ಸಮಾಜವಾದದ ಸಮಸ್ಯೆಗಳು ೧೬೯ ಸ್ವಾತಂತ್ರ್ಯ ಗಳಿಗೆ ಚ್ಯುತಿ ತರುವ ಅಂಶ. ಮೃತಪ್ರಾಯ ಬಂಡವಾಳಶಾಹಿ ವ್ಯವಸ್ಥೆಯನ್ನು ವಿಮರ್ಶಿಸಿ, ಅದರ ಅಳಿವು ನಿಶ್ಚಯವೆಂದೂ, ಅದರ ಅಳವಿ ನೊಡನೆ ಹೊಸ ಆರ್ಥಿಕ ಸಂಬಂಧ ಮತ್ತು ಸ್ವಾತಂತ್ರ್ಯಗಳು ಬರುವು ವೆಂದೂ ಆಧುನಿಕ ಸಮಾಜವಾದ ತಿಳಿಸುತ್ತದೆ. ವ್ಯಕ್ತಿ ಸ್ವಾತಂತ್ರ ಕೇವಲ ಒಂದು ಭಾವನೆಯಲ್ಲ; ನಿತ್ಯ ಜೀವನದಲ್ಲಿ ಜನಸಮುದಾಯ ವಾಸ್ತವವಾಗಿ ಅನುಭವಿಸುವ ಅಂಶವಾಗಿರಬೇಕು, ಅಂತಹ ವಾಸ್ತವ ಅನುಭವವನ್ನು ಆಧುನಿಕ ಸಮಾಜವಾದೀ ವ್ಯವಸ್ಥೆ ಸಮಾಜದ ಸಂಪತ್ ಸಾಧನಗಳಲ್ಲಿ ಖಾಸಗೀ ಸ್ವಾಮ್ಯವನ್ನೂ, ವರ್ಗ ಗಳನ್ನೂ, ಶೋಷಣೆಯನ್ನೂ, ವಿನಾಶಗೊಳಿಸುವುದರ ಮೂಲಕ ಕಲ್ಪಿಸಿ ಕೊಡುತ್ತದೆ. ಒ೦ಡವಾಳಶಾಹಿ ಪ್ರಜಾಸತ್ತೆಯಲ್ಲಿ ಸತ್ವಹೀನವಾಗಿರುವ ಸಾಮಾಜಿಕ ಮತ್ತು ರಾಜಕೀಯ ಹಕ್ಕಗಳು, ಆರ್ಥಿಕ ಸಮಾನತೆಯಿಂದ ಪುಷ್ಟಿ ಪಡೆದು ವ್ಯಕ್ತಿ ಜೀವನ ಪ್ರಫುಲ್ಲವಾಗುವಂತೆ ಸಮಾಜವಾದೀ ಆರ್ಥಿಕ ವ್ಯವಸ್ಥೆ ಅಣಿಮಾಡಿಕೊಡುತ್ತದೆ, ನಾಲ್ಕನೆಯದಾಗಿ, ಸಮಾಜದಲ್ಲಿರುವ ಕುಂದುಕೊರತೆಗಳಿಗೆ ಸ್ವಾಮ್ಯವೇ ಮುಖ್ಯ ಕಾರಣವೆಂದು ಭಾವಿಸುವುದು ತಪ್ಪಾಗುತ್ತದೆಂದೂ, ಅನೇಕ ಕುಂದು ಕೊರತೆಗಳಿಗೆ ಮನುಷ್ಯ ಸ್ವಭಾವ (Human Nature) ಕಾರಣ ವಾಗಿದೆಯೆಂದೂ, ವ್ಯಕ್ತಿಗಳ ಮನೋವೃತ್ತಿ ಮತ್ತು ಸ್ವಭಾವವನ್ನು ತಿದ್ದು ಪಡಿ ಮಾಡಿದಹೊರತೂ ಸಮಾಜದಲ್ಲಿರುವ ಕುಂದುಕೊರತೆಗಳ ಸಮಸ್ಯೆ ಯನ್ನು ಬಗೆ ಹರಿಸಿದಂತೆಯೇ ಆಗುವುದಿಲ್ಲವೆಂದೂ, ಸಮಾಜವಾದೀ ವ್ಯವಸ್ಥೆಯಲ್ಲಿ ಮನುಷ್ಯ ಮನೋವೃತ್ತಿ ಮತ್ತು ಸ್ವಭಾವದಿಂದ ಹೊಮ್ಮುವ ದ್ವೇಷ, ಮೋಸ, ಅಸಹನೆ, ದುರಾಸೆ, ಸ್ವಾರ್ಥ, ಇತ್ಯಾದಿ ಇರುವುದಾದರೆ ಸಮಾಜವಾದದ ಹೋರಾಟ ವ್ಯರ್ಥವಾಗುತ್ತದೆಂದೂ, ಈ ದುರ್ಗುಣಗಳೇ ಆದಿಯಿಂದ ಇಲ್ಲಿಯವರೆಗೆ ಸಮಾಜ ಜೀವನವನ್ನು ವಿಕಾರಗೊಳಿಸುತ್ತಲಿವೆ ಯೆಂದೂ, ಆದದರಿಂದ ನೈತಿಕ ಕ್ರಾಂತಿಯಿಂದ ಮಾತ್ರ ಸಮಾಜದ ಕುಂದು ಕೊರತೆಗಳನ್ನು ತೊಡೆದುಹಾಕಲು ಸಾಧ್ಯ ಎಂದೂ ವಾದವಿದೆ. ಮನುಷ್ಯ ಸ್ವಭಾವ ಮತ್ತು ವರ್ತನೆಯ ಬಗ್ಗೆ ಆವರಣ (Environ- ment) ವಾದಕ್ಕೆ ಆಧುನಿಕ ಸಮಾಜವಾದ ಸಮರ್ಥನೆಕೊಟ್ಟಿದೆ. ಮಾನವ ವ್ಯಕ್ತಿ ಸಮಾಜಜೀವಿ ಮತ್ತು ಸಂಘಜೀವಿ, ಆತನ ಸ್ವಭಾವವನ್ನು ಆತನು
ಪುಟ:ಕಮ್ಯೂನಿಸಂ.djvu/೧೮೩
ಗೋಚರ