ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಮುಳ್ಳುಗಳು / ಅತಿಥಿ
೩೭

ಹುಚ್ಚು-ಎಂದುಕೊಂಡು. ಕಣ್ಣೀರೊರೆಸಿಕೊಳ್ಳುತ್ತ ಆಕೆ ಪಕಪಕನೆ ನಕ್ಕುಬಿಟ್ಪಳು.
ನಂತರ ಕೂಡಲೆ ಅವಳಿಗೆ ರೂಮಿನಲ್ಲಿ ತಾನೊಬ್ಬಳೇ ಇರುವದು ನೆನಪಾಗಿ. ತಾನು
ನಕ್ಕದ್ದನ್ನು ಯಾರಾದರೂ ಹೊರಗಿನಿಂದ ಕೇಳಿಸಿಕೂoಡರೆ ಏನೆಂದುಕೊoಡಾರೆಂಬ
ವಿಚಾರ ಬಂದು, ಮತ್ತಷ್ಟು ತಮಾಷೆ ಎನ್ನಿಸಿ, ಇನ್ನೂ ನಕ್ಕಳು.
-ಕೆಳಗೆ ಬಿದ್ದ ಪೆನ್ನನ್ನು ನೋಡಿದಾಗ ಅತಿಥಿ ಭಾಷಣದ ನೆನಪಾಯಿತು ಆಕೆಗೆ.
ಬಗ್ಗಿ ಅ ಪೆನ್ನನ್ನೆತ್ತಿಕೊoಡು, ನಾಳಿನ ಸನ್ಮಾನ್ಯ ಆತಿಥಿಯ ಸ್ಥಾನನದಲ್ಲಿ ತನ್ನನ್ನು
ಕಲ್ಪಿಸಿಕೊಳ್ಳುತ್ತ, ನಿಜವಾಗಿಯೂ ಎಲ್ಲಾ ಮರೆತೆನೆಂದು ಸೀರಿಯಸ್ಸಾಗಿ ಭಾಷಣವನ್ನು
ತಯಾರಿಸುವದರಲ್ಲಿ ಮಗ್ನಳಾದಳು.