ನಿಮಗೆ ಅಪವಾದದ ಅಂಜಿಕೆಯೇಕೆ ? ನಾನು ಬಲ್ಲೆ : ಅಪವಾದದ ಅಂಜಿಕೆಯ ಜೊತೆಗೆ ಮಗಳ ಮೇಲಿನ ಪ್ರೇಮವೂ ನಿಮ್ಮನ್ನು ಕಾಡುತ್ತಿದೆ. ಅದು ಸಹಜವಾದುದು. ಆದರೆ ಆ ಸಹಜಪ್ರವೃತ್ತಿಯನ್ನು ಕೆಲವು ವೇಳೆ ಮೀರಿ ನಿಲ್ಲಬೇಕು. ತ್ಯಾಗಕ್ಕೆ ಸಿದ್ಧರಾಗಬೇಕು.
``ಹಾಗಾದರೆ ಮಹಾದೇವಿ ಮತ್ತೆ ಮನೆಗೆ ಬರುವುದು ಸಾಧ್ಯವೇ ಇಲ್ಲವೇ? ಲಿಂಗಮ್ಮ ಕೇಳಿದಳು.
``ಸದ್ಯಕ್ಕಂತೂ ಅದು ಸಾಧ್ಯವಿಲ್ಲ. ಲೋಕದ ದೃಷ್ಟಿಯಿಂದಲೂ ಸಾಧ್ಯವಿಲ್ಲ. ನೀವು ಈಗ ಮಗಳನ್ನು ಮನೆಗೆ ಕರೆದುಕೊಂಡು ಹೋದಿರಿ ಎನ್ನಿ. ಆಗಲೂ ಜನಾಪವಾದ ತಪ್ಪುತ್ತದೆಯೇ?' ರಾಜನಿಗೆ ಕೊಟ್ಟರು, ಮತ್ತೆ ಹಿಂದಕ್ಕೆ ತಂದರು' ಎನ್ನದೆ ಬಿಡುತ್ತಾರೆಯೇ? ಆಗ ಮಹಾದೇವಿಯ ಗತಿಯೇನು ? ಆದದರಿಂದ ಜನಾಪವಾದದ ಬಯಲುಭೂತಕ್ಕೆ ಹೆದರಬೇಡಿ. ಮಗಳ ಮೇಲಿನ ಮೋಹವನ್ನು ಹೆಚ್ಚು ಹಚ್ಚಿಕೊಳ್ಳಬೇಡಿ... ಅವಳು ನಿಮಗೆ ಕೀರ್ತಿಯನ್ನು ತರುತ್ತಾಳೆ. ಅದಕ್ಕಾಗಿ ಅವಳನ್ನು ಬಿಟ್ಟುಬಿಡಿ. ಸಹನೆಯಿಂದ ಕಾದುನೋಡಿ.
ಗುರುಗಳ ಈ ಮಾತುಗಳು ಮನಸ್ಸನ್ನು ಮಥಿಸುತ್ತಿದ್ದವು. ಯಾರು ಏನನ್ನೂ ಮಾತನಾಡಲಾರದವರಾಗಿದ್ದರು. ಆ ವೇಳೆಗೆ ನಾಲ್ಕು ಜನ ಜಂಗಮರು ಪ್ರವೇಶಿಸಿದರು. ಎಲ್ಲರೂ ಎದ್ದು ನಮಸ್ಕರಿಸಿದರು. ಅವರು ಕುಳಿತುಕೊಂಡ ಮೇಲೆ ಗುರುಗಳು ಮಹಾದೇವಿಯತ್ತ ತಿರುಗಿ :
``ಇವರೇ ಮಹಾದೇವಿ ಕಲ್ಯಾಣದಿಂದ ಬಂದ ಜಂಗಮರು. ಇಂದು ಯಾರೋ ಭಕ್ತರ ಮನೆಯಲ್ಲಿ ಬಿನ್ನಹವಿತ್ತು, ಅದನ್ನು ಮುಗಿಸಿಕೊಂಡು ಬಂದಿದ್ದಾರೆ."
ಮಹಾದೇವಿಯ ಮನಸ್ಸಿನಲ್ಲಿ ಮಿಂಚಿನಂತೆ ಒಂದು ಭಾವ ಸಂಚರಿಸಿತು. ಗುರುಗಳನ್ನು ಕೇಳಿದಳು :
``ಗುರುಗಳೇ..... ಅರಮನೆಯವರೆಗೂ ಇವರು ಬಂದು, ಅರಮನೆಯ ಆತಿಥ್ಯವನ್ನು ಸ್ವೀಕರಿಸುವುದಾದರೆ ತುಂಬಾ ಸಂತೋಷವಾಗುತ್ತದೆ. ಗುರುಗಳು ಜಂಗಮರ ಕಡೆ ನೋಡಿದರು. ಮಹಾದೇವಿಯ ವಿಷಯವನ್ನು ಗುರುಲಿಂಗರು ಅವರಿಗೂ ಹೇಳಿದ್ದುದರಿಂದ, ಜಂಗಮರಿಗೆ ಎಲ್ಲಾ ಅರ್ಥವಾಗಿತ್ತು. ಅವರೆಂದರು:
``ಆಗಬಹುದು... ಅಷ್ಟೊಂದು ವಿಶ್ವಾಸದಿಂದ ಕರೆಯುವಾಗ...
ಆದರೆ ಮಧ್ಯದಲ್ಲಿಯೇ ಗುರುಗಳು ಹೇಳಿದರು :
``ಅದು ಸರಿ, ಮಹಾದೇವಿ... ಆದರೆ ಅರಮನೆಯಲ್ಲಿ ರಾಜರು...