ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
೩೦೮
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.


ದಲ್ಲಿ ನೀನು ಪೂರ್ಣಸಹಾಯ ಮಾಡಿದರೆ ನಿನ್ನ ಮನಸ್ಸು ತೃಪ್ತವಾಗುವಂತೆ ಪಾರಿತೋಷಕವನ್ನು ಕೊಡುತ್ತೇನೆ, ” ಎಂದನು,
ಬೀರಬಲ-ಒಳ್ಳೇದು;" ನಾನು ಮೊದಲು ಈ ಸ್ತ್ರೀಯಳಿಗೆ ಕೆಲವು ಉಪದೇ ದ ಮಾತುಗಳನ್ನು ಹೇಳುತ್ತೇನೆ ಆಷ್ಟರಿಂದಲೇ ಕಾರ್ಯಸಾಧ್ಯವಾ ದರೆ ಉತ್ತಮ, ಇಲ್ಲದೆಹೋದರೆ ಹಿಂದಿನಿಂದ ನಾವುಮಾಡತಕ್ಕದ್ದನ್ನು ಮಾಡಿಬಿಡೋಣ, ನೀನು ಕಿಂಚಿತ್ ದೂರಹೋಗಿ ನಿಂತುಕೊ,
ಆ ಕಾಮಾಂಧನಾದ ಅಮೀರನು ಇವನಮಾತಿಗೆ ಸಮ್ಮತಿಸಿ, ಕಿಂಚಿತ್ ದೂರದಲ್ಲಿ ಹೋಗಿ ನಿಂತುಕೊಂಡನು. ಆಗ ಬೀರಬಲನು ಆ ಸ್ತ್ರೀಯಳನ್ನು ದ್ದೇಶಿಸಿ, " ತನ್ವಂಗಿಯೇ ? ನೀನುಯಾರು, ನಿನ್ನ ಮಾತಾಪಿತೃಗಳುಯಾ ರು, ಎಂಬ ವೃತ್ತಾಂತವನ್ನು ಸತ್ಯಸತ್ಯವಾಗಿ ಹೇಳಿದರೆ ಈ ದುಮ್ಮನಬಂ ಧನದಿಂದ ನಿನ್ನನ್ನು ದಾಟಿಸುತ್ತೇನೆ, ನಾನು ಬೀರಬಲನು, ನಗರ ಸಂಚಾ ರಾರ್ಥವಾಗಿ ಪ್ರಚ್ಛನ್ನವೇಷದಿಂದ ಸಂಚರಿಸುತ್ತಿದ್ದೆನು ” ಎಂದನು. ಬೀರ ಬಲನ ಹೆಸರು ಕಿವಿಗೆ ಬಿದ್ದ ಕೂಡಲೇ ಅವಳಲ್ಲಿ ಅವಸಾನವು ಬಂತು.
ಆಗ ಅವಳು- ನಾನು ಒಬ್ಬಬ್ರಾಹ್ಮಣನ ಕನ್ಯೆಯು ಅವಿವಾಹಿತಳಾಗಿದ್ದೇ ನೆ ಈ ದುಷ್ಟನು ಎಷ್ಟೋದಿವಸಗಳಿಂದ ನನ್ನ ಸತೀತ್ವವನ್ನು ಭ್ರ ಷ್ಟಗೊಳಿಸಬೇಕೆಂದು ಹೊಂಚುಹಾಕಿ ಕುಳಿ ತುಕೊಂಡಿದ್ದನು ನನ್ನ ದುರದೃಷ್ಟದಿಂದ ಈ ದಿವಸ ಈ ದುಷ್ಟನ ಬಲೆಯೊಳಗೆ ಸಿಕ್ಕುಬಿ ದಿದ್ದೇನೆ ನನಗೆ ಮಹಾಲಕ್ಷ್ಮಿ ಎಂದು ಕರೆಯುವರು ತಾವು ಕರು ಣಾಳುಗಳಾಗಿ, ನನ್ನ ಮರ್ಯಾದೆಯನ್ನುಳಿಸಿದರೆ, ಜಗನ್ನಿಯಂತ ನು ನಿಮಗೆ ಅಖಂಡವಾದ ಸೌಖ್ಯವನ್ನೀಯುತ್ತಾನೆ” ಎಂದು ಪ್ರಾ ರ್ಥಿಸಿಕೊಂಡಳು ಆಗ ಬೀರಬಲನು ಅವಳಿಗೆ ಧೈರ್ಯ ಹೇಳಿ, ಆ ಸರದಾ ರನನ್ನ ಕರೆದು " ಸರದಾರಖಾನ ! ನೀನು ಪ್ರಜೆಗಳ ಪ್ರಾಣ, ಮತ್ತು ಧನಗಳನ್ನು ರಕ್ಷಿಸುವ ಕರ್ಮಚಾರಿಯಾಗಿದ್ದು ನಿರ್ದೋಷಿಯಾಗಿರು ವ ಬ್ರಾಹ್ಮಣಕನೈಯ ಮೇಲೆ ಬಲಾತ್ಕಾರವನ್ನು ಮಾಡ ಉದ್ಯುಕ್ತ ನಾಗಿರುವದು ಸರಿಯಲ್ಲ;
ಸರದಾರಖಾ-ಇವಳು ಅಸತ್ಯ ವಾದವನ್ನು ಮಾಡುತ್ತಾಳೆ.
ಬೀರಬಲ- ನೀನೇ ಅಸತ್ಯವಾದಿ ಯಾಗಿರುವಿ ಇವಳು ರಾಮಶಂಕರ ಶಾ ಸ್ತ್ರೀಯ ಕನ್ಯೆಯು ನನ್ನ ಎದುರಿಗೆ ನೀನು ಇವಳ ಅಂಗಸ್ಪರ್ಶ ಮಾ ಡಲಾರಿ! “ ಪರಸ್ತ್ರೀಯರಮೇಲೆ ಬಲಾತ್ಕಾರ ನಡೆಯಿಸಿದವನು, ಕಠಿ ಣತರವಾದ ಶಿಕ್ಷೆಗೆ ಗುರಿಯಗುವನು ” ಎಂಬ ಬಾದಶಹನ ಆಜ್ಞೆ