ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೯೦
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ಕ್ಕೆ ಬೀರಬಲನು, ನೂತನ ಗೃಹದಿಂದ ಹೊರಬಿದ್ದು ಪಟ್ಟಣವನ್ನು ಪ್ರವೇ ಶಿಸಿದನು ಅವನ ಪರಿಚಯವು ಹತ್ತದೇ ಹೋಯಿತು ನೆರೆದ ಸಭೆಯ ನಡುವೆ ಬಾದಶಹನ ಸಮ್ಮುಖ ಲ್ಲಿ ಹೋಗಿ ನಿಂತುಕೊಂಡು ಬಿಟ್ಟನು ನಿಯೋಗಿಗ ಳೆಲ್ಲರೂ ತಮ್ಮ ತಮ್ಮ ಕೆಲಸಳನ್ನು ಬಿಟ್ಟು ಇವನ ಕಡೆಗೆ ನೋಡುತ್ತ ಕುಳಿ ತುಕೊಂಡು ಬಿಟ್ಟರು ಯಾರಿಂದಲೂ ಅವನಿಗೆ ಪ್ರಶ್ನೆ ಮಾಡುವ ಸಾಹಸ ವಾಗಲಿಲ್ಲ ಕಡೆಗೆ ಬಾದಶಹ ಸಾಹಸ ಮಾಡಿ " ತಾವು ಯಾರು ! ಇಲ್ಲಿಗೆ ಯಾಕೆ ಆಗಮಿಸಿದಿರಿ ? ಬಂದ ಉದ್ದೇಶವೇನು?” ಎಂದು ಪ್ರಶ್ನೆ ಮಾಡಿದನು ಬಾದಶಹನು ಈ ಪ್ರಕಾರ ಪ್ರಶ್ನೆಗಳನ್ನು ಮಾಡಿದ್ದನ್ನು ಕೇಳಿ, ಬೀರಬಲ ನು- ಪೃಥ್ವಿನಾಥ ! ನಾನು ತಮ್ಮ ಆಶ್ರಯದಲ್ಲಿದ್ದ ಬೀರಬಲನೆಂಬವನು, ಎಂದು ಉತ್ತರಕೊಟ್ಟನು ಅದನ್ನು ಕೇಳಿ ಬಾದಶಹನು ಅತ್ಯಾಶ್ಚರ್ಯವು ಳ್ಳವನಾಗಿ, ನೀನು ನನ್ನ ಮಂತ್ರಿಯಾಗಿದ್ದ ಬೀರಬಲನೇ ! ನೀನು ಮರಣ ಹೊಂದಿದ್ದಿಲ್ಲವೇ : ಹೀಗಿದ್ದು ಪುನರಸಿ ಜೀವಂತನಾಗಿ ಬಂದದ್ದು ಹ್ಯಾಗೆ ? ಎಂದು ಕೇಳಿದನು ಅದಕ್ಕೆ ಬೀರಬಲನು, ಭೂಮೀಶ ! ನಾನು ಮರಣಹೊಂ ದಿದ್ದು ನಿಜವು ಸ್ವರ್ಗಲೋಕಕ್ಕೆ ಹೋಗಲು ದೇವೇಂದ್ರನು ನನ್ನನ್ನು ತನ್ನ ಅಮಾತ್ಯ ಪದವಿಯಲ್ಲಿರಿಸಿಕೊಂಡನು ನನಗೆ ಅದಕ್ಕೂ ಹೆಚ್ಚಿಗೇನು ಬೇಕಾ ಗಿದೆ ? ನನಗೆ ಅಲ್ಲಿ ಊಟ ಉಡಿಗೆಗಳಿಗೆ ಕೊರತೆಯಿಲ್ಲ, ನೂರಾರುಜನ ಸು ರಸುಂದರಿಯರು ನನ್ನ ಸೇವೆಯಲ್ಲಿ ತತ್ಪರರಾಗಿರುವರು ಅಮೃತ ಪ್ರಾಶನ ಮಾಡಲಿಕ್ಕೆ ಸಿಗುತ್ತದೆ ನನಗೆ ಆ ಲೋಕದಲ್ಲಿ ಉಂಟಾಗಿದ್ದ ಸುಖಸಂಪತ್ತಿ ಗಳನ್ನು ವರ್ಣಸುವದಸಾಧ್ಯವು ಎಂದನು ಬಾದಶಹನು ಹೀಗಿದ್ದರೆ ಅಂಥಾ ಸುಖವನ್ನು ಬಿಟ್ಟು ಇಲ್ಲಿಗೆ ಯಾಕೆಬಂದಿ ? ಎಂದು ಕೇಳಿದನು ಬೀರಬಲ ತಾವು ನನ್ನ ಪುರಾತನದ ಸ್ವಾಮಿಗಳು, ಆದ್ದರಿಂದ ನಿಮ್ಮ ಅಪ್ಪಣೆಯನ್ನು ಪಡೆದುಕೊಂಡು ಹೋಗಬೇಕೆಂದು ಬಂದಿದ್ದೇನೆ, ಮತ್ತು ತಮ್ಮ ಸಲುವಾಗಿ ಒಬ್ಬ ಆಪ್ಸರೆಯನ್ನು ಕರೆತಂದಿದ್ದೇನೆ. ಅವಳು ತನ್ನ ಅಂದವಾದ ಗೃಹದೊ ಡನೆ ಇಲ್ಲಿಗೆ ಸಮೀಪವಾಗಿರುವ ಗುಡ್ಡದ ಮೇಲೆ ವಾಸಮಾಡಿರುವಳು ಈಗ ತಾವು ನನ್ನೊಡನೆ ದಯಮಾಡಿಸಿದರೆ ತೋರಿಸುವೆನು ಎಂದನು.
ಬಾದಶಹನು ಇವನವಚನಗಳಿಗೆ ಮಾನ್ಯ ಮಾಡಿದನು. ಮತ್ತು ಆಲೋ ಸಿದ್ದೆನಂದರೆ ಅವನು ಮೃತಪಟ್ಟು ಸ್ವಲ್ಪ ಹೆಚ್ಚು ಕಡಿಮೆ ಒಂದು ವರುಷವಾ ಗುತ್ತ ಬಂತು ನನ್ನ ಅಪ್ಪಣೆಯನ್ನು ಪಡೆದುಕೊಳ್ಳುವದಕ್ಕೆ ಬಂದಿರಬಹುದು ಅದರಸಲುವಾಗಿ ಅಪ್ಸರೆಯ ರೂಪದ ಕಾಣಿಕೆಯನ್ನು ಸಮರ್ಪಿಸಲು ತಂದಿ ರಬಹುದು ಎಂದು ನಿಶ್ಚಯಿಸಿಕೊಂಡು ಅವನ ವಚನದ ಸತ್ಯಾಸತ್ಯತೆಯ ನಿ