ಬಾದಶಹನ ಸನ್ನಿಧಿಗೆ ಬಂದನು, ಆಗ ಬಾದಶಹನು ಓಹೋ ಹೋ ! ಬೀರಬಲ್ಲ ಈ ದಿವಸ ನೀನು ಶೀಘ್ರವಾಗಿ ಸಭೆಗೆ ಬಂದಿರುವಿಯಲ್ಲಾ ಎಂದು ಕೇಳಿದನು, ಆ ಕೂಡಲೆ ಬೀರಬಲನು " ಸರಕಾರ ? ಈ ಮನುಷ್ಯನು ಒಂದು
ಅತ್ಯುತ್ತಮವಾದ ರತ್ನವನ್ನು ತಂದುಕೊಟ್ಟಿದ್ದಾನೆ. ಅದು ತಮ್ಮ ಬಳಿಯಲ್ಲಿ
ರುವದಕ್ಕೆ ಯೋಗ್ಯವಾಗಿದೆ” ಎಂದನು. ಬಾದಶಹನು ಅದನ್ನು ತನ್ನ ಕಡೆಗೆ
ತೆಗೆದುಕೊಂಡು ಚನ್ನಾಗಿ ಪರೀಕ್ಷಿಸಿ, ರತ್ನವಂತೂ ಅತ್ಯುತ್ತಮವದೆ ಇನ್ನು
ಎರಡು ತಾಸಾದಬಳಿಕ ಬೆಟ್ಟಿಯಾಗೆಂದು ಆ ಶಿಲ್ಪ ಕಾರನಿಗೆ ಹೇಳು ಎಂದನು.
ಅದನ್ನು ಕೇಳಿ ಆ ವೃದ್ಧನು ಹೊರಟುಹೋದನು. ಆಮೇಲೆ ಈ ರತ್ನವನ್ನು
ಜಾಣರಿಂದ ಪರೀಕ್ಷಿಸಿ ನೋಡಬೇಕು ? ಅಲ್ಲಿಯವರೆಗೆ ಇದು ನನ್ನ ಬಳಿಯಲ್ಲಿಯೇ ಇರಲಿ ಎಂದು ಬೀರಬಲನಿಗೆ ಹೇಳಿ, ಉಳಿದ ರಾಜಕರಣಗಳಲ್ಲಿ ಮನವನ್ನು ಹಾಕಿದನು. ಮುಂದೆ ಎರಡುತಾಸು ಆದಮೇಲೆ ಆ ಶಿಲ್ಪಿಯುಬರಲು
ಬೀರಬಲನು- ಪೃಥ್ವಿನಾಥ ? ಆ ರತ್ನದವನು ಬಂದಿದ್ದಾನೆ ಎಂದು ಹೇಳಿದನು. ಆ ಕೂಡಲೆ ಬಾದಶಹನು ರತ್ನವನ್ನು ಶೋಧಮಾಡಹತ್ತಿದನು, ಯೆಲ್ಲಿಯೂ ಸಿಕ್ಕಲಿಲ್ಲ. ಆಗ ಬೀರಬಲನಿಗೆ ಬೀರಬಲ ! ಆ ರತ್ನವನ್ನು ನಿನ್ನ ಸ್ವಾಧೀನ
ಪಡಿಸಲಿಲ್ಲವೇ ಎಂದು ಕೇಳಿದನು. ಸರಕಾರ ! ನನ್ನ ಕಡೆಗೆ ಕೊಡಲಿಲ್ಲ
ಅದನ್ನು ಚನ್ನಾಗಿ ಪರೀಕ್ಷಿಸಬೇಕೆಂದು ತಾವೇ ಇಟ್ಟು ಕೊಳ್ಳಲಿಲ್ಲವೇ, ಎಂದು
ಬೀರಬಲನು ನುಡಿದನು. ( ಈ ಪೂರ್ವದಲ್ಲಿಯೇ ಆ ರತ್ನವನು ಬೀರಬಲನು ನುಂಗಿಬಿಟ್ಟಿದ್ದನು) ಎಷ್ಟು ಹುಡುಕಿದರೂ ಶೋಧವಾಗದಿರಲು ಬಾದಶಹನು- ರತ್ನದ ಯಜಮಾನನು ಎಷ್ಟು ಬೆಲೆಯನ್ನು ಹೇಳುವನೋ ಅಷ್ಟು
ದ್ರವ್ಯವನ್ನು ಕೊಟ್ಟುಬಿಡು, ವ್ಯರ್ಥ ಚರ್ಚೆ ಮಾಡುತ್ತ ಕುಳಿತುಕೊಳ್ಳಬೇಡ
ಎಂದು ಅಪ್ಪಣೆ ಮಾಡಲು ಬೀರಬಲನು ಆ ವೃದ್ಧನನ್ನು ಕುರಿತು ರತ್ನದ ಬೆಲೆಯನ್ನು ಹೇಳು ಎಂದನು, ಆ ವೃದ್ಧನು ಎರಡುಸಾವಿರ ರೂಪಾಯಿಗಳನ್ನು
ಕೊಡಬೇಕು ಮತ್ತು ಶ್ರಮದ ಫಲವೆಂದು ಐವತ್ತು ರೂಪಾಯಿಗಳನ್ನು ಕೊಡಬೇಕು ಎಂದು ಹೇಳಿದನು ಆಗ ಬೀರಬಲನು ಛೇ, ಛೇ, ಅಷ್ಟು ಬೆಲೆ ಬಾಳತಕ್ಕ ರತ್ನವಲ್ಲ; ಒಂದುನೂರು ರೂಪಾಯಿಗಳನ್ನು ತೆಗೆದುಕೊ ಎಂದು
ಅವನೊಡನೆ ಚರ್ಚೆನಡಿಸಿದನು, ಅದನ್ನು ಕಂಡು ಬಾದಶಹನು ವೃದ್ಧನು
ಏನನ್ನುತ್ತಾನೆ ಎಂದು ಕೇಳಿದನು. ಅದಕ್ಕೆ ಪ್ರತ್ಯುತ್ತರವಾಗಿ ಬೀರಬಲನು
ಖಾವಂದ ? ಈ ವೃದ್ಧನು ಎರಡುಸಾವಿರ ರೂಪಾಯಿಗಳನ್ನು ಬೆಲೆಯಾಗಿ
ಕೊಡಬೇಕೆಂದೂ, ಶ್ರಮದ ಫಲವೆಂದು ಎರಡು ನೂರು ರೂಪಾಯಿಗಳನ್ನೂ
ಕೇಳುತ್ತಾನೆ, ನಾನು ಶ್ರಮದಫಲವನ್ನು ಒಂದುನೂರು ರೂಪಾಯಿಗಳನ್ನು
ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೭೭
ಗೋಚರ
ಈ ಪುಟವನ್ನು ಪ್ರಕಟಿಸಲಾಗಿದೆ
೩೦೬
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.