ವಿಷಯಕ್ಕೆ ಹೋಗು

ಪುಟ:ಅಕ್ಬರ್ ಬೀರಬಲ ಚಾತುರ್ಯವಾದ ವಿನೋದ ಕಥೆಗಳು.djvu/೨೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅಕಬರಬೀರಬಲ ಚಾತುರ್ಯವಾದ ವಿನೋದಕಥೆಗಳು.
೩೬೭

-( ೨೧೭ ಶ್ರೇಷ್ಟ ವರ್ಣವು ಯಾವದು ! )-

ಒಂದು ದಿವಸ ಬಾದಶಹನು ವರ್ಣಗಳಲ್ಲಿ ಶ್ರೇಷ್ಠವಾದ ವರ್ಣವು ಯಾವದು ! ಎಂದು ತನ್ನ ಸಭಾಸದರನ್ನು ಕೇಳಿದರು ಕೆಲವರು ಕಮಲದ ಎಲೆಯು ಶ್ರೇಷ್ಠವಾದದ್ದೆಂದೂ ಕೆಲವರು ಬಾಳೇ ಎಲೆಯು ಶ್ರೇಷ್ಟವಾದ ದ್ದೆಂದೂ ಹೇಳಿದರು, ಬೀರಬಲನ ವರದಿಯು ಬಂದಕೂಡಲೆ ಅವನು ಸಲಾ ಮು ಮಾಡಿ ಧರ್ಮಾವತಾರ? ಯಾವತ್ತು ಪರ್ನಗಳಿಗಿಂತ ನಾಗವಲ್ಲಿ ಪರ ವು ಶ್ರೇಷ್ಟವಾದದ್ದು ಯಾಕಂದರೆ ಅದು ಬಾದಕ ಹರವರ ಮುಖದಲ್ಲಿ ಬಂದು ಬೀಳುತ್ತದೆ ಎಂದನು ಈ ಉತ್ತರದಿಂದ ಯಾವತ್ತೂ ಸಭಾಸದರು ಚಕಿತ ರಾದರು.

-[೨೧೮, ಯುವರಾಜನಾದ ಸೇಲೀಮನ ಪ್ರತಿಸ್ಪರ್ಥಿ]-

ಯುವರಾಜನಾದ ಸಲೀಮನು ಬಹಳೇ ಮದ್ಯಪಿಯಾಗಿದ್ದನು ಅವ ನನ್ನು ಆ ವ್ಯಸನದಿಂದ ದೂರ ಮಾಡಬೇಕೆಂದು ಬಾರಕಹನು ಅನೇಕ ಪ್ರ ಯತ್ನಗಳನ್ನು ಮಾಡಿದನು ಏನೂ ಲಾಭವಾಗಲಿಲ್ಲ ಅಂತ್ಯದಲ್ಲಿ ಬೀರಬಲನ ಸಮ್ಮತಿಯಿಂದ ನಗರದಲ್ಲಿ ದಂಗುರವನ್ನು ಸಾರಿಸಿದನು ಆದರ ಆಶಯವೇ ನಂದರೆ “ ಸೇಲೀಮನು ಅತಿದುರ್ವ್ಯಸನಿ ಯಾದ್ದರಿಂದ ಅವನನ್ನು ಯುವ ರಾಜಪದವಿಯಿಂದ ದೂರೀಕರಿಸಿದ್ದೇವೆ ಮತ್ತು ಯಾವನಾದರೊಬ್ಬ ಚಾಣಾ ಕತರುಣನನ್ನು ಆವದವಿಯಲ್ಲಿ ನಿಯಮಿಸಬೇಕೆಂದು ಮಾಡಿದ್ದೇವೆ ಅದ್ದ ರಿಂದ ಶ್ರೀಮಂತ ದರಿದ ಸರದಾರ ಮಾನಕರಿಗಳ ಪುತ್ರರಲ್ಲಿ ಯಾವನಾದ ರೂಆಪದವಿಯನ್ನು ಹೊಂದಬೇಕೆಂಬ ಅಪೇಕೆಯಿದ್ದರೆಅವರು ನಾಳೆಯದಿನ ದಲ್ಲಿ ಓಲಗಕ್ಕೆ ಬಂದು ಬಾದಶಹನಿಗೆ ಬೆಟ್ಟಿಯಾಗಬೇಕು ಆಗ ಸಭಾಸದರು ಮಾಡುವ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳನ್ನು ಕೊಟ್ಟವನಿಗೆ ಸದ್ಯಕ್ಕೆ ಯುವರಾಜ ಪದವಿಯನ್ನು ಕೊಟ್ಟು ಹಿಂದುಗಡೆಯಲ್ಲಿ ರಾಜ್ಯಾಧಿ ಕಾರಿಯನ್ನಾಗಿ ಮಾಡುತ್ತೇವೆ.
ಈ ಡಂಗುರದ ವಾರ್ತೆಯ ಬರ್ಚೆಯೇ ಪಟ್ಟಣದಲ್ಲಿ ಎಲ್ಲಿ ನೋಡಿದ ರೂ ಅಲ್ಲಿ ನಡೆಯುತ್ತಿತ್ತು ಸೇಶೀಮನ ಸ್ವತ್ವವು ಅನ್ಯರಿಗೆ ಪ್ರಾಪ್ತವಾಗು ತದೆಂದಮೇಲೆ ಬಹು ಜನರ ಮನಸ್ಸಿಗೆ ವಿಷಾದವಾಯಿತು ಸಲೀಮನು ಗಾಬರಿಯಾದನು ಡಂಗುರವನ್ನು ಸಾರಿಸಿದ್ದರಿಂದ ಯಾರ ಉಪಾಯವೂ ಸಾಗದಂತಾಯಿತು ದೈವವನ್ನು ನಂಬಿ ಸೇಲೀಮನು ಸ್ವಸ್ಥ ಕುಳಿತುಕೊಂಡ ನು ಮಹಾಸಭೆಯು ನೆರೆಯುವದಿವಸವ ಸಮೀಪಿಸಿತು ಬಾದಶಹನ ಪ್ರ ಮೊದವನದಲ್ಲಿ ಮಂಟವನ್ನು ಹಾಕಲ್ಪಟ್ಟಿತು ಮಂಟದ ಮಧ್ಯಭಾಗದಲ್ಲಿ