ಕಲತಾಕಿ. ತಿಳವಳಿಕೆ ಇದ್ದಾಕಿ.ಲಗ್ನಾ ಒಲ್ಲೆ ಅಂದ್ರ ಏನ ಮಾಡಬೇಕು ನಿನ್ನ ಹಡದವು?'-ಅದು ಅವಳ ತಂದೆಯ ಪ್ರಶ್ನೆ:ವಿದ್ಯಾವತಿಯಾದ,ವಯಸ್ಕಳಾದ ಪ್ರೀತಿಯ ಮಗಳು ಶಶಿ ಯಾಕೆ ಮದುವೆಗೆ ಒಪ್ಪಲೊಲ್ಲಳು ಎಂದು. ಸೋದರಮಾವನ ಒಬ್ಬನೇ ಮಗ ಆರುಣ,ಅಪ್ಪನ ಲಕ್ಷದ ಆಸ್ತಿಗೆ ಉತ್ತರಾಧಿಕಾರಿ.'ಛಲೋ ಪಗಾರ' ಇರುವ ಆಫೀಸರು,ಶಶಿಯನ್ನೇ ಲಗ್ನ ವಾಗುವೆನೆಂದು ಕಾದು ಕುಳಿತವನು.ಒಲ್ಲೆನೆನ್ನುವ ಈ ಹುಡುಗಿಗೆ ತಲೆ ಕೆಟ್ಟಿದೆಯೇನೋ ಎಂಬ ಪ್ರಶ್ನೆ ಅವಳ ತಂದೆಗೆ.
-ಏ ಇವನೇ, ನನ್ನ 'ನೆನಪು'ಗಳ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿರುವವನೇ, ಸರಿಯಾಗಿ ನೆನಪಾಯಿತು- ನಿನ್ನ ನಂಬರು ನಾಲ್ಕು.ನಿನ್ನನ್ನು ನೆನಸಿಕೂಳ್ಳುವಾಗಲೆಲ್ಲಾ ನನ್ನ ಮನಸಿನಲ್ಲಿ ನೀನು "NO.IV" ಎಂಬ ರೂಪದಲ್ಲಿ ಕಾಣಿಸಿಕೊಳ್ಳುವಿ. ನಿನ್ನ ನೆನಪು ನನ್ನ ಚಿತ್ತದಲ್ಲಿ ಈ ರೂಪು ತಳೆಯಲಿಕ್ಕಿಲ್ಲವೆಂದು ಬಹಳ ಆಶಿಸಿದ್ದೆ. ತಳೆಯಬಾರೆದೆಂದು ಬಹಳ ಪ್ರಯತ್ನಿಸಿದೆ. ಆದರೆ ನನ್ನ ಆಶೆ- ಪ್ರಯತ್ನಗಳಿಗೆ ಮೀರಿ ಇಂದು ಸಂಜೆ ನೀನು ನಿನ್ನ ರೂಪವನ್ನು ನಿರ್ಧರಿಸಿಕೊಂಡು ಬಿಟ್ಟಿರುವಿ. ನಿನ್ನ ಪರಿಚಯವಾದಂದಿನಿಂದ ಇಂದಿನ ವರೆಗೂ, ನನ್ನ ಅಂತರಾಳದಲ್ಲಿ ಸದಾ ಮೂಡಿ ಬರುತ್ತಿದ್ದ ನಿನ್ನ ನೆನಪಿಗೆ ಜೀವವಿರುತ್ತಿತ್ತು. ಎಷ್ಟೋಸಲ ಈ ಸಜೀವ ನೆನಪಿನ ಆಸರೆಯಲ್ಲಿ ಬೆಚ್ಚಗೆ ಮಲಗಿ ನಾನು 'NO. I', 'NO.II', 'NO.III' ಗಳ ಬಗೆಗೆ ಒಂದು ರೀತಿಯ ನಿರ್ಲಕ್ಷದಿಂದ, 'NO.i', 'NO.ii' ಇತ್ಯಾದಿಗಳ ಬಗೆಗೆ ಒಂದು ರೀತಿಯ ತಾತ್ಸಾರದಿಂದ ವಿಚಾರ ಮಾಡಿದ್ದುಂಟು. ಆದರೆ ಇಂದು ಸಂಜೆ ಅದು ಜೀವ ಕಳೆದುಕೊಂಡು ಬರಿಯ ನೆನಪಾಗಿದೆ; 'NO.IV' ಆಗಿದೆ. ನಾನೂ ಸಹ-ನಿನ್ನ ಹಾಗೆ, 'ಆತ್ಮಶೋಧನೆ' ಮಾಡಿಕೊಂಡಿರುವೆನೆಂಬ ಪ್ರಾಮಾಣಿಕ ಭ್ರಮೆಯಿಂದ- ನಿನಗಿದನ್ನೆಲ್ಲ ಹೇಳಿಬಿಡಬೇಕಾಗಿತ್ತು. ಹಾಗೆ ಹೇಳಲಿಲ್ಲ. 'ನನ್ನಲ್ಲಿ ಅಲ್ಲದಿದ್ದರೆ ಹೋಗಲಿ, ಎಲ್ಲಾದರೂ ಆಗಲಿ, ನಿನ್ನ ಪ್ರಶ್ನೆಗೆ ಉತ್ತರ ಕಂಡುಕೊಂಡು ಸುಖವಾಗಿರು' ಎಂದು ಹರಸಿ ಕಳಿಸಿದೆ, ಇದರರ್ಥ-ಇದ್ದುದನ್ನು ಇದ್ದಂತೆ ಹೇಳಲು ನನಗೆ ಧೈರ್ಯವಿಲ್ಲವೆಂದೇ?
-'ಶಶೀ, ನಿನಗೆ ಧೈರ್ಯವಿಲ್ಲ. ಶಶೀ, ನೀನು ಹೇಡಿ' ಎಂದು ಯಾರೋ ಕೂಗಿದಂತೆನಿಸಿ ಆಕೆ ಒಮ್ಮೆಲೆ ಬೆಚ್ಚಿಬಿದ್ದಳು. ದೂರ ಸರಿಸಿದ್ದ ಹೊದಿಕೆಯನ್ನೆಳೆದು ಮತ್ತೆ ಹೊದ್ದುಕೊಂಡಳು. ಕಿಡಕಿಯ ಹೊರಗೆ ನೋಡಿದರೆ ಇನ್ನೂ ಅದೇ ಕತ್ತಲು. ಮಧ್ಯರಾತ್ರಿ ಈಗ, ಅಮವಾಸೈ ಬೇರೆ. ಕಂಪೌಂಡಿನಲ್ಲಿನ ಗಿಡಗಳು ಮರಮರ ಸಪ್ಟಳ ಮಾಡುತ್ತಿವೆ. ದೂರದಲ್ಲೆಲ್ಲೋ ನಾಯಿಗಳು ಅಳುವ ಸದ್ದು ಕೇಳಿಸುತ್ತಿದೆ. ಕೆಟ್ಟಧ್ವನಿಯಲ್ಲಿ, ಅಂಜಿಕೆ ಬರಿಸುವ ಹಾಗೆ- ಒಂದಲ್ಲ, ಎರಡಲ್ಲ,ಹಲವಾರು