ಕನ್ನಡ ಪರಮಾರ್ಥ ಸೋಪಾನ
(ಪ್ರಾಣಲಿಂಗ) (ರಾಗ-ಸೋಹನಿ, ತಾಲ-ದೀಪಚಂದಿ)
ಪ್ರಾಣಲಿಂಗವಿದನು ಗುರುವಿ | ನಾಣತಿಯೊಳು ಕೇಳಿ ನೋಡಿ | ಮಾಣದೇಕ ಚಿತ್ತದಿಂದ ಜಾನಿಪನೆ ಕೃತಾರ್ಥನು
ಅಸುವೆ ರವಿಯ-ಪಾನಮಿಂದು | ವೆನಿಪುದವರೊಳಗಲದೊಂದಿ | ಮಿಸುವ ಶ್ರಾಂತ ಸಾಂತವಾದ ಶೈವಶಕ್ತಿ ಬೀಜದ ||
ಬೆಸುಗೆಯಾದ ತಾಣದೇಕವರ್ಣದಖಿಳ ವೃತ್ತಿಮಯದ | ಪೆಸರು ತಳೆದು ಶ್ರವಣವಿಷಯವಾದ ಪರಮನಾದವೆ
ಮೂಲಲಿಂಗ ನಾಭಿಹೃದಯ ಕಂಠ ಕೂರ್ಚ ಗೋತ್ರ ಮೊತ್ತ | ಜಾಲದಂಬುಜಾಕ್ಷರಾದಿ ದೈವ ಮಂತ್ರಶಕ್ತಿಯ ||
ಮೇಳದೊಡನೆ ಕೆಂಪು ಮಿಂಚು ರನ್ನ ಚಿನ್ನ ಸೊಡರು ಚಂಚ | ಲಾಲತಾಗ್ನಿ ದೀಪ್ತರೂಪದೋರ್ಪ ದಿವ್ಯ ಬಿಂದುವೆ
ಪಲವು ವಿವರವಾಂತ ಕುಂಭದೊಳಗಣಚಲ ದೀಪದೊಂದು | ಬೆಳಗು ಮಸಗುವಂತೆ ದೇಹಕರಣ ನಿರಕ ಮುಖದೊಳು ||
ಪೊಳೆದು ವಿಶ್ವ ದೃಶ್ಯ ವೀಥಿಗಳನ್ನು ಬೇರೆ ಬೇರೆ ತೋರ್ಕೆ- | ಗೊಳಿಪ ಚಾರು ಚಿತ್ಕಲ ಪ್ರಪೂರ್ಣ ಶಂಭುಲಿಂಗವೆ
( ಭಾವಲಿಂಗ) (ರಾಗ-ಮಾಲ ಕಂಸ, ತಾಲ-ದೀಪಚಂದಿ)
ಭಾವಲಿಂಗವನೆ ಬಿಡದೆ ನೀನು | ಪರಿ- 1 ಭಾವಿಸು ಭೇದವಿಲ್ಲದೆ ಯೋಗಿ
ಗುರುಮಂತ್ರ ಶಕ್ತಿಯಿಂದುದಿಸದೆ | ಯೋಗ | ಕರಣ ಮಥನದೊಳುಜ್ವಲಿಸದೆ ||
ಕರಹೃದಯದ ಹವಣೆನಿಸದೆ | ನಿತ್ಯ | ಪರಿಪೂರ್ಣಾನಂದವಚ್ಚಳಿಯದೆ
ದೀಪವು ದೀಪದ ಕಿರಣವ | ತಾನೆ | ವ್ಯಾಪಿಸಿ ತೋರುವ ಪ್ರಭೆಯಂತೆ ||
ರೂಪಿಸಿ ಬೆಳಗುವಿಷ್ಟ ಪ್ರಾಣ | ಲಿಂಗಾ- | ರೋಪವಿಲ್ಲದ ನಿರುಪಾಧಿಯ