ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೧೫


ಡಹತ್ತಿವೆ. ಆರೇ ತಿಂಗಳಲ್ಲಿ ನನ್ನ ಗಡ್ಡಮೀಸೆಗಳು ಎಷ್ಟು ಬೆಳೆದಿರು ವವು ನೋಡಿದಿರಾ ! ನಾನು ಅಲ್ಲಿಂದ ಹೊರಟುಬರುವ ಕಾಲದಲ್ಲಿ ಅವ ರು ಒಳ್ಳೆ ನಮ್ರತೆಯಿಂದ ಒಬ್ಬ ನಾವಲಿಗನನ್ನು ಹ್ಯಾಗಾದರೂ ಮಾಡಿ ಕಳುಹಿಸು; ಎಂದು ನಮ್ರತೆಯಿಂದ ನನಗೆ ವಿಜ್ಞಾಪನೆಮಾ ಡಿಕೊಂಡಿದ್ದಾರೆ, ನಾನಂತೂ ನಿಜಸಂಗತಿಯನ್ನು ಸನ್ನಿಧಿಯಲ್ಲಿ ಅರಿ ಕೆಮಾಡಿಕೊಂಡಿದ್ದೇನೆ, ಇದರಮೇಲೆ ತಮ್ಮ ಚಿತ್ತಕ್ಕೆ ಬಂದಹಾಗೆ ಮಾಡಬೇಕು.

ಬಾದಶಹ-ನೀನು ಹೇಳಿದ್ದೆಲ್ಲಾ ಸತ್ಯವು ನಾನು ಅಲ್ಲಿಗೆ ಯಾರನ್ನು ಕಳು ಹಿಸಲಿ !

ಬೀರಬಲ-ಪೃಥ್ವಿನಾಥ ! ನಿಮ್ಮ ಈ ನಾವಲಿಗನು ತನ್ನ ಕಸವಿನಲ್ಲಿ ಒಳ್ಳೇ ಪ್ರಶಂಸೆಯನ್ನು ಪಡೆದಿದ್ದಾನೆ, ಅವನನ್ನೇ ಕಳುಹಿಸಿಕೊಟ್ಟರೆ ನೆಟ್ಟ ಗಾಗುವದು.
ಆ ಕೂಡಲೇ ಬಾದಶಹನು ನಾವಲಿಗನನ್ನು ಕರೆಯಿಸಿ ಸಮಗ್ರ ವೃತ್ತಾಂ ತವನ್ನು ಕಥನಮಾಡಿದನು. ಬೀರಬಲನು ಮರಳಿ ಬಂದದ್ದನ್ನು ಕಂಡು, ಆ ನಾವಲಿಗನಿಗೆ ಅತ್ಯಾಶ್ಚರ್ಯವಾಯಿತು ಇನ್ನು ತನ್ನ ಸರತಿಯು ಬಂದಿತೆಂದು ತಿಳಿದುಬಿಟ್ಟನು. ಆಗ ಬೀರಬಲನಂತೆ ಒಂದುಮಾಸದ ಅವಧಿಯನ್ನು ಪಡೆ ದುಕೊಂಡು ಎಲ್ಲಿಗಾದರೂ ಹೊರಟು ಹೋಗಬೇಕೆಂದು ಯೋಚಿಸಿದನು. ಮತ್ತು ಅದರಂತೆ ಬಿನ್ನ ಹಮಾಡಿಕೊಂಡನು. ಅದಕ್ಕೆ ಬಾದಶಹನು “ ನೀನು ಹೇಳುವದೆಲ್ಲಾ ನಿಜವು; ಆದರೆ ಅಲ್ಲಿ ಅವರು ಆಯುಷ್ಕರ್ಮವಿಲ್ಲದೆ ಬಹಳೇ ಪೇಚಾಡಹತ್ತಿದ್ದಾರಂತೆ ! ನೀನು ಬರುವವರೆಗೆ ನಿನ್ನ ಕುಟುಂಬ ಪೋಷಣೆಯ ಭಾರವನ್ನು ನಾನು ಸ್ವೀಕರಿಸುತ್ತೇನೆ ನೀನು ಬೇಗನೇ ಹೊರಡುವ ಸಿದ್ಧತೆಯನ್ನು ಮಾಡು” ಎಂದು ಅಪ್ಪಣೆಮಾಡಿದನು. ಆಗ ನಾವಲಿಗನು ತನ್ನ ಮನಸ್ಸಿನಲ್ಲಿ, ಎಂಟು ದಿವಸಗಳ ಅವಧಿಯನ್ನು ಕೊಟ್ಟರೆಸಾಕು ಹ್ಯಾಗಾದ ರೂ ಮಾಡಿ ಪಾರಾಗಿ ಹೋಗುತ್ತೇನೆ ಎಂದು ಯೋಚಿಸಿ, ಬಹುಪರಿಯಿಂದ ಪ್ರಾರ್ಥನೆಮಾಡಿಕೊಂಡು ಎಂಟು ದಿವಸಗಳ ಅವಧಿಯನ್ನು ಪಡೆದುಕೊಂಡನು, ಬಾದಶಹನಿಗೆ ಸಲಾಮುಮಾಡಿ ಹೊರಟುಹೋದನು; ಆದರೆ ಬೀರಬಲನಿಗೆ ಅವನು ಮನಸ್ಸಿನಲ್ಲಿ ಯೋಚಿಸಿಕೊಂಡಿದ್ದ ಕಪಟ ಪ್ರಬಂಧವೆಲ್ಲ ಅವನ ಮುಖಲಕ್ಷಣದ ಮೇಲಿಂದಲೇ ವಿದಿತವಾಯಿತು, ಆ ನಾವಲಿಗನ ಮೇಲೆ ಒಬ್ಬ ಚಾಣಾಕ್ಷನಾದ ಗೂಢಚಾರನನ್ನು ನಿಯಮಿಸಿ ಬಿಟ್ಟನು, ಅವನು ಆ ನಾವಲಿಗನ ಬೆನ್ನ ಹಿಂದಿನಿಂದಲೇ ಹೋಗಿ ಅವನ ಮನೆಯಮುಂದೆ ಕುಳಿತು