ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕನ್ನಡ ಪರಮಾರ್ಥ ಸೋಪಾನ
ಗಿರಿಶಿಖರಕಗ್ನಿ ಮುಖದೊ- | ಇರುವ ಅರ್ಕೆಶ್ವರನ ಹಿಂದೆ ||
ಸುರಿಯುವಮೃತ ಪಂಚಧಾರಗಳು | ಓಂ ಶ್ರೀಗುರುಸಿದ್ದಾ | ಅರಿತು ಸೇವಿಸಿ ಮರಣವಿಲ್ಲವೊ
ಇಂತು ಶ್ರೀಶೈಲದ ಘನವ | ಭ್ರಾಂತಿಯಳಿದು ತಿರುಗಿ ನೋಡಿ ||
ಅಂತರಂಗದ ಗುಡಿಯ ಹೊಕ್ಕೆನೋ | ಓಂ ಶ್ರೀಗುರುಸಿದ್ಧಾ | ಶಾಂತಮಲ್ಲ ತಾನೆ ತಾನಾದೆನೊ
ಪ್ರಾಕೃತಿಕ, ಪಾರಮಾರ್ಥಿಕ ಹಾಗೂ ತಾತ್ವಿಕ ಅಂಗಗಳು (ಇಷ್ಟಲಿಂಗ) (ರಾಗ-ಕಾಂಬೋಧಿ, ತಾಲ-ದೀಪಚಂದಿ)
ಪರತರ ಶಿವಲಿಂಗವೆಳಸಿ ನಿನಗಾಗಿ | ಕರ ಕಂಜದೊಳು ಕಾಣಿಸಿತು ಯೋಗಿ ಯಜಿಸು
ಮೊದಲ ಪೀಠವೆ ಬಿಂದುವಾಗಿ ಮೇಲೆ ನಿಂದೆ- 1 ಸದ ಪೀಠವದು ನಾದವಾಗಿ ಗೋಮುಖವೆ ||
ಸದಮಳ ಕಳೆಯಾಗಿ ಸಕಲಾತೀತವೆ ಲಿಂ- 1 ಗದ ನಿಜವಾಗಿರಲದರೊಳುಜ್ವಲಿಪ
ತರು ವಿಸ್ತಾರವನೊಳಕೊಂಡಿರ್ದ ಬೀಜದ | ಪರಿಯಂತರಾರಧಗಳಿಗಿಂಬುವಡೆದ ||
ಪರಬೊಮ್ಮಕಾಶ್ರಯವಾಗಿಹ ನಿಜಶಕ್ತಿ | ವೆರಸಿ ತನಗೆ ತಾನಾಧಾರವಾಗಿರ್ಪ
ಮರು ಮಂಡಲವನುಚ್ಚಳಿಸಿ ಗುಣವರ್ಣ | ಮೂರನು ಮೀರಿ ಬೋಧಮಾತ್ರವಾಗಿ ||
ತೋರುವ ನಿಜಗುರು ಶಂಭುಲಿಂಗವದು ತಾನೆ | ಬೇರೆನಿಸದೆ ನಿನ್ನ ಕಣ್ಣ ಮುಂದಿಹುದು