ಕನ್ನಡ ಪರಮಾರ್ಥ ಸೋಪಾನ
ಕೇಶವಗೇರಿಸಿದ ಹೂವ ಮುಡಿದು ಕುಣಿದು ಆಡುವ | ಕೆಟ್ಟ | ದೋಷವೆಂಬ ಗೋಡೆಯನ್ನು ಕೆದರಿ ಕೆದರಿ ಹಾಕುವೆ
ಕೃಷ್ಣನಂಭಿಕಮಲದಲ್ಲಿ ಸೊರಗಿ ಕೊರಗಿ ಬೀಳುವ | ಭವ | ಕಷ್ಟವೆಂಬ ಕುಂಭವನ್ನು ಒಡೆದು ಒಡೆದು ಹಾಕುವೆ
ನಿಷ್ಟರನ್ನು ಕಂಡು ಅವರ ಹಿಂದೆ ಹಿಂದೆ ತಿರಗುವೆ | ಕಡು | ದುಷ್ಟರನ್ನು ಕಂಡು ಕಲ್ಲುಕಲ್ಲಿನಿಂದ ಬೀಸುವ
ಬಂಧು ಬಳಗದವರೊಳುದಾಸೀನನಾಗಿ ಬಾಳುವೆ | ಎನ್ನ | ತಂದೆ ಪುರಂದರ ವಿಠಲನ್ನ ನೆನೆದು ಕುಣಿದು ಹಾಡುವೆ
ಪರಮಾತ್ಮನ ಸಾಕ್ಷಾತ್ಕಾರದಿಂದುಂಟಾದ ಆನಂದಪರವಶತೆ ( ರಾಗ-ಮಾಂಡ, ತಾಲ-ಕೇರವಾ )
ಸದ್ಗುರು ಸಾಕಿದ ಮದ್ದಾನಿ ಬರುತಿದೆ | ಎದ್ದು ಹೋಗಿರಿ ಇದ್ದ ನಿಂದಕರು
ಬಿದ್ದು ಭವದೊಳು ಹೊರಳ್ಯಾಡು ಜನರನ್ನು | ಉದ್ದಾರ ಮಾಡುತ ಬರುತಲಿದೆ
ಆಕಾಶ ನೋಡುತ ವಾಯುವ ನುಂಗುತ | ಝೇಂಕರಿಸುತಲದು ಬರುತಲಿದೆ ||
ಓಂಕೀಲ ಹಿಡಿದು ಚೌಕ ಪೀಠದಿ ಬಂದು | ಆನಂದಭರಿತಾಗಿ ಬರುತಲಿದೆ
ಅಷ್ಟಮದಗಳೆಂಬೊ ದುಷ್ಟ ನೀಚರನೀಗ | ಶಿಟ್ಟಲೆ ಶೀಲ್ಯಾಡಿ ಬರುತಲಿದೆ ||
ಹುಟ್ಟು ಸಾವುಗಳೆಂಬೊ ಹಾದಿ ಬಟ್ಟೆಯ ಕಟ್ಟಿ | ಸುಟ್ಟು ಕಾಮಕ್ರೋಧ ಬರುತಲಿದೆ
ಪ್ರಣವಸ್ವರೂಪವ ಅನುದಿನ ನೋಡುತ | ಘನ ಸುಖದಲ್ಲಿದು ಬರುತಲಿದೆ ||
ಪ್ರಣಯಿ ಕಶನೊಳ್ ಮನ ಮಗ್ನವಂ ಮಾಡಿ | ಚಿನ್ಮಯಾತ್ಮನಾಗಿ ಬರುತಲಿದೆ