ಪುಟ:Mrutyunjaya.pdf/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೯೮ ಮೃತ್ಯುಂಜಯ
ಗೆೇಬು ಅವನ ಭುಜ ಮುಟ್ಟಿ ಅಂದ:
" ಕ್ಷಮಿಸಿ ಟಿಹುಟಿ, ಪರಿಸ್ಥಿತಿ ಹತೋಟಿ ಮೀರಿದೆ."
ಟಿಹುಟಿ ತೊದಲಿದ:
"ಈಗ? ಈಗ?"
"ಮುಖ್ಯವಾದದ್ದು ಪ್ರಾಣ ರಕ್ಷಣೆ."
" ಹೇಗೆ? ಹೇಗೆ ಗೇಬು?"
"ದಿಡ್ಡಿ ಬಾಗಿಲ ದಾರಿಯಾಗಿ."
ಟಿಹುಟಿ ಹೂಂಕರಿಸಿದ, ಗರ್ಜಿಸಿದ :
" ಬಕಿಲ!"
ಬಕಿಲ ಆಗಲೇ ಮೆಟ್ಟಿಲುಗಳನ್ನು ಸಮೀಪಿಸಿದ. ನೆಟ್ಟಿದ್ದ ಬಾಣವನ್ನು ಕಿತ್ತು ಬಲಗೈಯಲ್ಲಿ ಹಿಡಿದಿದ್ದ. ಕಣ್ಣಿನಿಂದ ರಕ್ತ ಧಾರಾಕಾರವಾಗಿ ಹರಿಯುತಿತ್ತು. ಹತ್ತಿಕ್ಕಿದ್ದ ರೋಷ ಕೀರಲು ದನಿಯಲ್ಲಿ ಗಂಟಿಲಿನಿಂದ ಹೊರಬೀಳಲು ಯತ್ನಿಸುತಿತ್ತು.
ಹೊರಗೆ ಜನಸ್ತೋಮ “ ಹೋ !” ಎಂದಿತು. ಪ್ರಾಕಾರದ ಮೇಲಿದ್ದ ಕಾವಲು ಭಟರು ಅಂಗಳಕ್ಕೆ ಧುಮುಕಿದ್ದರು. ಏಣಿಗಳನ್ನು ಏರಿದವರು ಅವರನ್ನು ಹಿಂಬಾಲಿಸಿದರು. ಅದಕ್ಕೆ ಸರಿಯಾಗಿ ಹೆಬ್ಬಾಗಿಲು ಮುರಿಯಿತು. ಕಟ್ಟೆ ಯೊಡೆದ ಜನಪ್ರವಾಹ ఒಳಗೆ ನುಗ್ಗಿತು.
ಸ್ನೊಫ಼ು, ಸೆಬೆಕ್ಖು, ಬಟಾ ಮತ್ತು ಹಲವರು ಮೆನೆಪ್‍ಟಾನನ್ನು ಕಟ್ಟಿದ್ದ ಕಂಬದೆಡೆಗೆ ಧಾವಿಸಿದರು. ಅಲ್ಲಿ ಮೆನೆಪ್‍ಟಾನ ಬಳಿ ಇಪ್ಯುವರ್ ನಿಂತಿದ್ದ, ಆನಂದಾಶ್ರು ಸುರಿಸುತ್ತ.
ಹಗ್ಗಗಳನ್ನು ಕತ್ತರಿಸಿ ಬಿಚ್ಚಿದರು. ಕುಸಿದು ಬೀಳದಂತೆ, ಎಡಬಲಗಳಲ್ಲಿ ಒಬ್ಬೊಬ್ಬರು ಮೆನೆಪ್‍ಟಾನ ತೋಳುಗಳಿಗೆ ಆಸರೆ ನೀಡಿದರು.
ಧನುರ್ಧಾರಿ ಖ್ನೆಮ್ ಹೊಟೆಪ್ ಕಾಣಿಸಿಕೊಂಡು ಜಯಕಾರ ಮಾಡಿದ.
" ಓ ಮೆನೆಪ್‍ಟಾ!
ಎಲ್ಲರು ಅಂದರು:
" ಓ ಮೆನೆಪ್‍ಟಾ!"