ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೩೯)
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೦೫



ಕಿಸುವದನ್ನು ಬಿಟ್ಟು ಸ್ವಸ್ಥವಾಗಿ ನಿದ್ರೆಮಾಡು! ನಾಳೆದುದಯದಲ್ಲಿ ಮಂ ತ್ರಿ ಪ್ರಸಾದದ ಹತ್ತಿರಬಂದು ನನ್ನನ್ನು ವಿಚಾರಿಸು ನನ್ನ ಹೆಸರು ಬೀರಬಲನು ಎಂದುಹೇಳಿ ಹೊರಟುಬಂದನು ವೃದ್ಧನು ಆ ಮಾತುಗಳನ್ನು ಕೇಳಿ ದಂಗುಬಡೆದು ನಿಂತನು ಮರುದಿವಸ ವೃದ್ಧನು ಬೀರಬಲನ ಗೃಹಕ್ಕೆ ಬಂದನು ಆಗ ಬೀರಬಲನು ಅವನನ್ನು ಕರೆದುಕೊಂಡು ಹೋಗಿ, ನಿನ್ನೆ ರಾತ್ರಿ ಶೋಕಿಸುತಿದ್ದ ಕಾರಣವೇನೆಂದು ಕೇಳಿದೆನು. ಆಗ ಆ ವೃದ್ಯನು ಮಂತ್ರಿವರನೇ ! ನಿನ್ನೆ ರಾತ್ರಿಯಲ್ಲಿ ತಮ್ಮ ಪರಿಚಯವು ನನಗೆ ಹತ್ತದೆ ಹೋಯಿತು ಆ ಕಾಲದಲ್ಲಿ ನನ್ನ ಮುಖದಿಂದ ಏನಾದರೂ ಅನುಚಿತ ಭಾಷಣಗಳು ಹೊರಟಿದ್ದರೆ ಕ್ಷಮಿಸಬೇಕು ಎಂದನು. ಅದಕ್ಕೆ ಬೀರಬಲನು, “ ಅಯ್ಯಾ! ಇದರಲ್ಲ್ಲಿ ಕ್ಷಮೆಯನ್ನು ಯಾಚಿಸುವ ಕಾರಣವೇ ಇಲ್ಲ ಅಂಧಕಾರವಿದ್ದದರಿಂದ ನನ್ನ ಪರಿಚಯವು ಸಿಗದೇ ಹೋದದ್ದು, ನಿನ್ನ ಅಪರಾಧವಲ್ಲ ; ಒಳ್ಳೇದು, ನೀನು ಶೋಕಿಸುತ್ತಿದ್ದ ಕಾರಣವೇನು! ಎಂದು ಕೇಳಿದನು ಈ ಮಾತಿಗೆ ಆ ವೃದ್ಧನು “ ದಿವಾನ ಸಾಹೇಬ ! ನಾನೊಬ್ಬ ಕೈಕೆಲಸದವನು ನನ್ನನ್ನು ಪಾಲನ ಪೋಷಣ ಮಾಡುವಂಥ ಒಬ್ಬ ಮಗನು ಮೃತ್ಯುವಿನ ಬಾಯಿಗೆ ತುತ್ತಾಗಿ ಈಗ ಒಂದೆರಡು ತಿಂಳಾಗುತ್ತ ಬಂತು. ವೃದ್ಧನಾದ ನನ್ನಿಂದ ಪರಿಕ್ರಮ ಮಾಡುವದು ಅಸಾಧ್ಯವಾದ್ದರಿಂದ ಹೊಟ್ಟೆಗಿಲ್ಲದೆ ಬಳಲ ಹತ್ತಿದ್ದೇನೆ, ಈಗ ನಾಲ್ಕಾರು ದಿವಸಗಳಿಂದಂತೂ ಅರಹೊಟ್ಟೆಯಿಂದ ಕಾಲಹರಣ ಮಾಡಿದ್ದೇನೆ, ಈಗೆರಡು ದಿವಸಗಳಿಂದಂತೂ ಆಹಾರದ ಮುಖವನ್ನೇ ನೋಡಿಲ್ಲ ನಾಳೆಗೆ ಮೂರನೇಯಪವಾಸವು. ಈ ಪ್ರಕಾರನನ್ನದು ಸ್ಥಿತಿಯಿರುದು. ನಿನ್ನಿನ ದಿವಸ ಕ್ಷುದ್ಭಾದೆಯು ಅತಿಶಯವಾದ್ದರಿಂದ ಸಹನ ಮಾಡಲಸಮರ್ಥನಾಗಿ ರೋದಿಸಹತ್ತಿದ್ದೆನು” ಎಂದು ಹೇಳಲು ಬೀರಬಲನು ದಯಾರ್ದ ಹೃದಯನಾಗಿ ಅವನಿಗೆ ಆಹಾರಸಾಮಗ್ರಿಯನ್ನು ತಂದುಕೊಟ್ಟನು ಆಮೇಲೆ ವೃದ್ಧನೇ ? ನಿನಗೆ ಇನ್ನು ಹದಿನೈದು ದಿವಸ ಸಾಕಾಗುವಷ್ಟು ದ್ರವ್ಯವನ್ನು ಕೊಡುತ್ತೇನೆ ಆ ಅವಧಿಯೊಳಗಾಗಿ ನೀನು ಒಂದು ಕಲ್ಲುಸಕ್ಕರೆಯ ಹರಳನ್ನು ತೆಗೆದುಕೊಂಡು ನಿನ್ನ ಶಲತನದಿಂದ ಅದನ್ನು ರತ್ನದಂತೆ ಮಾಡು ಚೆನ್ನಾಗಿ ಪರೀಕ್ಷೆ ಮಾಡದ ಹೊರತು, ಯಾರಿಗೂ ತಿಳಿಯಬಾರದು ? ಹೀಗೆ ಸಿದ್ಧಮಾಡಿಕೊಂಡು ಹದಿನಾಲ್ಕನೇ ದಿವಸ ನನ್ನ ಬಳಿಗೆ ಬಾ” ಎಂದುಹೇಳಿ ಕಳುಹಿಕೊಟ್ಟನು. ಆ ವೃದ್ಧನು ಬಹು ಸಂತೋಷಿತನಾಗಿ ಮನೆಗೆ ಬಂದು ತನ್ನ ಕುಶಲತನದಿಂದ ಒಂದು ರತ್ನವನ್ನು ಸಿದ್ಧಪಡಿಸಿಕೊಂಡು ಹದಿನಾಲ್ಕುನೇ ದಿವಸ ಬೀರಬಲನ ಬಳಿಗೆ ಬಂದನು. ಅದನ್ನು ನೋಡಿ ಬೀರಬಲನು ಅವನ ಜಾಣತನಕ್ಕೆ ತಲೆದೂಗಿದನು. ಮರುದಿವಸ ಆ ಹರಳನ್ನು ತೆಗೆದುಕೊಂಡು