ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೨೯೧

ರ್ಣಯ ಮಾಡುವದರಸಲುವಾಗಿ ನೂತನಮಂತ್ರಿಯನ್ನೂ ಅನ್ಯ ನಿಯೋಗಿ ಗಳನ್ನೂ ಕೊಟ್ಟು ಕಳುಹಿಸಿದನು, ಬೀರಬಲನು ತುರಗಾರೂಢನಾಗಿ ಆ ಜ ನರ ಹಿಂದೆ ಹಿಂದೆ ಹೊರಟನು ಗುಡ್ಡವು ಸಮೀಪಿಸಿದಕೂಡಲೆ ಅದರ ಅಡಿಯ ಲ್ಲಿ ನಿಂತುಕೊಂಡು ಮಹಲಿನಕಡೆಗೆ ತೋರಿಸಿ, “ ನೋಡಿರಿ; ಆ ಗೃಹದ ಏಳ ನೇ ಅಂತಸ್ತಿನಲ್ಲಿ ಅಪ್ಸರೆಯು ಕುಳಿತುಕೊಂಡಿದ್ದಾಳೆ ನಾವು ಇಷ್ಟು ಜನಗ ಳು ಏಕತ್ರರಾಗಿ ಬಂದದ್ದರಿಂದ ನಮ್ಮ ಕಡೆಗೆ ನೋಡಹತ್ತಿದ್ದಾಳೆ, ಅವಳ ಮುಖವು ಚಂದ್ರ ಬಿಂಬವನ್ನು ಹೀಯಾಳಿಸುತ್ತಿರುವದು ನೋಡಿದಿರಾ ಅವ ಳು ನಿಮ್ಮ ನೇತ್ರಗಳಿಗೆ ಗೋಚರಿಸಿದಳಲ್ಲವೇ ! ಒಂದುವೇಳೆ ಗೋಚರಿಸದಿ ದ್ದರೆ ಚನ್ನಾಗಿ ಲಕ್ಷ್ಯವಿಟ್ಟು ನೋಡಿರಿ, ಯಾಕಂದರೆ ಬಾದಶಹನಿಗೆ ನಿಜಸಂ ಗತಿಯನ್ನು ನೀವು ಹೇಳಬೇಕಾಗುತ್ತದೆ ” ಎಂದನು. ಆ ಜನಸಮೂಹದಲ್ಲಿ ಪ್ರತಿಷ್ಠಿತರಾದ ಅನೇಕಜನ ಗೃಹಸ್ಥರಿದ್ದರು ಅವರು ಮನಸ್ಸಿನಲ್ಲಿ ಬೀರ ಬಲನು ಭೂತವಾಗಿ ಬಂದಿರಬಹುದೇನು ! ಇವನ ವರ್ಣನಾನುಸಾರವಾಗಿ ಸುಂದರವೂ ಮನೋಹರವೂ ಆಗಿದ್ದ ಗೃಹವೊಂದು ದೃಗ್ಗೋಚರಿಸಹತ್ತಿದೆ ಯೇ ಹೊರತು ಅಪ್ಸರೆಯೆಂಬುವಳು ತೋರಲೊಲ್ಲಳು ಎಂದು ಬೀರಬಲನಂ ನು ಕುರಿತು ತಾವು ಹೇಳಿದಸಂಗತಿಯಲ್ಲಿ ಗೃಹದೆ, ಕಾಣಬರುತ್ತದೆ ಹೊರತು ಅಪ್ಸರೆಯು ಕಾಣಿಸುವದಿಲ್ಲವಲ್ಲಾ ಎಂದು ಕೇಳಿದರು. ಆಗ ಬೀರ ಬಲನು " ಅಹುದಹುದು; ನಾನು ಹೇಳುವಾಗ ಕೆಲವು ಸಂಗತಿಗಳನ್ನು ಮರೆತು ಬಿಟ್ಟೆನು. ಏನಂದರೆ ಅವಳು ಸ್ವರ್ಗಲೋಕದವಳಾದ್ದರಿಂದ ಈ ಭೂಲೋಕ ದ ಬಾವಿಗಳಿಗೂ, ವರ್ಣಸಂಕಲಿತವಾಗಿ ಹುಟ್ಟಿದಮನುಷ್ಯರಿಗೂ ದೃಗೊ ಚರಿಸಲಾರಳು; ಆದ್ದರಿಂದ ಸತ್ಯಶುದ್ಧಿಯುಳ್ಳವರು ಮುಂದೆಬಂದು ಚನ್ನಾಗಿ ಅವಲೋಕಿಸಿರಿ ಎಂದು ಹೇಳಿದನು. ಅವನ ಕಥನಾನುಸಾರವಾಗಿ ಅವರು ಒಳ್ಳೆ ಸೂಕ್ಷ್ಮದೃಷ್ಟಿಯಿಂದ ಅವಲೋಕಿಸಹತ್ತಿದರು ಯಾರಿಗೂ ಕಂಡು ಬರಲಿಲ್ಲ; ಆದರೆ ತಮ್ಮ ಗೌರವಕ್ಕೆ ಕುಂದುಬರುವದೆಂಬ ಆಶಂಕೆಯಿಂದ ವಾ ಹವ್ವಾ ; ವಾಹಾವ್ವಾ ! ಎಂಥ ಸುಂದರಮುಖವಿರುವದು ಇಂಥ ಸುಂದರಮು ಖವು ಈ ಭೂಲೋಕದಲ್ಲಿ ಗೋಚರಿಸುವದು ಅಸಂಭವವು ಎಂದು ಆಶ್ಚರ್ಯ ಪಡಹತ್ತಿದರು. ಬೀರಬಲನು ಆ ಜನರ ಮೂರ್ಖತೆಯನ್ನು ಕಂಡು ಮನಸ್ಸಿ ನಲ್ಲಿಯೇ ಹಾಸ್ಯ ಮಾಡುತ್ತ ಆ ಜನರನ್ನು ಕುರಿತು, ತಾವು ಅವಲೋಕಿಸಿದ ಸಂಗತಿಯನ್ನು ಬಾದಶಹನ ಸಮ್ಮುಖದಲ್ಲಿ ಹೇಳಲಿಕ್ಕೆ ಯಾವಪ್ರಕಾರದ ಆತಂಕವೂ ಇರುವದಿಲ್ಲವಲ್ಲಾ ಎಂದು ಕೇಳಿದನು. ಅದಕ್ಕೆ ಅವರು ಏನೂ ಆತಂಕವಿಲ್ಲ; ನಾವು ಪ್ರತ್ಯಕ್ಷ ಕಂಡನ್ನು ಕಥನಮಾಡಲಿಕ್ಕೆ ಭಯವೇನು