ವಿಷಯಕ್ಕೆ ಹೋಗು

ಪುಟ:ಕಮ್ಯೂನಿಸಂ.djvu/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೈಜ್ಞಾನಿಕ ಸಮಾಜವಾದ ಬಂಡವಾಳಶಾಹಿ ವ್ಯವಸ್ಥೆ ಎಂತಹ ಕೃತಕರೂಪದ ಸ್ವಾತಂತ್ರ ವನ್ನು ಕಾರ್ಮಿಕವರ್ಗಕ್ಕೆ ದಯಪಾಲಿಸಿದೆ ಎಂಬುದು ವೇದ್ಯವಾಗಿರುವ ಅಂಶ, ಸ್ವಾತಂತ್ರದ ಹೆಸರಿನಲ್ಲಿ ಬಂಡವಾಳಶಾಹಿ ವ್ಯವಸ್ಥೆ ಜನಸಮು ದಾಯಕ್ಕೆ ಆರ್ಥಿಕದಾಸ್ಯವನ್ನು ಕಲ್ಪಿಸಿದೆ. ಪೌರರು ಹೊಟ್ಟೆಯ ಪಾಡಿಗಾಗಿ ತಮ್ಮ ವ್ಯಕ್ತಿತ್ವವನ್ನೇ ಕಳೆದುಕೊಂಡಿದ್ದಾರೆ. ಬಂಡವಾಳ ಶಾಹಿ ವ್ಯವಸ್ಥೆ ಎಡೆಕೊಟ್ಟಿರುವ ಸ್ವಾತಂತ್ರ್ಯಗಳು ಸ್ವಾಮ್ಯವರ್ಗಕ್ಕೆ ಮಾತ್ರ ಕಲ್ಪಿಸಿರುವ ಸ್ವಾತಂತ್ರ್ಯಗಳಾಗಿವೆ; ಕಾರ್ಮಿಕವರ್ಗದ ಸ್ವಾತಂತ್ರದ ಹೆಸರಿನಲ್ಲಿ ನಡೆಯಲು ಅವಕಾಶವಾಗಿದೆ. ಶೋಷಣೆ ಜನಸಮುದಾಯದ ಏಳಿಗೆಗೇ ಕಂಟಕವಾಗಿರುವ ಬಂಡವಾಳಶಾಹಿ ಸ್ವಾತಂತ್ರ್ಯಗಳಿಗೆ (Capitalist Liberties) ಆಧುನಿಕ ಸಮಾಜ ವಾದೀ ವ್ಯವಸ್ಥೆಯಲ್ಲಿ ಪುರಸ್ಕಾರವಿಲ್ಲ. ಅದಕ್ಕೆ ಪ್ರತಿಯಾಗಿ ಸತ್ವರ ಏಳಿಗೆಗೂ ಅವಕಾಶವಿರುವಂತಹ ಮೇಲ್ಮಟ್ಟದ ಸಮಾಜವಾದೀ ಸ್ವಾತಂತ್ರಕ್ಕೆ (Socialist Liberty) ಮಾತ್ರ ಸ್ಥಳವಿದೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವಂತೆ ವ್ಯಕ್ತಿಗಳು ಸಮಾನ ಸಾಮಾಜಿಕ ಮತ್ತು ರಾಜ ಕೀಯ ಹಕ್ಕುಗಳನ್ನು (Social and Political Rights) ಹೊಂದಿರುವುದು ಮಾತ್ರವಲ್ಲದೆ, ಆಧುನಿಕ ಸಮಾಜವಾದೀ ವ್ಯವಸ್ಥೆಯಲ್ಲಿ ಆರ್ಥಿಕವಾಗಿಯೂ ವ್ಯಕ್ತಿಗಳು ಸಮಾನಹಕ್ಕನ್ನು ಪಡೆದಿದ್ದಾರೆ. ಜನ ಜೀವನಕ್ಕೆ ಆಧಾರಭೂತವಾದ ಸಂಪತ್ ಸಾಧನಗಳು ಅಲ್ಪ ಸಂಖ್ಯಾತರ ಸುಖಕ್ಕಾಗಿ ಇರದೆ ಎಲ್ಲರ ಸುಖಕ್ಕಾಗಿ ಮತ್ತು ಏಳಿಗೆಗಾಗಿ ಮೀಸಲಾಗಿವೆ. ಜನಸಮುದಾಯವನ್ನು ಶೋಷಣೆಯಿಂದ ನಿರುದ್ಯೋಗದಿಂದ, ಮತ್ತು ಆರ್ಥಿಕದುಃಸ್ಥಿತಿಯಿಂದ ಪಾರುಮಾಡಲು ಸಮಾಜದ ಸಂಪತ್ ಸಾಧನ ಗಳನ್ನು ಸಮಾಜೀಕರಣ ಮಾಡಲಾಗಿದೆ. (1) ಆರ್ಥಿಕ ಸಮಾನತೆಯ ಅರ್ಥಕ್ಕೆ -೧೦೦ ನೇ ಪುಟ ನೋಡಿ, ಈ ಪುಸ್ತ ಕದ ಹಲವೆಡೆಗಳಲ್ಲಿ ಆಧುನಿಕ ಸಮಾಜವಾದೀವ್ಯವಸ್ಥೆ ಆರ್ಥಿಕವಾಗಿಯು ವ್ಯಕ್ತ ಗಳಿಗೆ ಸಮಾನತೆ ತರುತ್ತದೆ ಎಂದೂ, ಪ್ರಜಾಸತ್ತೆಯ ಅರ್ಥ ಆರ್ಥಿಕ ಪ್ರಜಾ ಸತ್ತೆಯೂ ಅಹುದೆಂದೂ ಹೇಳಲಾಗಿದೆ. ಪುಟ ೧೧೬ ರಲ್ಲಿ ಗಿಲ್ಡ್ 7 ಸಮಾಜವಾದ ವನ್ನು ವಿವರಿಸುವಾಗ ಆರ್ಥಿಕಪ್ರಜಾಸತ್ತೆಯನ್ನು ತರುವುದು ಅವರ ಉದ್ದೇಶ ಆದುದರಿಂದ, ಆಧುನಿಕ (ಮಾರ್ಕ್ಸ್‌ವಾದ) ವಾಗಿದೆ ಎಂದು ಹೇಳಲಾಗಿದೆ. ಹೇಳಲಾಗಿದೆ. ಆದುದರಿಂದ,