ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ಸೋಪಾನ

ಶ್ರೀಗಿರಿಯು ಶರೀರದೊಳಗುಂಟು | ಓಂ ಶ್ರೀಗುರುಸಿದ್ದಾ | ಯೋಗಿ ಜನರ ಮರ್ಮ ಬ್ಯಾರುಂಟು

ಆರು ಬೆಟ್ಟವ ದಾಟಿ ನಡೆದು | ಮೂರು ಕೊಳ್ಳದ ಮೂಲಕ್ಕಿಳಿದು ||

ಏರಿದೆನೊ ಕೈಲಾಸ ದ್ವಾರವ | ಓಂ ಶ್ರೀಗುರುಸಿದ್ದಾ | ಸಾರಿ ಬಡಗಲ ಗುಡಿಯ ಕಂಡೆನು

ಏಳು ಸುತ್ತಿನ ಕೋಟೆಯೊಳಗೆ | ನೀಲದುಪ್ಪರಿಗೆಗಳ ನಡುವೆ ||

ತಾಳ ಮದ್ದಲೆ ಗಂಟೆ ಭೇರಿಗಳು | ಓಂ ಶ್ರೀಗುರುಸಿದ್ದಾ | ವೇಳೆ ವೇಳೆಗೆ ತಾವೆ ನುಡಿಯುವವೊ

ಒಂಭತ್ತು ಬಾಗಿಲಗಳದರೆ | ಳಿಂಬಾದ ಬೀದಿಗಳು ನಾಲ್ಕು ||

ತುಂಬಿ ಸೂಸುವ ಕೊಳಗಳೇಳುಂಟು | ಓಂ ಶ್ರೀಗುರುಸಿದ್ದಾ | ಸ್ತಂಭವೆರಡು ಶಿಖರವೊಂದುಂಟು

ಪಾತಾಳ ಗಂಗೆಯೊಳು ಮಿಂದು | ಓತು ಶಿಖರೇಶ್ವರನಿಗೇರಿ ||

ಜ್ಯೋತಿರ್ಲಿಂಗಕ್ಕೆ ದೃಷ್ಟಿಯನಿಟ್ಟಿದೆನೋ | ಓಂ ಶ್ರೀಗುರುಸಿದ್ಧಾ | ಜ್ಯೋತಿರ್ಲಿಂಗವು ಕರದಿ ಕಾಣಿಸಿತೋ

ಬರುವ ಕೋಣಗಳೆಂಟ ಬಡಿದೆ | ಹಿರಿಯ ಹುಲಿಗಳನಾರ ತಡೆದೆ ||

ಮೊರೆವ ಸರ್ಪದ ಹೆಡೆಯ ಮೆಟ್ಟಿದೆನೋ | ಓಂ ಶ್ರೀಗುರುಸಿದ್ದಾ | ಚರಿಪ ಕಪಿಯನು ಹಿಡಿದು ಕಟ್ಟಿದೆನೋ

ಸಪ್ತ ನದಿಯ ಸಂಗಮ ದಾಟಿ | ಗುಪ್ತ ಕದಳೀ ಬನದಲ್ಲಿ ಸುಳಿದು ||

ಲಿಪ್ತ ಗುಹೆಯೊಳಗೊಬ್ಬನೆ ಪೊಕ್ಕಿದೆನೊ | ಓಂ ಶ್ರೀಗುರುಸಿದ್ದಾ | ಸಪ್ತವರ್ಣದ ಲಿಂಗವ ಕಂಡಿಹೆ

ಇಂದ್ರ ದಿಕ್ಕಿನೊಳೆದ್ದು ಸೂರ್ಯ- 1 ಚಂದ್ರ ಗುಪ್ತದ ಪುರದೊಳು ಮುಳುಗಿ ||

ಚಂದಚಂದದ ಬೆಳಕು ತೋರುವದು | ಓಂ ಶ್ರೀಗುರುಸಿದ್ದಾ | ನಿಂದು ನೋಡಲು ಬಯಲಿಗೆ ಬಯಲಾಯಿತೆ