ವಾದ ವಸ್ತ್ರಾಲಂಕಾರಗಳಿಂದ ಮಂಡಿತನಾಗಿ ಆಮಹಲಿನಲ್ಲಿ ಹೋ ಗಿ ಕುಳಿತುಕೊಂಡನು ಮರುದಿವಸ ಓಲಗವು ನೆರೆಯುವ ನಿಯತ ಸಮಯ S
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೦
ಗೋಚರ