ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದ (Reformists) ಒಡ್ಡಿದ ಅಡಚಣೆ ಮತ್ತು ಅವರುಗಳು ಕಾರ್ಮಿಕವರ್ಗಕ್ಕೆ ಒಗೆದ ದ್ರೋಹ ಸಮಾಜವಾದೀ ಚಳವಳಿಯ ಮುಂದೋಟವನ್ನು ಹಿಡಿದು ನಿಲ್ಲಿಸಿದವು. ಸುಧಾರಕರು ಕಾರ್ಯೋನ್ಮುಖರಾಗಿ ನಿಂತಿದ್ದ ಕಾರ್ಮಿಕ ವರ್ಗವನ್ನು ತಡೆಗಟ್ಟಿದರು, ಕ್ರಾಂತಿ ನಡೆಸಲು ಸಮಯ ಬಂದಿಲ್ಲವೆಂದು ಬೆದರಿಸಿದರು, ಬಂಡವಾಳವರ್ಗದ ಸರ್ಕಾರದೊಡನೆ ಕಲೆತು ಕ್ರಾಂತಿಯ ಶತ್ರುಗಳಾಗಿ ನಿಂತರು. ಆದರೂ ಜರ್ಮನಿ, ಆಸ್ಟ್ರಿಯಾ, ಇಟಲಿ, ಹಂಗೆ, ಇತ್ಯಾದಿ ಹಲವು ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಕ್ರಾಂತಿಯು ನಡೆದು ವಿಫಲಹೊಂದಿತು. ವ ಯೂರೋಪಿನ ಹಲವು ರಾಷ್ಟ್ರಗಳಲ್ಲಿ ಕಾರ್ಮಿಕರ ಕ್ರಾಂತಿ ವಿಫಲ ವಾದದ್ದರಿಂದ ಬಂಡವಾಳಶಾಹಿ ವ್ಯವಸ್ಥೆ ಮತ್ತೆ ಜೀವದಾನ ಪಡೆಯಿತು. ಅನೇಕ ಬಂಡವಾಳಶಾಹಿ ರಾಷ್ಟ್ರಗಳಲ್ಲಿ ಲೆನಿನ್ ಖಂಡಿಸಿದ ಸುಧಾರಕ ಸಮಾಜ ವಾದೀ ತತ್ತ್ವ ಗರಿಕಟ್ಟಿ ಕೊಳ್ಳಲೂ ಅವಕಾಶಸಿಕ್ಕಿತು. ಸುಧಾರಕ ಸಮಾಜ ವಾದದ ಜೊತೆಗೆ ವಿವಿಧ ರೂಪದ ವಾದಗಳು ಸಮಾಜವಾದವೆಂಬ ಶಿರೋ ನಾಮೆಯಲ್ಲಿ ತಲೆಹಾಕಿದವು. ಆದರೆ ಯಾವ ಹೊಸವಾದವೂ ಬಂಡವಾಳ ಶಾಹಿ ವ್ಯವಸ್ಥೆ ತನ್ನೊಡನೆ ತಂದಿದ್ದ ವರ್ಗವಿರಸ, ಆರ್ಥಿಕದುಃಸ್ಥಿತಿ, ನಿರುದ್ಯೋಗ, ಯುದ್ಧ, ಶೋಷಣೆ ಮತ್ತು ಪ್ರಜಾಸತ್ತೆಯ ಸೋಗಿನಲ್ಲಿ ನಡೆಯುವ ವರ್ಗ-ರಾಜಕೀಯ ಇವುಗಳನ್ನು ಮಾರ್ಕ್ಸ್‌ ವಾದದಂತೆ ವಿಮರ್ಶಿ ಸಲೂ, ಇವುಗಳಿಗೆ ಕಾರಣವಾದ ಬಂಡವಾಳಶಾಹಿ ವ್ಯವಸ್ಥೆಯ ಅಂತರಾಳ ವನ್ನು ಭೇದಿಸಲೂ ಅಶಕ್ತವಾಗಿದ್ದಿತು. ಆದರೆ, ನೊಂದ ಜನತೆ ಮಾತ್ರ ಪರಿಹಾರವನ್ನು ಹುಡುಕುತ್ತಿತ್ತು, ಈ ಹೊಸ ವಾದಗಳು ಸಮಾಜದ ಅವ್ಯವಸ್ಥೆಗೆ ಬಗೆ ಬಗೆಯ ಕಾರಣ ಗಳನ್ನು ಹುಡುಕಿ ಬಗೆ ಬಗೆಯ ರೂಪದ ಉತ್ತರಗಳನ್ನು ಕೊಟ್ಟವು. ವಾದಿ ಪ್ರಜಾಸತ್ತಾತ್ಮಕರನ್ನು ಅನುಕೂಲಸಿಂಧುಗಳೆಂದೂ (opportunists), ಸ್ವಪಕ್ಷ ದ್ರೋಹಿ (Renegades) ಗಳೆಂದೂ ಘೋಷಿಸಿದನು. ಕ್ರಾಂತಿಕಾರೀ ಪಕ್ಷದ ಮೂರನೆ ಅಂತರರಾಷ್ಟ್ರೀಯವನ್ನು ಸ್ಥಾಪಿಸಿದನು. ಲೆನಿನ್ನನ ಹಿಂಬಾಲ ಕರನ್ನು ಕಮ್ಯೂನಿಸ್ಟರೆಂದೂ, ಸುಧಾರಕ ಸಮಾಜವಾದಿಗಳನ್ನು ಸಮಾಜವಾದಿ ಗಳೆಂದೂ (Social Democrats or Socialists) ಕರೆಯುವುದು ರೂಢಿಗೆ ಬಂದಿತು.