ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ix

ಘೋಷಿಸುವ ವಿಮಲಾ ಶಂಕರ ತನ್ನ ಮನೆಯಲ್ಲಿಯೇ ಗುಲಾಮಳು; ತನ್ನ ಗಂಡನ ದ್ರೋಹ, ಶೋಷಣೆಗಳಿಂದ ನೊಂದರೂ ಅನಿವಾರ್ಯವಾಗಿ ಲಕ್ಷ್ಮಿ ತನ್ನ ಮನೆಗೆ ತಿರುಗಿ ಹೋಗುತ್ತಾಳೆ; ಪ್ರತಿಭಟನೆಯ ಮಾರ್ಗವನ್ನೇ ಕಾಣದ ಅನಾಥೆ ಕೋಮಲಾ ಸಮಾಜ ಕಲ್ಯಾಣ ಶಾಕೆಯ ಅಧಿಕಾರಿ ಶಿವರಾಮ ರೆಡ್ಡಿ ಲೈಂಗಿಕ ಆಕ್ರಮಣವನ್ನು ನಿರ್ಲಿಪ್ತಳಾಗಿ ಸಹಿಸಿಕೊಳ್ಳುತಾಳೆ; ನ್ಯಾಯಾಧೀಶಳಾಗಿ ಒಳ್ಳೆಯ ಹೆಸರು ಗಳಿಸಿದ ಯಶಸ್ವಿನೀ ದೇಸಾಯ ತನ್ನ ಕುಟುಂಬಕ್ಕೆಯೇ ಹೊರಗಿನವಳಾಗಿ ಸೋಲು ಅನುಭವಿಸುತ್ತಾಳೆ; ವರ್ಮಾಬಾಯಿ ಒಳ್ಳೆಯ ಶಿಕ್ಷಕಿಯಾದರು ರಜನಿಗೆ ಅವಳ ಭ್ರಷ್ಟತೆಯೆದುರು ಸೋಲಬೇಕಾಗುತ್ತದೆ. ಶಾಲೆಯಲ್ಲಿ ಲೀಟರ್ ಎಂದು ಮೆರೆದ ರಜಪೂತ ಹುಡುಗಿ ಸೋನಿಯಾ ತನ್ನ ತಾಯಿತನದಲ್ಲಿಯೇ ಸಮಾಧಾನ ಪಡಬೇಕಾಗುತ್ತದೆ. ಬದುಕಿ ಉಳಿಯುವುದಕ್ಕೆ ಸ್ತ್ರೀ ಹೇಗೆ ತನ್ನ ಸ್ವಾತಂತ್ರ್ಯ, ಸ್ವಾಭಿಮಾನ, ಆಸೆ - ಆಕಾಂಕ್ಷೆಗಳು, ಮರ್ಯಾದೆ, ಯೋಗ್ಯತೆಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದರ ಧಾರುಣ ಚಿತ್ರಗಳು ಈ ಕಥೆಗಳಲ್ಲಿವೆ. ಪ್ರತಿಭಟನೆಯ ಅನಿವಾರ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಪ್ರಸ್ತುತ ಸಾಮಾಜಿಕ ಸಂದರ್ಭದಲ್ಲಿ ಅದು ಸಫಲವಾಗಲಾರದು ಎನ್ನುವುದು ವೀಣಾರ ಗ್ರಹಿಕೆ. ಈ ಗ್ರಹಿಕೆಯ ಶ್ರೇಷ್ಠ ಅಭಿವ್ಯಕ್ತಿಯೆಂದರೆ ಅವರ 'ಶೋಷಣೆ, ಬಂಡಾಯ ಇತ್ಯಾದಿ' ಕಾದಂಬರಿ. ಅವರ 'ತಿರುಗಿ ಹೋದಳು' ಕತೆಗೂ ಈ ಕಾದಂಬರಿಗೂ ಬಹಳು ಸಮೀಪದ ಹೋಲಿಕೆಗಳಿವೆ.

ವೀಣಾರ ಕತೆಯನ್ನೋದುವಾಗ ಅವುಗಳ ಚಾರಿತ್ರಿಕ ಸಂದರ್ಭವನ್ನು ನೆನಪಿನಲ್ಲಿಡುವುದು ಒಳ್ಳೆಯದು. ಯಾಕೆಂದರೆ, ಬದಲಾದ ಸಾಮಾಜಿಕ ಸಂದರ್ಭದಲ್ಲಿ ಸ್ತ್ರೀಯ ಸ್ಥಾನಮಾನಗಳಲ್ಲಿ, ಕ್ರಿಯಶೀಲತೆಯಲ್ಲಿ, ದೃಷ್ಟಿಕೋನಗಳಲ್ಲಿ ಹೇಗೆ ಬದಲಾವಣೆಯಾಗಬಲ್ಲದು ಎನ್ನುವುದನ್ನು, ವೀಣಾರ ನಂತರದ ಕಥೆಗಾರರಾದ ನೇಮಿಚಂದ್ರ ಮೊದಲಾದವರ ಕತೆಗಳು ನಮಗೆ ತೋರಿಸಿಕೊಟ್ಟಿವೆ. ಹೊಸ ಸಂಧರ್ಭಗಳಲ್ಲಿ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆಯಾದರು ಸ್ತ್ರೀಯ ವಾಸ್ತವ ಅನುಭವ ಹಾಗು ಅವಳ ಆಸೆ. ಆಕಾಂಕ್ಷೆಗಳ ನಡುವಿನ ಅಂತರದ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತಿರುವುದು ಸಮಾಜದ ಆರೋಗ್ಯದ ಲಕ್ಷಣವಾಗುದೆ.

ವ್ಯೆಯಕ್ತಿಕ ಸಂಬಂಧಗಲಾಚೆಗಿನ ಸಮಸ್ಯೆಗಳ ಬಗ್ಗೆ ವೀಣಾ ಬರೆದ ಕತೆಗಳು ಕಡಿಮೆ. ಆದರೂ ಭ್ರಷ್ಟಾಚಾರ ('ಹರಿದು ಬಾ ತಾಯಿ', 'ಮುಂದಾಳುವಿನ ಜನತಾ ಸೇವೆ', 'ಹೊಟೇಲ್ ಬ್ಲೂ'), ಜಾತಿಯ ಪ್ರಶ್ನೆ ('ಹನುಮಾಪುರದಲ್ಲಿ ಹನುಮ ಜಯಂತಿ','ದ. ಬ್ರಾ. ಕ್ರಿಷ್ಣಪ್ಪ' ) ಹಾಗೂ ಪರಿಸರನಾಶ ('ಒಂದು ಗಿಡ ಒಂದು ಬಾವಿ') ಗಳಂಥ ಸಮಸ್ಯೆಗಳನ್ನಾಧರಿಸಿದ ಕತೆಗಳನ್ನು ಅವರು ಬರೆದದ್ದುಂಟು. ಇವುಗಳಲ್ಲಿ 'ಒಂದು ಗಿಡ ಒಂದು ಬಾವಿ' ಕಥನ ಶೈಲಿಯಲ್ಲಿಯೇ ಆಕರ್ಷಕ ಪ್ರಯೋಗದಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ಮಹಿಳ ಸಾಹಿತ್ಯ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವುದರ ನಿದರ್ಶನಗಳೆಂದು ಈ ಕಥೆಗಳಿಗೆ ಮಹತ್ವವಿದೆ.

ನಿಜವಾಗಿ ನೋಡಿದರೆ, ಕನ್ನಡ ಓದುಗರಿಗೆ ಈಗಾಗಲೇ ಸುಪರಿಚಿತರಾದ ವೀಣರಿಗೆ ನನ್ನ ಮುನ್ನುಡಿಯ ಅಗತ್ಯವಿರಲಿಲ್ಲ. ಬೇರೆ ಬೇರೆ ಸಂದರ್ಭಗಳಲ್ಲಿ ಅವರ ಕತೆ-ಕಾದಂಬರಿಗಳ ಬಗ್ಗೆ ಈಗಾಗಲೇ ನಾನು ಬರೆದಿದ್ದೇನೆ. ಆದರೂ ಅವರ