ತೆಗೆದುಕೋ ಎಂದು ಹೇಳಿದೆನು ಅದಕ್ಕೆ ಅವನು ಸಮ್ಮತಿಸದೆ ನನ್ನ ರತ್ನವನ್ನು ನನಗೆ ಕೊಡಿಸಿಬಿಡಿರಿ ಎಂದು ಹಟಹಿಡಿದು ಕುಳಿತಿದ್ದಾನೆ ಎಂದುಹೇಳಿದನು. ಆಗ ಬಾದಶಹನು ಉದಾರಮನಸ್ಸಿನಿಂದ ಅವನು ಹೇಳಿದಷ್ಟು ಹಣವನ್ನು ಕೊಟ್ಟುಬಿಡು ಎಂದು ಕೋಶಾಧ್ಯಕ್ಷನಿಗೆ ಅಪ್ಪಣೆಮಾಡಿದನು ಆ ವೃದ್ದನು
ಬಹಳ ಪ್ರಸನ್ನನಾಗಿ ಬೀರಬಲನಿಗೆ ಆಶೀರ್ವಾದಗಳನ್ನು ಮಾಡುತ್ತ
ಮನೆಗೆ ಹೊರಟುಹೋದನು, ಸಭಾವಿಸರ್ಜನೆಯಾದ ಬಳಿಕ ಬೀರಬಲನು
ಗೃಹಕ್ಕೆ ಹೋಗುವ ಮಾರ್ಗದಲ್ಲಿ ಆ ವೃದ್ಧನು ಬೆಟ್ಟಿಯಾಗಿ " ಮಂತ್ರಿವರ್ಯನೇ ! ನಿನ್ನ ಬುದ್ಧಿಗೆ ಬೆಲೆಯಿಲ್ಲ, ತಾವು ಈ ಪ್ರಕಾರ ಅನಾಥರಿಗೆ ಸಹಾಯ
ಮಾಡುತ್ತಿರುವದರಿಂದ ದೇವರು ನಿಮಗೆ ಅಕ್ಷಯ ಸುಖವನ್ನೀಯುತ್ತಾನೆ;
ಇದರಲ್ಲಿ ಏನೂ ಸಂದೇಹವಿಲ್ಲ” ಎಂದನು. ಈ ಮಾತಿಗೆ ಪ್ರತ್ಯುತ್ತರವಾಗಿ
ಬೀರಬಲನು “ ಪೂಜ್ಯನೇ ! ನಾನು ಇದರಲ್ಲಿ ಮಾಡಿದ ಕರ್ತೃತ್ವವೇನು ?
ಇದು ನಿನ್ನ ಚಾತುರ್ಯದ ಪರಿಣಾಮವು ” ಎಂದು ಹೇಳಿ ಅವನಿಂದ ಆಶೀರ್ವಚನವನ್ನು ಸ್ವೀಕರಿಸಿ ಮನೆಗೆ ಹೊರಟುಬಂದನು.
- (೧೭೧ ಬೀರಬಲನ ಮತ್ತು ಮೌರಕನು,)-
ಒಂದು ದಿವಸ ಅಮೀರಿನು, ಒಬ್ಬ ಹಿಂದೂ ಸ್ತ್ರೀಯಳ ಮೇಲೆ ಬಲಾತ್ಕಾರ ನಡೆಯಿಸಿದ್ದನು. ಆಗ ದೈವಯೋಗದಿಂದ ಪ್ರಚ್ಛನ್ನ ವೇಷಧಾರಿಯಾಗಿದ್ದ ಬೀರಬಲನು ಆ ಸ್ಥಳಕ್ಕೆ ಹೋದನು, ಆ ತರುಣ ಸರದಾರನು ಬೀರಬಲನನ್ನು ಗುರುತಿಸದೆ ಅಯ್ಯಾ! ನಿನ್ನ ಉಡಿಗೆ ತೊಡಿಗೆಗಳ ಮೇಲಿಂದ ಮುಸಲ್ಮಾನ ಜಾತಿಯವನಿದ್ದಂತೆ ಕಂಡುಬರುತ್ತದೆ ನೀನು ನಿಜವಾದ ಮುಸಲ್ಮಾನನಾಗಿದ್ದರೆ ಈ ಸಮಯದಲ್ಲಿ ನನಗೆ ಸ್ವಲ್ಪ ಸಹಾಯವನ್ನು ಮಾಡು; ಇವಳು ನನ್ನ ಹೆಂಡತಿಯು, ಒಬ್ಬ ಹಿಂದೂ ಮನುಷ್ಯನೊಡನೆ ಪಲಾಯನ ಮಾಡಬೇಕೆಂದು ಮಾರ್ಗ ಹಿಡಿದಿದ್ದಳು ಈ ಸಂಗತಿಯು ನನಗೆ ಬೇಗನೇ ತಿಳಿದುಬಂದದ್ದರಿಂದ ನಾನು ಇವಳಿಗೆ ನಿರ್ಬಂಧ ಪಡಿಸಿಕೊಂಡು ನಿಂತಿದೇನೆ, ಈಗ ಇವಳು ತಾನು ಹಿಂದೂ ಜಾತಿಯವಳೆಂದು ಹೇಳಹತ್ತಿದ್ದಾಳೆ ನೀನು ನನಗೆ ಸ್ವಲ್ಪ ಸಹಾಯಮಾಡಿದರೆ ಸಮೀಪದಲ್ಲಿರುವ ನನ್ನ ಗೃಹಕ್ಕೆ ಕರೆದುಕೊಂಡು ಹೋಗುವೆನು ” ಎಂದು ಹೇಳಿದನು. ಅದಕ್ಕೆ ಪ್ರತಿಯಾಗಿ ಬೀರಬಲನು, ಹೀಗಿರುವದೇ ? ಒಳ್ಳೇದು, ನಾನು ನಿನಗೆ ಸಹಾಯಮಾಡಿದರೆ ಆ ಶ್ರಮದಸಲುವಾಗಿ ನೀನು ನನಗೆ ಏನುಕೊಡುತ್ತೀ ? ಎಂದುಕೇಳಿದನು ಆ ತರುಣ ಸರದಾರನು, ಅಯ್ಯಾ ? ನಾನು ಸರದಾರಾಖ ನಾಮಕನಾದ ಅಮಿರನು ನನ್ನ ಖ್ಯಾತಿಯನ್ನು ನೀನು ಕೇಳಿರಬಹುದು, ಈ ನನ್ನ ಕೆಲಸ .