ಪುಟ:AAHVANA.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಹ್ವಾನ

“ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ. ಅವರ ಕಲ್ಯಾಣದಲ್ಲೇ ಅವನ ಕಲ್ಯಾಣ, ತನಗೆ ಇಷ್ಟವೆನಿಸಿದ್ದರಿಂದಲೇ ತನ್ನ ಒಳಿತು ಎಂದ ಆತ ಪರಿಗಣಿಸಬಾರದು, ಬದಲು, ತನ್ನ ಪ್ರಜೆಗಳಿಗೆ ಇಷ್ಟವಾದ್ದರಿಂದಲೇ ತನ್ನ ಒಳಿತು-ಎಂದು ಭಾವಿಸಬೇಕು.”

ಮೇಲಿನದು ಚಂದ್ರಗುಪ್ತನ ಪ್ರಧಾನಾಮಾತ್ಯನಾಗಿದ್ದ ಕೌಟಿಲ್ಯನ (ಅರ್ಥಶಾಸ್ತ್ರದಿಂದ ಒಂದು ಉಲ್ಲೇಖ, ಅದು ರಾಜ್ಯಾಡಳಿತದ ಆಗಿನ ಸೂತ್ರವಾಗಿತ್ತು, ಮುಂದೆ ಕ್ರಿಸ್ತ ಪೂರ್ವ ಮೂರನೆಯ ಶತಮಾನದಲ್ಲಿ ಸಮ್ರಾಟ ಅಶೋಕನ ಕಾಲದಲ್ಲಿ ಭಾರತ ಧರ್ಮಸಾಮ್ರಾಜ್ಯವೆನಿಸಿತು.

“ಎಲ್ಲ ಜನರೂ ನನ್ನ ಮಕ್ಕಳು........ಮುಖ್ಯವಾಗಿ ನಾನು ಬುದ್ಧ ಮತಕ್ಕೆ ಆಶ್ರಯವೀಯುವೆನಾದರೂ, ಉಳಿದೆಲ್ಲ ಮತಗಳನ್ನೂ ನಾನು ಪುರಸ್ಕರಿಸುವೆನು, ಗೌರವಿಸುವೆನು. ನನ್ನ ಪ್ರಜೆಗಳಾದರೂ ಹಾಗೆಯೇ ಮಾಡಬೇಕೆಂಬುದು ನನ್ನ ನಿರ್ದೆಶವಾಗಿದೆ,”

ಎಂದು ಅಶೋಕನು ಸಾರಿದನು.

ಅದೇ ಮಾನವೀಯ ದೃಷ್ಟಿಯನ್ನು ಕ್ರಿ.ಶ. ಏಳನೆಯ ಶತಮಾನದಲ್ಲಿ ಗುಪ್ತ ವಂಶದ ಹರ್ಷವರ್ಧನನ ಆಳ್ವಿಕೆಯಲ್ಲಿ ಕಾಣುತ್ತೇವೆ. ಅದು ನಳಂದ ವಿಶ್ವವಿದ್ಯಾಲಯವು ಜಗತ್ನಸಿದ್ಧವಾಗಿದ್ದ ಕಾಲ, ಆಗ ಈ ದೇಶಕ್ಕೆ ಬಂದ ಚೀಣೀ ಯಾತ್ರಿಕ ಹ್ಯ ಅನ್ ತ್ಸಾಂಗ್ ನುಡಿದಿರುವಂತೆ,

“ಸಮ್ರಾಟ ಹರ್ಷ ಬಡಪಾಯಿ ಪ್ರಜೆಗಳ ದೂರುಗಳನ್ನು ಅಪಾರ ತಾಳ್ಮೆಯಿಂದ ಆಲಿಸುತ್ತಿದ್ದನು. ರಾಜಸಭಾಭವನದಲ್ಲಲ್ಲ.. ಪ್ರವಾಸಿಗಳ ಬೀದಿಯಂಚಿನ ಡೇರೆಗಳಲ್ಲಿ, ಅವನು ನಿಷ್ಠಾವಂತನಾದ ಸಹೃದಯನಾದ ಸ್ನೇಹಿತನಾಗಿದ್ದನು. ತತ್ವಜ್ಞಾನವೂ ಸಾಹಿತ್ಯವೂ ಅವನಿಗೆ ಪ್ರಿಯವಾಗಿದ್ದು ವು.”

ಮಹಮ್ಮದೀಯ ಮತ ಈ ದೇಶದಲ್ಲಿ ನೆಲೆಯೂರಿದ ಬಳಿಕ ಹದಿನಾರನೆಯ ಶತಮಾನದ ಮಧ್ಯದಲ್ಲಿ ದಿಲ್ಲಿಯ ಸಿಂಹಾಸನದ ಮೇಲೆ ವಿರಾಜ ಮಾನನಾದ ಸಮ್ರಾಟ ಅಕ್ಟರ್‌,

“ಹೊಸತಾದ ವಿಶಾಲವಾದ ನಿಷ್ಪಕ್ಷಪಾತಿಯಾದ ದೃಷ್ಟಿ ಕೋನ