ವಿಷಯಕ್ಕೆ ಹೋಗು

ಪುಟ:ಕನ್ನಡ ಪರಮಾರ್ಥ ಸೋಪಾನ.pdf/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಕರಣ ಇಪ್ಪತ್ತು ಸಾಕ್ಷಾತ್ಕಾರದ ಪರಿಣಾಮಗಳು (ಭಾಗ-೨)

ಪಾರಮಾರ್ಥಿಕ ಜೀವನವು ಉನ್ನತತಮ ಚಟುವಟಿಕೆಯ ಜೀವನ ( ರಾಗ-ದರಬಾರಿ, ತಾಲ-ದೀಪಚಂದಿ )

ಬ್ರಹ್ಮಾನಂದದ ಸುಖವೇನು ನಿನಗೆ | ಸುಮ್ಮನಿದ್ದರೆ ಹ್ಯಾಂಗಾಗುವದರುವೆ

ದ್ವಾರಗಳೊಂಬತ್ತು ಬಾಗಿಲ ಮುಚ್ಚುವ ತನಕ | ಪರಮಪ್ರಕಾಶದ ಕದ ತೆರೆಯುವ ತನಕ ||

ಹರಿವ ತ್ರಿನದಿ ಸಂಗಮ ದಾಟುವ ತನಕ | ಎರಡು ದಾರಿಯ ಬಿಟ್ಟು ನಡು ಹೋಗುವ ತನಕ

ರಂಗಮಂಟಪ ಪೊಕ್ಕು ಸ್ಥಿರವಾಗುವ ತನಕ | ಹಿಂಗದ ರವಿಕೋಟಿ ಪ್ರಭೆ ಕಾಣುವ ತನಕ ||

ಕಂಗೊಳಿಸುವನಾರ್ಭಟ ಕೇಳುವ ತನಕ | ಕಂಗಳಲ್ಲಿ ಕಣ್ಣ ಕಂಡು ಬೆರಗಾಗುವ ತನಕ

ಘನ ಮಹಾಲಿಂಗನ ಪೂಜೆ ಆಗುವ ತನಕ | ಅನುಹತದಿಂದ ಮೈ ಮರೆದಿರುವ ತನಕ ||

ಮನಸಿನ ಮೈಲಿಗಿ ತೊಳೆದು ಹೋಗುವ ತನಕ | ದಿನಕರ ಬಸವನ ದಯವಾಗುವ ತನಕ

ಎಲ್ಲೆಲ್ಲಿಯೂ ಆತ್ಮದರ್ಶನವಾದ ಸಾಧಕನಿಗೆ ಪೂರ್ಣ ಸಮದೃಷ್ಟಿ ಉಂಟಾಗುವದು ( ರಾಗ-ಭೂಪ, ತಾಲ-ಕೇರ ವಾ )

ಎಂದು ಮೈಯಾ ಮರೆಸಿ ಇದರಂತೆ | ಈ ಜಗವೆಲ್ಲಾ ಶಿವಮಯವಾಗುವಂತೆ

ಹುಲಿ ಕರಡಿ ನೋಡಿದರೆ ಆಕಳಂತೆ | ವಿಷದ ಹಾವು ಚೇಳು ಕಂಡರೆ ಕೂಸಿನಂತೆ