ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೩೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬಿಡುಗಡೆ / ದ.ಬ್ರಾ ಕ್ರಿಷ್ಟಪ್ಪ

  ಕರ್ತವ್ಯ. ಉಳಿದದ್ದು ಆತನಿಗೇ ಬಿಟ್ಟದ್ಧು.
      ಜೋಲು ಮುಖ ಹಾಕಿ ಮನೆಗೆ ಬಂದ ಕ್ರಿಷ್ಟಪ್ಪನಿಂದ ಸಮಾಚಾರ ತಿಳಿದ
  ಮುದುಕಿ ತಾಯಿ ಅದೇ ಹೊಟ್ಟೆಬೇನೆ ಹಚ್ಚಿಕೊಂಡು ಹಾಸಿಗೆ ಹಿಡಿದಳು. ಮುಂದೆ
  ಆರು ತಿಂಗಳಲ್ಲಿ ಸತ್ತೂ ಹೋದಳು. ಅದರೊಂದಿಗೇ ಕ್ರಿಷ್ಟಪ್ಪನಿಗೆ ಸೈಟು ಮತ್ತು
  ಸ್ವಂತ ಮನೆಯ ಸಲುವಾಗಿ ಇದ್ದ ಉತ್ಸಾಹವೂ ಸತ್ತು ಹೋಯಿತು.
                           * * *
        ಆದರೆ ಕ್ರಿಷ್ಟಪ್ಪನಿಗೊಂದು ವಿಷಯದಲ್ಲಿ ಸಮಾಧಾನವಿತ್ತು. ಅದೇನೆಂದರೆ
   ಆತನ ಕಿರಿಯ ಮಗ ಪ್ರಾಣೇಶ ಮೊದಲಿನಿಂದಲೂ ಓದಿನಲ್ಲಿ ಬಹಳ ಪ್ರತಿಭಾವಂತ.
   ಯಾವ ಟ್ಯೂಶನ್ನು ಗೈಡು ಇತ್ಯಾದಿಗಳ ಸಹಾಯವಿಲ್ಲದೆ ಯಾವ ಶಿಕ್ಷಕರ ವಿಶೇಷ
   ಕೃಪಾಕಟಾಕ್ಷವಿಲ್ಲದೆ ಆತ ಎಸ್.ಎಸ್.ಎಲ್.ಸಿ.ಯಲ್ಲಿ ಇಪ್ಪತ್ತನೇ ರಾಯ್ಂಕು
   ಬಂದಿದ್ದ. ಸ್ಥಳೀಯ ದಿನಪತ್ರಿಕೆಯವರು ಆತನ ಫೋಟೋ ಸಹಿತ ಸಂದಶ೯ನ
   ಪ್ರಕಟಿಸಿದ್ದರು. ನಿನ್ನ ಮಹತ್ವಾಕಾಂಕ್ಷೆ ಏನು? ಅಂತ ಕೇಳಿದಾಗ ತಕ್ಷಣ ಉತ್ತರ
   ಕೊಟ್ಟಿದ್ದ ಹುಡುಗ-ಡಾಕ್ಟರಾಗಿ ಬಡಜನರ ಸೇವೆ ಮಾಡುವುದು- ಎಂದು. ಈ
   ಹುಡುಗ ಡಾಕ್ಟರಾಗಿ ಮನೆತನಕ್ಕೆ ಒಳ್ಳೇ ಹೆಸರು ತರುತ್ತಾನೆಂದು,ಮುಂದೆ ತಮ್ಮ
   ಕಷ್ಟಕೋಟಲೆಗಳು ಪರಿಹಾರವಾಗುತ್ತವೆಂದು ಕ್ರಿಷ್ಟಪ್ಪನ ಭರವಸೆ. ಎರಡನೇ
   ಪಿ.ಯು.ಸಿ.ಯಲ್ಲಿ ಪ್ರಾಣೇಶನಿಗೆ ಎಂಬತ್ತೆಂಟು ಪಸೆ೯ಂಟ್ ಮಾಕ್ಸ್೯ ಸಿಕ್ಕವು.
   ಕ್ರಿಷ್ಟಪ್ಪ ಪಾಪ, ಬಹಳ ಖುಶಿಪಟ್ಟ. ಆದರೆ ವಸ್ತುಸ್ಥಿತಿ ತಿಳಿದಿದ್ದ ಪ್ರಾಣೇಶ ಮಾತ್ರ
   ಭೂಮಿಗಿಳಿದು ಹೋದ. ಎಂಬತ್ತೆಂಟು ಪಸೆ೯ಟಿಗೆ ಮೆಡಿಕಲ್ಗೆ ಹೇಗೆ ಸೀಟು
   ಸಿಗುತ್ತದೆ? ಅದು ಯಾವ ವಿಶೆಷ ಗ್ರೊಪ್ಗೂ ಸೇರಲಾರದ ನಿಭಾ೯ಗ್ಯನಿಗೆ? ಬರೀ 
   ಮಾರ್ಕ್ಸ್ ದೊರೆತರೆ ಸಾಕು ಅನ್ನುವಂತ್ತಿದ್ದರೆ ಕನಿಷ್ಟ ತೊಂಬತ್ತೆಂಟು ಪರ್ಸೆಂಟಾದರೂ
   ಮಾಡಬಾರದಿತ್ತೆ ಆತ? ಅದಾಗಲಿಲ್ಲ ಅಂದರೆ ಉಳಿದ ಕ್ವಾಲಿಫಿಕೇಶನ್ಸ್ ಬೇಡವೆ
   ಸೀಟು ಸಿಗಲು? ಆತ ಬಡಬ್ರಾಹ್ಮಣ ಕ್ರಿಷ್ಟಪ್ಪನ ಮಗನಾಗಿ ಹುಟ್ಟುವ ಮಹಾಪರಾಧ
   ಮಾಡಿಧಾನೆ, ಅಧೂ ನಮ್ಮ ಕನ್ನಡ ರಾಜ್ಯದಲ್ಲಿ, ಅಂದ ಮೇಲೆ ಬರೀ ಮಾರ್ಕ್ಸುಗಳ
   ಬಲದ ಮೇಲೆ ಸೀಟು ಸಿಕ್ಕೇತೆಂಬ ಕನಸು ಕಾಣುವುದು ತಪ್ಪಲ್ಲವೇ? ಮೆಡಿಕಲ್
   ಕಾಲೆಜುಗಳು ಕೇಳುವಷ್ಟು ಡೊನೇಶನ್ ಕಕ್ಕುವುದಂತೂ ಅಸಾಧ್ಯ ಮಾತು. ಪ್ರಾಣೇಶ
   ತಿಳುವಳಿಕೆಯ ಹುಡುಗ. ಇನ್ನು ನಂತರ ಕನಸುಗಳು ಭಗ್ನವಾಗುವುದಕ್ಕೆ ತನ್ನಂಥ ಅನೇಕ
   ಹುದುಗರು ತೆಪ್ಪಗೆ ಹೊಂದಿಕೊಳ್ಳುವುದೇ ಲೇಸೆಂದು ಆತನಿಗೆ ತಿಳಿಯಿತು. ಆತ
   ಸುಮ್ಮನೆ ಬಿ.ಎಸ್ಸಿ.ಗೆ ಸೇರಿಕೊಂಡ.
         ಆದರೆ ತನಗಿಂತ ಸ್ಕೂಲಿನಲ್ಲಿ ಹಲವಾರು ವಷ೯ ಸೀನಿಯರ್ ಆಗಿ ಕೋನೆಗೆ