ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೫೦



ಅಪ್ಪಣೆ ಮಾಡಿದನು. ಆ ಅಮಾತ್ಯನು ಬಹುವರಿಯಿಂದ ಶೋಧಮಾಡಿಸಿದನು ಆಪದಾರ್ಥಗಳ ಹೆಸರನ್ನು ಕೇಳಿದವರು ಸಹಾ ಸಿಕ್ಕಲಿಲ್ಲ ಒಂದು ಮಾಸದ ಅವಧಿಯು ಸಮಾಪ್ತವಾಗಿ ಹೋಯಿತು. ಉಪಾಯಾಂತರವಿಲ್ಲದೆ, ಬಂದಿಯಲ್ಲಿದ್ದ ಯಾವತ್ತು ವೈದ್ಯರನ್ನು ಬಿಟ್ಟು ಕೊಡ ಬೇಕಾಯಿತು ಬಾದಶಹನು ಅವರೆಲ್ಲರನ್ನೂ ಪ್ರತಿಬಂಧದಿಂದ ಬಿಡಿಸಿ, ಓಲಗಕ್ಕೆ ಕರೆಯಿಸಿಕೊಂಡು ಈ ವೈದ್ಯನ್ನು ಹೇಳಿದ ಔಷಧವು ವೈದ್ಯಶಾಸ್ತ್ರದಲ್ಲಿ ಇರುವದೋ ? ಎಂದು ಕೇಳಲು, ಅವರು ಬೀರಬಲನಿಂದ ಶಿಕ್ಷಣ ಹೊಂದಿದಂತೆ, “ ಅಹುದು ” ಎಂದು ಉತ್ತರ ಕೊಟ್ಟರು.
ವೈದ್ಯರೆಲ್ಲರೂ ಕೃತಜ್ಞತೆಯಿಂದ ಬೀರಬಲನನ್ನು ಸ್ತೋತ್ರ ಮಾಡಿ, ಒಂದು ಲಕ್ಷ ರೂಪಾಯಿಗಳನ್ನು ಬಹುಮಾನವನ್ನಾಗಿ ಕೊಟ್ಟರು. ಆಮೇಲೆ ಬೀರಬಲನು ದಿಲ್ಲಿಗೆ ಬಂದು, ಅದ್ಯೋವಾಂತವನ್ನೆಲ್ಲ ಅಕಬರ ಬಾದಶಹನಿಗೆ ತಿಳಿಸಿದನು ಅವನ ಚಾತುರ್ಯವನ್ನು ಬಹುಪರಿಯಿಂದ ಪ್ರಶಂಸೆ ಮಾಡಿದನು.
೧೮೪, ಹಾಥನಕೆ ಭುಎ ಕೊಊ ಬೇರ ನಖಾಯಗೋ

ಒಂದುದಿವಸ ಅಕಬರನು, ಒಬ್ಬ ಸ್ತ್ರೀಯಳಿಗೆ ಕಿಂಚಿತ್ ಚೇಷ್ಟೆ ಮಾಡಿದನು ಆ ಸ್ತ್ರೀಯು ಪರಮ ಸುಶೀಲೆಯಾಗಿದ್ದಳು ಅದರಿಂದ ಅವಳಲ್ಲಿ ಸ್ವಲ್ಪರೋಷವುಂಟಾಯಿತು ಕೋಪದಿಂದ ಬಾದಶಹನನ್ನು ದುರದುರನೆ ನೋಡಹತ್ತಿದಳು ಆಗ ಬಾದಶಹನು ಅವಳನ್ನು ಕುರಿತು - ಈಗ ನೀನು ಒಳ್ಳೇ ಪ್ರಾಯಸ್ಥಳಾಗಿರುವಿ ! ಆದರಿಂದ ನನ್ನಂಥವನೊಡನೆ, ವಿನೋದದ ಮಾತುಗಳನ್ನಾಡಿ, ನನ್ನ ಮನಸ್ಸನ್ನು ತೃಪ್ತಿ ಪಡಿಸು ! ಅಂದರೆ ಆ ಜನ್ಮ ಪರಿಯಂತರ ನಿನಗೆ ಸುಖವುಂಟಾಗುವಂತೆ ಮಾಡುತ್ತೇನೆ; ಇದಕ್ಕೆ ನೀನು ಒಪ್ಪಿಕೊಳ್ಳದಿದ್ದರೆ ಮುಪ್ಪಿನಕಾಲದಲ್ಲಿ ನಿನ್ನನ್ನು ನಾಯಿಯು ಸಹಾ ಮೂಸಿ ನೋಡಲಿಕ್ಕಿಲ್ಲ ಎಂದು ಅವಳಿಗೆ ಬೆದರಿಸಿ, ಸಭಾಸ್ಥಾನಕ್ಕೆ ಬಂದು, ಬೀರಬಲನನ್ನು ಕುರಿತು, “ ಹಾಥನಕೆ ಭುವಿ ಕೋಊ ಬೇರಹೂ ನಖಾಯಗೋ" ಎಂಬ ಸಮಸ್ಯೆಯನ್ನು ಹೇಳಿ, ಇದನ್ನು ಪೂರ್ಣಮಾಡೆಂದು ಆಜ್ಞಾಪಿಸಿದನು ಆ ಕೂಡಲೆ ಬೀರಬಲನು.

ಮಾನುಷಕೋ ಜನ್ಮವಾಯೋ ಸುಂದರಂಗ ರೂಪವಾಯೋ,
ಕರ ರಸ ರಂಗ ಜಾಸೋ ಜೀವ ಹುಲಸಾಯಗೋ
ಜ್ಞಾನೀಕಿ ತರಂಗಮೆ ಕರೆ ಕ್ಯೂನ ಉಮಂಗ ಆಲಿ,
ದಿನಢಲಜಾಯ ದಿನ ಯಾಹೂ ಢಲಜಾಹ ಗೋ |