ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೫೧



ಕರೈಕ್ಯೊ ಗುಮಾನ ಐಸಿ ತೇಜ ತರುನಾಈವಾಯ,
ಫಿರಲಲಚಾಯ ಚಿತ್ತ ವಾಛೆ ವಛತಾಯ ಗೋ |
ಜೋಬನಕ ಚಾರದಿನಾ ಬೀತಗಯೆ ಪಿಛೇನಖೀ
ಹಾಥನಕೆ ಭುವೆ ಕೊಊ ಬೇರಹೂ ನಖಾಯಗೋ " |

ಖಾವಂದ, ಒಬ್ಬ ಕಾಮುಕನು ಸುಂದರ ಸ್ತ್ರೀಯನ್ನು ನೋಡಿ, ಮೋಹಿತನಾಗಿ, ಅಂದದ್ದೇನಂದರೆ, “ ಎಲೈ ಮೃದ್ವಂಗಿಯೇ, ಪೂರ್ವಾರ್ಜಿತ ಸುಕೃತಫಲದಿಂದ, ಮನುಷ್ಯಪ್ರಾಣಿಗೆ ಸುಂದರ ರೂಪವೂ ಮನೋಹರ ವಾದ ವರ್ಣವೂ ಪ್ರಾಪ್ತವಾಗುತ್ತದೆ ಅದರಿಂದ ಇಹಜನ್ಮದಲ್ಲಿ ಅಂಥಪ್ರಾಣೆಯು, ಅನೇಕ ಪ್ರಕಾರದ ಸುಖ ವಿಲಾಸಾದಿಗಳನ್ನು ಅನುಭವಿಸಬೇಕು; ಮತ್ತು ಅನ್ಯರಿಗೂ ಅದರ ಲಾಭವು ಸಿಗುವಹಾಗೆ ಮಾಡಬೇಕು. ಪ್ರಾಯ ವೆಂಬದು, ಮಧ್ಯಾನ್ಹದ ಬಿಸಿಲಿನಂತೆ ಕ್ಷಣಿಕವಾದದ್ದು. ಇಂಥ ಸಮಯದಲ್ಲಿ ಸುಖ ವಿಲಾಸಗಳನ್ನು ಅನುಭವಿಸದೆಯೂ, ಪರರಿಗೆ ಸುಖವನ್ನಿಯದೆಯೂ ವ್ಯರ್ಥವಾಗಿ ಕಳೆದರೆ, ಅದರಿಂದ ಪ್ರಯೋಜನವೇನು? ಪ್ರಾಯದ ಕಾಲದಲ್ಲಿ ತನ್ನಿಂದ ಸಾಧ್ಯವಾದಷ್ಟು ಸುಖವನ್ನು ಅನುಭವಿಸದಿದ್ದ, ಮೇಲೆ, ಎಲೈ ಸುಂದರಿಯೇ, ವೃದ್ಧಾಪ್ಯಕಾಲದಲ್ಲಿ ಅಂಥ ಯುವತಿಯನ್ನು ಯಾರಾದರೂ ಕಣ್ಣೆತ್ತಿ ನೋಡಲಿಕ್ಕಿಲ್ಲ; ಮತ್ತು ನಿನ್ನನ್ನು ನಾಯಿಗಿಂತ ಹೀನವೆಂದು ತಿಳಿದು ಕೊಳ್ಳುವರು; ಎಂಬದಾಗಿ ಆ ಕಾಮಕನು ಆ ಸಾಧ್ವಿಯಾದ ಸ್ತ್ರೀಯಳಿಗೆ ಉಪದೇಶ ಮಾಡಿದನು.
ಬಾದಶಹನು ಈ ಪದ್ಯವನ್ನು ಶ್ರವಣಮಾಡಿ ಹೃದ್ವ ಮಾನಸನಾಗಿ, ಬೀರಬಲನಿಗೆ ಪಾರಿತೋಷಕವನ್ನು ಕೊಟ್ಟನು.

- (೧೮೫, ಮಾರ್ಗವು ಎಲ್ಲಿಗೆ ಹೋಗುತ್ತದೆ.) -

ಒಂದು ದಿವಸ ಅಕಬರನೂ ಬೀರಬಲನೂ ಕೂಡಿಕೊಂಡು ಮೃಗಯಾ ವಿಹಾರಕ್ಕೆ ಹೊರಟಿದ್ದರು. ಆಗ ಮಾರ್ಗದಲ್ಲಿ ಬೆಟ್ಟಿಯಾದ ಒಬ್ಬ ಕುರುಬನನ್ನು ಕುರಿತು “ ಈ ಮಾರ್ಗವು ಎಲ್ಲಿಗೆ ಹೋಗುತ್ತದೆ ” ಎಂದು ಪ್ರಶ್ನೆ ಮಾಡಿದರು ಆಗ ಆ ಕುರುಬನು ನೀವು ಕೇವಲ ಅಜ್ಞಾನಿಗಳಿದ್ದಂತೆ ಕಂಡು ಬರುತ್ತದೆ, ಮಾರ್ಗವು ಎಂದಾದರೂ ಹೋಗುವದುಂಟೇ? ಇದು ನಿರ್ಜೀವವಾದದ್ದು ಪ್ರಯಾಣಿಕರು ಮಾತ್ರ ಹೋಗುತ್ತಿರುತ್ತಾರೆ, ಬರುತ್ತಿರು ತಾರೆ, ಎಂದು ಉತ್ತರ ಕೊಟ್ಟನು,
ಅವನ ಉತ್ತರವನ್ನು ಕೇಳಿ ಉಭಯತರೂ ಲಜ್ಜಿತರಾದರು ಆ ಕುರುಬನಿಗೆ ಉಚಿತವನ್ನು ಕೊಟ್ಟು ಕಳುಹಿಸಿದರು.