ಈ ಪುಟವನ್ನು ಪರಿಶೀಲಿಸಲಾಗಿಲ್ಲ.
- ಕಲ್ಯಾಣಸ್ಸಾ ಮಿಯವರಿಗೆ ಜಯವಾಗಲಿ !"
ಗೌಡ ಮತ್ತೂ ಅಂದ:
- ಕೊಡಗಿನ ಶ್ರೀ ವೀರರಾಜೇಂದ್ರ ಮಹಾ ಪ್ರಭುಗಳಿಗೆ ಜಯವಾಗಲಿ!"
ಅರಸನ ಹೆಸರನ್ನು ಸರಿಯಾಗಿ ಉಚ್ಚರಿಸುವುದು ಹಲವರಿಗೆ ಶೊಡಕಿನ ದಾಗಿ ತೋರಿತು. ಹೀಗಾಗಿ 'ಜಯವಾಗಲಿ! ಘೋಷದಲ್ಲಿ ಏಕನಾದವಿರ ಲಿಲ್ಲ.
ರಾಮಗೌಡ ಗಟ್ಟಯಾಗಿ ನುಡಿದ:
- ಎಲ್ಲಿ ಆರತಿ?”
ಅತುರ ಸಂಕೋಚಗಳಿಂದ ಹಿಂದುಮುಂದಾಗುತ್ತ ಸುಮಂಗಲಿಯರಿಬ್ಬರು ಆರತಿ ಬೆಳಗಿದರು.
ಬಳಿಕ ಗೌಡ, ಜನರಿಗೆ ಆಣತಿ ಇತ್ತ;
"ಇನ್ನು ಎಲ್ರೊ ನಿಮ್ಮ ನಿಮ್ಮ ನಿಮ್ಮ ಮನೆಗೆ ಹೋಗಿ:”
ಗುಂಪು ಅತ್ತಿತ್ತ ಚಲಿಸಿತೇ ಹೊರತು, ಜನ ಚೆದರುವ ಲಕ್ಷಣ ತೋರ లిల్ల.
“ಕುದುರೆಗಳಿಗೆ ಆಯಾಸವಾಗಿದ್ದೇಕು,” ಎಂದ ರಾಮಗೌಡ ಎನೋ ಯೋಚಿಸತೊಡಗಿ.
- ಯಾಕೆ? ಗೌಡರ ಮನೆ ಬಹಳ ದೂರವೆ ?” ಎಂದ ನಂಜಯ್ಯ,
“ ಇಲ್ಲ, ಓ ಇಲ್ಲೇ ಇದೆ, ಮನೆ.”
" ನಡೆಯಿರಿ ಹಾಗಾದರೆ,”
... ಸ್ವಾಮಿಯವರೊಬ್ಬರಾದರೂ ನನ್ನ ಕುದುರೆ ಮೇಲೆ ಕೂತಿರ್ಲಿ.”
" ಒಂದೊ ಬೇಡಿ ಗೌಡರೆ. ನಾನು ನಡಿಬಾರದೊಂತ ಇದೆಯೇನು?' ఎంది ಕಲ್ಯಾಣಸಾಮಿ.
ಅತನ ಕಡೆಯವನೊಬ್ಬ ಕೇಳಿದ,
- ಪೂರ್ತಿ ಕತ್ತಲಾಯ್ತು, ದೀವಟಿಗೆ ತರಲೆ?”
ಅ ಪ್ರಶ್ನೆಗೆ ನೇರವಾಗಿ ಉತ್ತರಕೊಡದೆ ರಾಮಗೌಡ ಕಲ್ಯಾಣ ಸ್ವಾಮಿಯ ಮುಖಯ ನೋಡಿದ.