ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
(೪೫)
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೫೩



ಮೋಸ ಗೊಳಿಸುವಂತೆ ಒಂದುವೇಷವನ್ನು ಧಾರಣ ಮಾಡಿಕೊಂಡು ಬಾ ! ಎಂದು ಅಪ್ಪಣೆಮಾಡಿದನು. ಬಾದಶಹನ ಅಪ್ಪಣೆಯ ಮೇರೆಗೆ ಬೀರಬಲನು ಕಾವಲುಗಾರನ ವೇಷವನ್ನು ಹಾಕಿಕೊಂಡು ಬಾದಶಹನ ಪ್ರಾಸಾದದ ಮುಂಭಾಗದಲ್ಲಿ ಅತ್ತ ಇತ್ತ ಸಂಚರಿಸಹತ್ತಿದನು. ಅರ್ಧರಾತ್ರಿಯಲ್ಲಿ ಅಕ ಸ್ಮಾತ್ತಾಗಿ ಎಚ್ಚತ್ತು ಬಾದಶಹನು ಹೊರಗೆಬಂದು ಸಂಚರಿಸಹತ್ತಿರುವವ ನು ಕಾವಲುಗಾರನೇ ಎಂದು ತಿಳಿದು " ಎ ಕಾವಲು ಗಾರನೇ ! ನಿದ್ರೆ ಯನ್ನು ಹ್ಯಾಗೆ ಕೊಡುತ್ತೀ? ” ಎಂದು ಕೇಳಿದನು. ಅದಕ್ಕೆ ಪ್ರಚ್ಛನ್ನ ವೇಷಧಾರಿಯಾದ ಬೀರಬಲನು ಬಿಲ್ಲಿಗೆ ಒಂದು ಸೇರು ? ಎಂದು ಹೇಳಿದನು. ಆಮೇಲೆ ಪುನಃ ಬಾದಶಹನು ಎಚ್ಚರಿಕೆಯನ್ನು ಹ್ಯಾಗೆ ಕೊಡುವಿ ! ಎಂದ ನು ಅದಕ್ಕೆ ಬೀರಬಲನು ಹುಜೂರ್ ಜೋ ಸೋಯಾ ಸ ಚಕಾ ಅಂದರೆ ನಿದ್ರೆಯನ್ನು ಯಾವ ಬೆಲೆಗೆ ಕೊಡುತ್ತೇನೆಂದು ಹೇಳಿದೆನೋ ಅದ ರಂತೆಯೇ ಎಚ್ಚರಿಕೆಯನ್ನಾದರೂ ಕೊಡುತ್ತೇನೆ. ಎಂದು ಹೇಳಿದನು. ಈ ಪ್ರಕಾರ ಭಾವಗರ್ಭಿತವಾಕ್ಯವನ್ನು ಹೇಳಿದವನು ಬೀರಬಲನೇ ಇರಬಹು ದೆಂದು ತಿಳಿದು ಅನನ್ಯವಾದ ಪಾರಿತೋಷಕವನ್ನಿತ್ತನು.

ಟೀಪು -ಸೋಯಾ, ಅಂದರೆ ನಿದ್ರೆ, ಚೂಕಾ, ಅಂದರೆ ಎಚ್ಚರಿಕೆ ಎಂತಲೂ
ತಪ್ಪು ಎಂತಲೂ ಅರ್ಥವಾಗುವದರಿಂದ " ಜೋ ಸೋಯಾ
ನೋ ಚಕಾ' ಎಂಬವಾಕ್ಯಕ್ಕೆ ಹ್ಯಾಗೆ ನನಗೆ ನಿದ್ರೆ ಇರುವದೋ
ಹಾಗೆಯೇ ಎಚ್ಚರಿಕೆಯು ಇರುವದೆಂತಲೂ, ಅಥವಾ ನಿದ್ರೆ ಮಾಡು
ವವನಿಂದ ತಪ್ಪಾಗುತ್ತ ದೆಂತಲೂ ಹೇಳಿದಂತಾಯಿತು,

-(೧೯೦, ಸಹಸ್ರ ಪಾದರಕ್ಷೆ.)-

ಒಂದು ಸಾರೆ ಬಾದಶಹನು ವಿನೋದ ಮಾಡಬೇಕೆಂದು ಬೀರಬಲನ ಪಾದರಕ್ಷೆಗಳನ್ನು ಬಚ್ಚಿಟ್ಟನು ರಾಜಕರಣವು ಸಮಾಪ್ತಿಯಾದ ಮೇಲೆ, ಬೀರಬಲನು ಮನೆಗೆ ಹೋಗಬೇಕೆಂದು ಹೊರಗೆ ಬಂದು ಪಾದರಕ್ಷೆಗಳನ್ನು ಹುಡುಕ ಹತ್ತಿದನು ಎಲ್ಲಿಯೂ ಕಾಣಿಸಲಿಲ್ಲ ಆಗ ಬಾದಶಹನು ಪಾದರಕ್ಷೆಗೆ ಳು ಸಿಗಲಿಲ್ಲವೇ ? ಒಳ್ಳೇದು ಎಲೋ ಪರಿಚಾರಕನೇ ನನ್ನ ಪಾದರಕ್ಷೆಗಳ ನ್ನು ಕೊಡು ? ಎಂದು ಹೇಳಿದನು. ಅದರಂತೆ ಸೇವಕನು ಹೊಸಪಾದರಕ್ಷೆ ಗಳನ್ನು ಕೊಡಲು, ಅವುಗಳನ್ನು ಕಾಲೊಳಗೆ ಹಾಕಿಕೊಂಡು, ದೇವರು ತಮಗೆ ಸರಲೋಕದಲ್ಲಿ ಇಂಥ ಸಹಸ್ರ ಸಹಸ್ರ ಪಾದರಕ್ಷೆಗಳನ್ನು ಕೊಡಲಿ ಎಂದು ಆಶೀರ್ವದಿಸಿದನು ಈ ಮಾತು ಕಿವಿಗೆ ಬಿದ್ದ ಕೂಡಲೆ ಬಾದಶಹನು ಬಿದ್ದು ಬಿದ್ದು ನಕ್ಕನು.