ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೪೯



ಬಾದಶಹ :- ಅದರಲ್ಲಿ ಪ್ರಯಾಸವೇನು ! ನಾನು ಇಂಥ ಬಲಾಡ್ಯ ಬಾದಶಹ ನಿಮ್ಮ ಔಷಧದ ಪದಾರ್ಥಗಳನ್ನು ಸಿದ್ಧಪಡಿಸಿಕೊಡಲಾರೆನೆ.

ಬೀರಬಲ :- ಪರಮೇಶ್ವರನ ಕೃಪೆಯಿಂದಲೇ ಯಾವತ್ತೂ ಸಿದ್ಧವಾಗುತ್ತದೆ ಆದರೆ ನಾನು ಹೇಳುವ ಪದಾರ್ಥಗಳನ್ನು ತರಿಸಿಕೊಡುವದು ಕಿಂಚಿತ್ ಪ್ರಯಾಸವೇ ಸರಿ; ಇರಲಿ ಆದರೆ ನೀವು ಪ್ರತಿಜ್ಞಾ ಪೂರ್ವಕವಾಗಿ ಹೀಗೆ ಲೇಖವನ್ನು ಬರೆದುಕೊಡಬೇಕಲ್ಲಾ ಒಂದುತಿಂಗಳೊಳಗಾಗಿ ನಾನು ನೀವು ಹೇಳುವ ಔಷಧೀ ಪದಾರ್ಥಗಳನ್ನು ತರಿಸಿಕೊಡದಿದ್ದ ಪಕ್ಷದಲ್ಲಿ ಬಂದಿಯಲ್ಲಿ ಇಟ್ಟಿರುವ ಯಾವತ್ತು ವೈದ್ಯರನ್ನು ಬಿಟ್ಟು ಬಿಡುತ್ತೇನೆ, ಮತ್ತು ನಿಮ್ಮ ಮೇಲೆ ಯಾವ ಪ್ರಕಾರದ ದೋಷವನ್ನೂ ಕೊಡುವದಿಲ್ಲ; ” ಎಂಬದಾಗಿ ಒಂದು ತಮ್ಮ ಹಸ್ತಲಿಖಿತವಾದ ಪ್ರತಿಜ್ಞ ಪತ್ರವನ್ನು ಬರೆದುಕೊಡಬೇಕು, ನೀವು ಯಾವಕಾಲಕ್ಕೆ ಆ ಪದಾರ್ಥಗಳನ್ನು ಒದಗಿಸಿ ಕೊಡುವಿರೋ ಆ ಕಾಲಕ್ಕೆ ನಾನು ಬಂದು ಔಷಧವನ್ನು ಸಿದ್ಧಪಡಿಸಿ ಪೂರ್ವವತ್ ನಖವು ಉತ್ಪನ್ನವಾಗುವಂತೆ ಮಾಡುತ್ತೇನೆ.

ಈಪ್ರಕಾರದ ಭಾಷಣಗಳನ್ನು ಕೇಳಿ ಬಾದಶಹನು ಮನಸ್ಸಿನಲ್ಲಿ " ಈ ವೈದ್ಯನಿಗೆ ನನ್ನ ಪ್ರಭಾವವೂ, ಸಂಪತ್ತಿನ ಬಲವೂ ವಿದಿತವಿದ್ದಂತೆ ಕಂಡುಬರುವದಿಲ್ಲ, ಅಂಥ ಪದಾರ್ಥಗಳಾದರೂ ಯಾವವಿರಬಹುದು ” ಎಂದು ಯೋಚಿಸಿ, ಬೀರಬಲನ ಕಥನಾನುಸಾರವಾಗಿ ಪ್ರತಿಜ್ಞಾ ಪತ್ರವನ್ನು ಬರೆದು ಕೊಟ್ಟನು.
ಆಮೇಲೆ ಬೀರಬಲನು ತನ್ನ ಇಚ್ಛಾನುಸಾರವಾಗಿ ಕೆಲಸವು ಪೂರ್ಣವಾದಮೇಲೆ, ಬಾದಶಹನನ್ನು ಕುರಿತು ಖಾವಂದ,

"ಕ್ಯಾ ಅಜಬ ಆನಾಹೈ ಉಸ ನಾಖೂನಕಾ :
ಫಾಲಗರ ಗೂಲರಕಾಹೋವ ಪೇಕಾಬ ಮಛಲೀಕಾ |

ಅಂದರೆ, ಹೂವಾಡಿಗನ ಅಂಗಡಿಯೊಳಗಿನ ಪುಷ್ಪಗಳ ಸುವಾಸನೆ ಯನ್ನೂ ಮತ್ಸ್ಯ ಮೂತ್ರವನ್ನೂ ಸಂಪಾದಿಸಿದರೆ, ನಷ್ಟವಾದಂಥ ನಖವು ಬರುವದು, ಏನು ಆಶ್ಚರ್ಯವು ! ” ಎಂದು ವೈದ್ಯಶಾಸ್ತ್ರದಲ್ಲಿ ಉಲ್ಲೇಖಿಸ ಲ್ಪಟ್ಟದೆ ಹೂಜೂರ್ ತಾವು ಈಎರಡು ಪದಾರ್ಥಗಳನ್ನು ತರಿಸಿಕೊಟ್ಟರೆ ನಿಮ್ಮ ರೋಗವನ್ನು ದೂರಮಾಡುತ್ತೇನೆ.
ಬಾದಶಹನು ಈ ವಾಕ್ಯವನ್ನು ಕೇಳಿ, ತನ್ನ ಅಮಾತ್ಯನಿಗೆ ವೈದ್ಯನು ಹೇಳವ ಜೀನಸುಗಳನ್ನು ಬಹು ತೀವ್ರವಾಗಿ ತರಿಸಿಕೊಡು ಎಂಬದಾಗಿ