ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಮಾಜವಾದದ ಸಮಸ್ಯೆಗಳು ೧೬೫ ನಿರಂಕುಶ ಪ್ರಭುತ್ವವಿರುವ ಕಡೆಗಳಲ್ಲೆಲ್ಲಾ ಶಾಸನಬದ್ಧ ಚಳವಳಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ.1 ಆಧುನಿಕ ಸಮಾಜವಾದ ಅಂತಹ ಕಡೆಗಳಲ್ಲಿ ಪ್ರಜಾಸತ್ತೆಗಾಗಿ ಶ್ರಮಿಸುವುದು ಮಾತ್ರವಲ್ಲದೆ, ಬಂಡವಾಳಶಾಹಿ ವ್ಯವಸ್ಥೆಯ ನಿರ್ಮೂಲಕ್ಕಾಗಿ ಶಾಸನಬದ್ಧ ಮತ್ತು ಶಾಸನೇತರ ಚಳ ವಳಿಯನ್ನು ನಡೆಸಿಯೇ ತೀರಬೇಕೆಂದು ತಿಳಿಸುತ್ತದೆ. ಬಂಡವಾಳಶಾಹಿ ಪ್ರಜಾಸತ್ತೆ ಇರುವ ಕಡೆಗಳಲ್ಲಿ ಶಾಸನಬದ್ಧ ಚಳವಳಿಯನ್ನು ಮಾತ್ರ ಕೈಗೊಳ್ಳುತ್ತದೆ. ಒಂದು ಪಕ್ಷ, ಕ್ರಾಂತಿಕಾರರ ಸನ್ನಿವೇಶ ಬಂದು, ಕ್ರಾಂತಿ ಉಂಟಾದರೆ ಕಾರ್ಮಿಕರೇ ಮುಂದಾಳತ್ವ ವಹಿಸಿ ಕ್ರಾಂತಿಯನ್ನು ಗುರಿ ಮುಟ್ಟಿಸಬೇಕೆಂದು ತಿಳಿಸುತ್ತದೆ. ಇದೇ ಪ್ರಜಾಸತ್ತೆಯ ಒಗ್ಗೆ ವೈಜ್ಞಾನಿಕ ಸಮಾಜವಾದದ ಧೋರಣೆಯಾಗಿದೆ. ಮೂರನೆಯದಾಗಿ, ವೈಜ್ಞಾನಿಕಸಮಾಜವಾದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಚ್ಯುತಿತರುತ್ತದೆ ಎಂಬ ಪ್ರಶ್ನೆ, ಬಂಡವಾಳಶಾಹಿ ವ್ಯವಸ್ಥೆಯಲ್ಲಿ ವ್ಯಕ್ತಿಗಳು ಹೊಂದಿರಬಹುದಾದ ಕೆಲವು ಬಗೆಯ ಸ್ವಾತಂತ್ರ್ಯ ಗಳಿಗೆ-ಸ್ವಾಮ್ಯವನ್ನು ಹೊಂದಿರಲು, ಇತರರನ್ನು ಕೂಲಿಗೆ ನೇಮಿಸಿಕೊಳ್ಳಲು, ಲಾಭಕ್ಕಾಗಿ ವ್ಯಾಪಾರಮಾಡಲು, ಉದ್ಯಮವನ್ನು ಆರಂಭಿಸಲು, ಬೇಡವಾದರೆ ಉದ್ಯಮ ವನ್ನು ಮುಚ್ಚಲು ಲಾಭದ ಹೆಸರಿನಲ್ಲಿ ಶೋಷಣೆ ನಡೆಸಲು, ನಿರುದ್ಯೋಗಿ ಯಾಗಲು, ಭಿಕ್ಷಾಟನೆಮಾಡಲು, ದಿವಾಳಿಯಾಗಲು ಸಮಾಜವಾದೀ ವ್ಯವಸ್ಥೆಯಲ್ಲಿ ಸ್ಥಳವಿಲ್ಲ. ಇದರಿಂದ ಸ್ವಾತಂತ್ರ್ಯಗಳೆಂದು ಹೇಳಲಾದ ಹಲವು ಹಕ್ಕುಗಳಿಗೆ ಸಮಾಜವಾದೀ ವ್ಯವಸ್ಥೆಯಲ್ಲಿ ಚ್ಯುತಿಬರುವುದು ವಾಸ್ತವದ ಅಂಶ. ಆದರೆ ಇವುಗಳ ಚ್ಯುತಿಗಾಗಿ ಪಶ್ಚಾತ್ತಾಪಪಡ ಬೇಕಾದ ವಿಷಯವಲ್ಲವೆಂದು ವೈಜ್ಞಾನಿಕ ಸಮಾಜವಾದ ತಿಳಿಸುತ್ತದೆ. (1) ನಿರಂಕುಶ ಪ್ರಭುತ್ವದಲ್ಲಿ ಪ್ರಜೆಗಳಿಂದ ನೇಮಿತವಾದ ಸರ್ಕಾರವಿರು ವುದಿಲ್ಲ. ರಾಜನೇ ಸರ್ಕಾರ ; ಮಂತ್ರಿಗಳು ಮತ್ತು ಅಧಿಕಾರವರ್ಗ ರಾಜನಿಗೆ ಮಾತ್ರ ಜವಾಬ್ದಾರರಾಗಿರುತ್ತಾರೆ. ರಾಜನ ಅಧಿಕಾರದ ಆಧಾರಸ್ತಂಭಗಳೆಂದರೆ ಸೈನ್ಯ, ಕಂದಾಯ, ಖಜಾನೆ ಮತ್ತು ಹಿ೦ಬಾಲಕವರ್ಗ. ರಾಜನಿಗೆ ಸೇರಿದ ಸ್ವಾಮ್ಯವೇ ಆಧಿಕ ಪ್ರಮಾಣದಲ್ಲಿರುವಾಗ ಸಮಾಜದಲ್ಲಿರುವ ಸ್ವಾಮ್ಯ ವರ್ಗದಲ್ಲಿ ತನ್ನ ಭದ್ರತೆಯನ್ನು ಕಾಣುತ್ತಾನೆ; ಪ್ರತಿಯಾಗಿ ಸ್ವಾಮ್ಯವರ್ಗವೂ ಸಹ ರಾಜನ ಇರುವಿಕೆಯಲ್ಲಿ ಸ್ವಾಮ್ಯಕ್ಕೆ ರಕ್ಷಣೆಯನ್ನು ಕಂಡು ರಾಜಪ್ರಭುತ್ವದ ಆರಾಧಕ ವಾಗಿರುತ್ತದೆ.