ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಪರಮಾರ್ಥ ನೋಪಾನ

ಸೂಳಿ ಗೆಳೆಯರು ಕೂಡಿ ಬಂದರೆ ಹಿಗ್ಗುವಂತೆ | ನಮ್ಮ ತಾಯಿ ತಂದೆಯೆಂದು ಪಾದಕ್ಕೆರಗುವಂತೆ ||

ರಾತ್ರಿ ತುಡುಗರು ಬಂದರೆ ಸದ್ದು ರುವಿನಂತೆ | ಇದ್ದದೆಲ್ಲಾ ಕೊಟ್ಟು ಕಾಲ ಹಿಡಿಯುವಂತೆ

ವೈರಿ ಹೊಡೆಯಲಿಕ್ಕೆ ಬಂದರೆ ನಗುವಂತೆ | ನಾ ಬಡಿಸಿಕೊಂಡು ಕಾಲ ಹಿಡಿದುಕೊಳ್ಳುವಂತೆ ||

ನನ್ನ ಕೈ ಮುಟ್ಟಿ ದೇಹ ಕಡಿದು ಕೊಡುವಂತೆ | ಗುರು ಆಶೀರ್ವಾದ ಪೂರ್ಣ ಆಯಿತಂತೆ

ವಾದವೆಲ್ಲ ವೇದಾರ್ಥ ಆಗುವಂತೆ | ನಾ ಅರ್ಥಮಾಡಿ ಹಾಡ್ಯಾಡಿ ನಗುವಂತೆ ||

ಷಡ್ ರುಚಿಗಳು ಬೇವಿನ ಕಾಯಿ ತಿಂದಂತೆ | ನಿಮ್ಮ ನಾಮದ ರಸವು ಜೇನತುಪ್ಪಾ ಸುರದಂತೆ

ಈ ದೃಶ್ಯವೆಲ್ಲಾ ಶಿವಮಯವಾಗುವಂತೆ | ಈ ದೃಶ್ಯವಿಲ್ಲದಾಗಿ ಅಡಗಿ ಹೋಗುವಂತೆ ||

ಶಬ್ದದೊಳು ಶಬ್ದ ಹೋಗಿ ಕೂಡುವಂತೆ | ನಿಃಶಬ್ದದೊಳು ಓಂಕಾರ ಪಾಡುವಂತೆ

ಕತ್ತಲಿ ಬಿತ್ತಲಿ ಗೊತ್ತು ಇಲ್ಲದಂತೆ | ನಾ ಅಲ್ಲಿ ಇಲ್ಲಿ ಎಲ್ಲಿ ಏನು ಎಂಬುವಂತೆ ||

ತಾರೆ ಕಡಿದು ಸೂರ್ಯ ಕೆಳಗೆ ಬಂದಂತೆ | ಗುರು ನಂದ್ಯಾಳ ಸಂಗನ ದಯ ಪೂರ್ಣವಾಗುವಂತೆ

ನೈತಿಕ ಕಾಳಗದಿಂದ ಲಭಿಸಿದ ಆನಂದಪರವಶತೆ ( ರಾಗ, ಮಿಶ್ರ ಕಾಫಿ, ತಾಲ-ಕೇರವಾ)

ಮಣಿಯದೆ ಮಲಗಿದೆನೋ | ನಾನು | ದಣಿಯದೆ ಮಲಗಿದೆ

ಮಣಿದು ಗುರುವಿಗೆ | ಹಣಿದು ಶತ್ರುವ | ಹರಿಸಿ ರಕ್ತವಾ | ಕುಣಿಸಿ ತಲೆಗಳ |

ಧಣಿ ಧಣಿ ಧಣಿ ಧಣಿ ನಾದವ ಕೇಳುತ | ಮಣಿಮಂಟಪದುನ್ಮನಿ ಬೈಲಲಿ ನಾ ||