ಪುಟ:Mrutyunjaya.pdf/೪೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ೪೨೪ ಮೃತ್ಯುಂಜಯ

ಗಿದ್ದೆ. (ಅಂಗರಕ್ಷಕರೂ ಇರ್ಲಿಲ್ಲ. ಏನುಮಾ ತಾಡ್ಕೊಂಡ್ರೋ ಗೊತ್ತಾಗಲಿಲ್ಲ. ಯಾಕೊ ಬರಬರ್ತಾ ರಾಜಧಾನೀಲಿ ರಹಸ್ಯ ಸಮಾಲೋಚನೆಗಳು ಜಾಸ್ತಿಯಾಗ್ತಿವೆ....’)

   ಔಟನಿಂದ ಇದನ್ನೆಲ್ಲ ಅರಿತ ಮೆನ್ನ ರಾತ್ರೆ ಮಂದಿರದ ಅರ್ಚಕ ನಿದ್ದೆ ಹೋದೊಡನೆ ದೋಣಿಕಟ್ಟೆಗೆ ಧಾವಿಸಿದ. ಕಟ್ಟೆಯ ಮೇಲೆ ಕೆಫ್ಟುವಿನ ಅಂಬಿಗರು ಮೆನ್ನನಿಗಾಗಿ ಕಾಯುತ್ತಿದ್ದಂತಿತ್ತು.  ಕಂಡೊಡನೆ “ಬನ್ನಿ, బನ್ನಿ, ಸಾಹುಕಾರ್ರು ಕಾಯ್ತಾ ಇದ್ದಾರೆ.” ಎಂದರು.
   ತನ್ನ ಮುಂದೆ ನಿಂತ ಮೆನ್ನನೊಡನೆ ಕಫ್ಟು ಮೃದುಧ್ವನಿಯಲ್ಲಿ ಅಂದ:
   “ಒಂದು ನಿಮಿಷ ಕೂಡಾ ಪುರಸೊತ್ತು ಸಿಗಲಿಲ್ಲ. ನೀರಾನೆ ಪ್ರಾಂತದ ನಾಯಕರನ್ನು ನೋಡೋದಕ್ಕೆ ಆಗಲಿಲ್ಲ. ಅವರು ನನ್ನನ್ನು ಕ್ಷಮಿಸ್ಬೇಕು.ನೀವು ಬರೋದನ್ನೇ ಇದಿರು ನೋಡ್ತಿದ್ದೆ. ಈ ಸುಮಾರಿಗೆ ನೀವು ಬಂದೇ ಬರ್ತೀರಿ ಅಂತ ನನಗೆ ಖಾತರಿ ಇತ್ತು. ಈಗಿಂದೀಗ ನೀರಾನೆ ಪ್ರಾಂತಕ್ಕೆ ಹೊರಡ್ತೇವೆ. ಸೆಡ್ ಉತ್ಸವದ ಮುನ್ನಾ ದಿನವೇ ಅವರ ಸಂಗಡಿಗರೆಲ್ಲ ಇಲ್ಲಿಗೆ ಬರೋ ಹಾಗೆ ಮಾಡ್ತೇನೆ.  ನಾಯಕರು ನಿಶ್ಚಿಂತೆಯಾಗಿರ್ಲಿ. ಎಲ್ಲ ಸರಿ ಹೋಗ್ತದೆ.”
   “ಬಟಾನನ್ನು ಕಂಡು ನೀವು ವಿಷಯ ತಿಳಿಸೋದರಿಂದ ದೊಡ್ಡ ಉಪಕಾರ ಮಾಡಿದಂತಾಗ್ತದೆ.”
  —ಮೆನ್ನನ ಮಾತು ತಡೆತಡೆದು ಬಂತು.
  “ರಾ ನಿಮಗೆ ಒಳ್ಳೇದು ಮಾಡ್ಲಿ—ಅಂತ ನೀವು ನನಗೆ ಹೇಳೋ ದಿಲ್ಲವಾ ?"
  “ನಾನು ದೇವಸೇವಕ ಅಷ್ಟಾದರೂ ಹೇಳೋದು ಬೇಡವೆ?ಪ್ ಟಾ ಅಮೆನ್ ರಾ—ಎಲ್ರೂ ನಿಮಗೆ     

ಒಳ್ಳೇದು ಮಾಡ್ಲಿ. ಬರಲಾ?”

  ಕೆಫ್ಟು ಕೈಹಿಡಿದು ವಿದಾಯ ಹೇಳಿದ. ನಾವೆಯ ಹಾಯಿಗಳನ್ನಾಗಲೇ ಏರಿಸಿ ಕಟ್ಟಿದ್ದರು. ಅವುಗಳಲ್ಲಿ ಗಾಳಿ ತುಂಬಿಕೊಂಡು ಮುಂದುವರಿಯಲು ನಾವೆ ತುಡಿಯುತ್ತಿತ್ತು.  ಮೆನ್ನ ಕಟ್ಟೆ ಸೇರಿದೊಡನೆ, ಹಲಗೆಗಳನ್ನು ತೆಗೆದರು. ಕಟ್ಟೆಯ ಗೂಟದ ಬಂಧನದಿಂದ ನಾವೆಯನ್ನು ಮುಕ್ತಗೊಳಿಸಿದರು. ನಾವೆ ನದಿಯ ನಡುವಿಗೆ ಬರಲೆಂದು ಹುಟ್ಟು ಹಾಕಿದರು ಕೂಡಾ.