೧೬೪ ವೈಜ್ಞಾನಿಕ ಸಮಾಜವಾದ ಪ್ರಜಾಸತ್ತೆಯ ಬಗ್ಗೆ ಸ್ವಲ್ಪವೂ ಅನುಮಾನಕ್ಕೆ ಆಸ್ಪದವಿಲ್ಲದ ವಿವರಣೆಯನ್ನು ಆಧುನಿಕ ಸಮಾಜವಾದ ಕೊಟ್ಟಿದೆ. ಬಂಡವಾಳಶಾಹಿ ವ್ಯವಸ್ಥೆಯ ನಿರ್ಮೂಲ, ಸಮಾಜದ ಉತ್ಪಾದನಾಸಾಧನಗಳ ಸಮಾಜೀ ಕರಣ, ವರ್ಗಗಳ ವಿನಾಶ, ಸಮಾಜವಾದೀ ವ್ಯವಸ್ಥೆಯ ಆಗಮನ, ಎಲ್ಲವೂ ಬಹುಮತ ಇರುವ ಶಾಸನಗಳ ಮೂಲಕ ಆಗಲು ಸಾಧ್ಯವಿದೆ. ಆದರೆ ಇದರ ಸಾಧ್ಯತೆ ಕಾರ್ಮಿಕವರ್ಗದ ಜಾಗೃತಿ, ಸಂಘಟನೆ, ಚಳವಳಿ ಮತ್ತು ಬಂಡವಾಳವರ್ಗದ ಧೋರಣೆಗಳನ್ನು ಅವಲಂಬಿಸಿದೆ. ಬಂಡವಾಳ ಆರ್ಥಿಕ ವ್ಯವಸ್ಥೆಯಲ್ಲಿರುವ ವಿರಸಗಳು ಶಾಸನಸಭೆಗಳ ಮೂಲಕ ನಿರ್ನಾಮವಾಗ ದಿದ್ದರೆ ಬಂಡವಾಳ ಶಾಹಿ ವ್ಯವಸ್ಥೆಯೇ ಕ್ರಾಂತಿಕಾರಕ ಸನ್ನಿವೇಶವನ್ನು ಕಲ್ಪಿಸಿಕೊಡುತ್ತದೆ. ಕ್ರಾಂತಿಯ ಮೂಲಕ ಜನರು ತಮ್ಮ ಆಶೋತ್ತರ ಗಳನ್ನು ಈಡೇರಿಸಿಕೊಳ್ಳುವಂತೆ ಆಗುತ್ತದೆ. ಕ್ರಾಂತಿ ಒಬ್ಬಿಬ್ಬರ ಬಯಕೆ ಗಳಿಂದ ನಿರ್ಮಿತವಾಗುವುದಿಲ್ಲ. ಜನಸಮುದಾಯವೇ ಕೈಕೊಳ್ಳುವ ಕ್ರಮ ವಾಗಿದೆ. ಆಧುನಿಕ ಸಮಾಜವಾದ ಕ್ರಾಂತಿಯನ್ನು ಬಯಸುವುದಿಲ್ಲ; ರಕ್ತ ಪಾತ ವನ್ನು ಬಯಸುವುದಿಲ್ಲ; ಶಕ್ತಿ ಆರಾಧಕವಲ್ಲ. ಸ್ವಾಭಾವಿಕವಾಗಿ ಅಥವಾ ಅನಿವಾರ್ಯವಾಗಿ ಮೂಡುವ ಕ್ರಾಂತಿಯನ್ನು ಗುರಿಮುಟ್ಟಿಸಲು ಕಾರ್ಮಿ ಕರೇ ಮುಂದಾಳತ್ವ ವಹಿಸಬೇಕೆಂದೂ, ರಾಜ್ಯಶಕ್ತಿಯನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಬೇಕೆಂದೂ, ಕಾರ್ಮಿಕವರ್ಗದ ಏಕೈ ಕ ಪ್ರಭುತ್ವ ವನ್ನು ಘೋಷಿಸಬೇಕೆಂದೂ ತಿಳಿಸುತ್ತದೆ. ಇಲ್ಲದಿದ್ದ ಪಕ್ಷದಲ್ಲಿ, ಉರುಳಿರುವ ಸ್ವಾಮ್ಯ ವರ್ಗ ಕಾರ್ಮಿಕವರ್ಗದ ಮೇಲೆ ಹಿಂತಿರುಗಿ ಬಿದ್ದು ರಾಜ್ಯಶಕ್ತಿ ಯನ್ನು ಪುನಃ ಅಪಹರಿಸುತ್ತದೆಂದೂ, ಸರ್ವಾಧಿಕಾರವನ್ನು ಘೋಷಿಸುತ್ತ ದೆಂದೂ ಎಚ್ಚರಿಸುತ್ತದೆ. ಉತ್ಪಾದನಾ ಸಾಧನಗಳಲ್ಲಿ ಖಾಸಗೀ ಸ್ವಾಮ್ಯ ವನ್ನು ನಾಶಪಡಿಸಲು ಹೊರಟಿರುವ ಕಾರ್ಮಿಕವರ್ಗದ ಕ್ರಾಂತಿ ಅತಿ ಉಗ್ರರೂಪದ ಬದಲಾವಣೆಗಳನ್ನು ತರಲೊರಟಿರುವ ಕ್ರಾಂತಿಯೆಂದೂ, ಇದಕ್ಕೆ ಸರಿಸಮಾನವಾದ ಸಾಮಾಜಿಕ ಆಂದೋಲನ ಇನ್ನಾವುದೂ ಇಲ್ಲ ವೆಂದೂ, ಬಂಡವಾಳವರ್ಗದಿಂದ ಅತಿಯಾದ ವಿರೋಧ ಮತ್ತು ಪ್ರತಿಭಟನೆ ಬರುವುದೆಂದೂ, ಆದುದರಿಂದ ಕ್ರಾಂತಿಯ ಸಂರಕ್ಷಣೆಗಾಗಿ ಬಂಡವಾಳ ವರ್ಗದ ಮೇಲೆ ಕಾರ್ಮಿಕವರ್ಗದ ಏಕೈಕ ಪ್ರಭುತ್ವದ ಘೋಷಣೆ ಅಗತ್ಯ ವೆಂದೂ ತಿಳಿಸಿದೆ.
ಪುಟ:ಕಮ್ಯೂನಿಸಂ.djvu/೧೭೮
ಗೋಚರ