ವಿಷಯಕ್ಕೆ ಹೋಗು

ಪುಟ:Kalyaand-asvaami.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಕಂದು ಬಣ್ಣದ ಕುದುರೆಯೂ ಕರ್ತುಕುಡಿಯನದೂ ಮತ್ತೊಮ್ಮೆ ಹೇಂಕರಿಸಿದುವು.

ನಡುಮನೆಯಲ್ಲಿ ಸಣ್ಣಗೆ ಉರಿಯುತಿದ್ದ ಹಣತೆಯ ಬೆಳಕು, ಬಾಗಿಲ ಬಿರುಕಿನೆಡೆಯಿಂದ ಹೊರ ಬರಲು ಯತ್ನಿಸುತಿತ್ತು.

ತಾಯಿಗೆ ಎಚ್ಚರವಾಗಬಾರದೆಂದು ಪುಟ್ಟಬಸವ, ಮೆಲ್ಲನೆ ಬಾಗಿಲು ತಟ್ಟಿ ಮೆಲುಧ್ವನಿಯಲ್ಲಿ ಕರೆದ:

"ಗಿರಿಜಾ!"