ಸಮಾಜವಾದದ ಸಮಸ್ಯೆಗಳು ಇವು ಅವಕಾಶಕೊಡುತ್ತಿಲ್ಲ. ಆದುದರಿಂದ ಸುಗುಣಾವಳಿಗಳ ಮತ್ತು ನೀತಿಯ ಉಪದೇಶ, ಉಪದೇಶವಾಗಿ ಉಳಿದಿದೆಯೇ ವಿನಾ, ಜೀವನದಲ್ಲಿ ಬೆರಕೆಯಾಗಿಲ್ಲ. ಸ್ಥಿತಿಗತಿ ಹೀಗಿರುವಾಗ ನೀತಿಗಳಿಗೆ ಚ್ಯುತಿ ಬಂತೆಂಬ ವಾದಕ್ಕೂ ನೀತಿಗಳ ಸ್ವರೂಪವನ್ನು ಅರಿಯಲು ಪೂಜೆ, ಭಕ್ತಿ ಮತ್ತು ಆಸ್ತಿಕತ್ವ ಇವು ಗಳಿಂದ ಸಾಧ್ಯವೆಂಬ ವಾದಕ್ಕೂ ಅವಕಾಶವೇ ಇಲ್ಲ. ಸಮಾಜವಿದೆ ; ಜೀವಂತ ವ್ಯಕ್ತಿಗಳಿದ್ದಾರೆ; ಬಂಡವಾಳಶಾಹಿ ವ್ಯವಸ್ಥೆ ವ್ಯಕ್ತಿಗಳ ಸ್ವಭಾವ ಮತ್ತು ವರ್ತನೆಯ ಮೇಲೆ ಬೀರಿರುವ ದುಃಸ್ವಭಾವವಿದೆ. ಈಗ ನೈತಿಕ ಸಮಸ್ಯೆಯ ಪರಿಹಾರಕ್ಕಾಗಿ ಈ ದುಃಷ್ಪಭಾವವನ್ನು ತೊಡೆಯಬೇಕು. ಸಮಾಜವಾದೀ ಆವರಣ ವ್ಯಕ್ತಿ ವರ್ತನೆಯಲ್ಲಿ ಬದಲಾವಣೆಯನ್ನೂ, ಸ್ವಭಾವದಲ್ಲಿ ಪರಿವರ್ತನೆಯನ್ನೂ ತರುವುದರಿಂದ ನೈತಿಕಸಮಸ್ಯೆ ಕ್ರಮೇಣ ತಾನಾಗಿಯೇ ಬಗೆಹರಿಯುತ್ತದೆ. ಹಾಗಾದರೆ ದೈವಭಾವನೆ (Religion) ಹೇಗೆ ಬಂದಿತು ? ಮಾನವ ಜೀವಿಗಳು ಅನುಭವಿಸುತ್ತಿರುವ ಕಷ್ಟ ಜೀವನ, ನಿರಾಶೆಯ ಜೀವನ, ದೈವ ಭಾವನೆಗೆ ಆಸರೆಯಾಗಿವೆ. ದೈವಭಾವನೆ ಮನುಷ್ಯನಿರ್ಮಿತ ಭ್ರಮೆಯಲ್ಲಿ ಮರೆ ಹೊಗುವುದಾಗಿದೆ; ದೇವರ ಧ್ಯಾನದಿಂದ ಇಲ್ಲದಿರುವುದನ್ನು ಹೊಂದಿದ ಹಾಗೆ ಮನೋಶಮನವನ್ನು ಕಲ್ಪಿಸಿಕೊಳ್ಳುವುದಾಗಿದೆ. (Religion is the opium of the masses). ಬಂಡವಾಳಶಾಹಿ ವ್ಯವಸ್ಥೆಯ ವಿರಸಗಳೂ, ಅನಿರೀಕ್ಷಿತವಾಗಿ ಸಂಭವಿಸುವ ತೊಂದರೆಗಳೂ (ಉದಾ. ನಿರುದ್ಯೋಗ, ವ್ಯಾಪಾರದಲ್ಲಿ ನಷ್ಟ, ಇತ್ಯಾದಿ), ತನ್ನನ್ನು ಸುತ್ತುವರಿಯದಿರ ಲೆಂದು ಕೃತಕ ಮಾನಸಿಕ ಪರಿಹಾರವನ್ನು ನಿರ್ಮಿಸಿಕೊಳ್ಳುವುದಾಗಿದೆ. ಸಂಪ್ರದಾಯ, ಹೆದರಿಕೆ ಮತ್ತು ಅನಿಶ್ಚಿತ ವಾತಾವರಣ ದೈವಭಾವನೆಯ ಹಿಡಿತವನ್ನು ಬಲಪಡಿಸುತ್ತವೆ. ಈ ಹೆದರಿಕೆಯನ್ನೂ ಕೃತಕ ಮಾನಸಿಕ ಪರಿಹಾರವನ್ನೂ ಭ್ರಮೆಯನ್ನೂ ತೊಡೆದುಹಾಕಿದ ಹೊರತು ಮಾನವ ವ್ಯಕ್ತಿಗಳ ವಿಕಾಸಕ್ಕೆ ಅವಕಾಶವಿಲ್ಲ. ದೈವಭಾವನೆಯ ಬಗ್ಗೆ ಸಮಾಜ ವಾದದ ದೃಷ್ಟಿ ನಾಸ್ತಿಕವಾದವಾದರೂ ವೈಜ್ಞಾನಿಕ ದೃಷ್ಟಿಯಾಗಿದೆ. ಐದನೆಯದಾಗಿ, ವ್ಯಕ್ತಿಗಳ ಬಾಳಿನಲ್ಲಿ ಮತ್ತು ಸಮಾಜದ ಬೆಳವಣಿಗೆ ಯಲ್ಲಿ ಅರ್ಥವೇ ಪ್ರಾಧಾನ್ಯವಲ್ಲವೆಂದೂ, ಇತರ ಶಕ್ತಿಗಳಾದ ಮನುಷ್ಯನ
ಪುಟ:ಕಮ್ಯೂನಿಸಂ.djvu/೧೮೫
ಗೋಚರ