ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೦ ಸಾಮಾನ್ಯ ಶಸ್ತ್ರವೈದ್ಯದಕಾಯಿಲೆಗಳು

                            ಕರಗಿಸಲು ಸಾಧ್ಯವಾಗಿಲ್ಲ . ಆದರೆ ಉದ್ಬವಿಸುವ ವಿವಿಧ  ಕಾರಣಗಳನ್ನು
                             ವಿವೇಚಿಸಿದಾಗ  ಕೆಲವು  ತೆರನ ಪರೆಗಳು  ಉದ್ಬವಿಸಿದಂತೆ  ತಡೆಯಲು
                             ಸಾಧ್ಯವಾಗಬಹುದು. ಸಂಜಾತ ನ್ಯೂನತೆಗಳಿಂದಾಗುವ ಪರೆ,ಔಷಧಸೇವನೆಯಿಂದ
                             ಉದ್ಬವಿಸುವ ಪರೆ ,ಡಯಾಬಿಟಿಸ್,ಪ್ಯಾರಾಥೈರಾಯಿಡ್ ಪರೆ,ಪೌಷ್ಟಿಕಾಂಶಗಳ
                             ಕೊರತೆಯಿಂದುಂಟಾಗುವ ಪರೆ - ಇತ್ಯಾದಿಗಳನ್ನು ಸೂಕ್ತ ನಿರೋಧಕ
                             ಮಾರ್ಗಗಳನ್ನನುಸರಿಸುವುದರಿಂದ ತಡೆಗಟ್ಟಬಹುದೆಂಬ  ಕಲ್ಪನೆ
                             ಇರಬಹುದಾದರೂ,ವಾಸ್ತವವಾಗಿ ಈ ದಿಸೆಯಲ್ಲಿ ಹೆಚ್ಚಿನ ಪ್ರಗತಿಯಗಿಲ್ಲ.
                             ಆದರೆ ಬಿಸಿಲಿನ ಜಳಕದಲ್ಲಿ ಕಾರ್ಯನಿರತರಾಗಿರುವವರು ಕಪ್ಪು ಕನ್ನಡಕ
                             ಧರಿಸುವುದರಿಂದ,ಇಲ್ಲವೇ ಕಣ್ಣಿಗೆ ನೆರಳು  ಬಿಳುವಂಥ ಶಿರಸ್ತ್ರಾಣವನ್ನು
                             ಧರಿಸುವುದರಿಂದ ಪರೆ ಉದ್ಬವಿಸಬಹುದಾದ ವಯಸ್ಸನ್ನು ಸ್ವಲ್ಪ ಕಾಲವಾದರೂ
                              ಮುಂದೂಡುವ ಸಾಧ್ಯತೆಗಳಿವೆ.
                                         ದೇಹದ ಒಂದು  ಭಾಗವಾದ ಕಣ್ಣಿನಲ್ಲಿ ಪರೆ ತೆಗೆಯುವ ಸಲುವಾಗಿ
                             ಶಸ್ತ್ರಚಿಕಿತ್ಸೆ ಜರುಗಿಸುವುದಾದರೂ ರೋಗಿಯ ಒಟ್ಟು ಆರೋಗ್ಯದ  ಸ್ಥಿತಿ
                            ಚೆನ್ನಾಗಿರಬೇಕು.ಡಯಾಬಿಟಿಸ್,ರಕ್ತದೊತ್ತಡದಂತಹ ಕಾಯಿಲೆಗಳು ಸಂಪೂರ್ಣ
                           ಹತೋಟಿಯಲ್ಲಿರಬೇಕು.ಕೆಮ್ಮು,ದಮ್ಮು ಮೂತ್ರ ವಿಸರ್ಜನೆಗೆ ತಡೆಯಾಗುವಂಥ
                           (ಉದಾ  : ಪ್ರೊಸ್ಟೇಟ್ ಗ್ರಂಥಿಯ  ಊತ  ) ಕಾಯಿಲೆಗಳಿದ್ದರೆ ಅವುಗಳಿಗೂ
                           ಮೊದಲೇ ಸೂಕ್ತ ಚಿಕಿತ್ಸೆಗಳನ್ನು ಜರುಗಿಸಬೇಕು.ದೇಹದ ಯಾವುದೇ ಭಾಗದಲ್ಲಿ
                          ರೋಗಾಣು ಸೋಂಕು - ಕರು,ಹಲ್ಲು ಕರು - ಇದ್ದರೆ ಅವಕ್ಕೂ  ಚಿಕಿತ್ಸೆ
                          ಮಾಡಿಸಬೇಕು.
                                     ಕಣ್ಣಿಗೆ ಜರುಗಿಸುವ ಶಸ್ತ್ರಚಿಕಿತ್ಸೆಗಳೆಲ್ಲಾ ಆಧುನಿಕ  ರೀತಿಯಲ್ಲಿ ಸುಸಜ್ಜಿತ
                          ಆಸ್ಪತ್ರೆಗಳಲ್ಲೇ  ಆಗಬೇಕೆಂಬ ನಿಯಮವಿದೆ. ಶಸ್ತ್ರಚಿಕಿತ್ಸಾ  ಕೊಟಡಿಯಲ್ಲಿ
                          ರೋಗಾಣುಗಳಿರದ ಏಸೆಪ್ಟಿಕ್ ವಾತಾವರಣವಿರಬೇಕು.ಬಳಸುವ ಸಲಕರಣೆ
                          ಮತ್ತು ಬಟ್ಟೆ ಬರೆಗಳು ಶ್ರೇಷ್ಟಮಟ್ಟದ ಜೀವಿ ಶುದ್ದೀಕರಣಕ್ಕೊಳಗಾಗಿರಬೇಕು.
                         ಯಾವುದೇ ಕಾರಣಗಳಿಂದ ಶಸ್ತ್ರಚಿಕಿತ್ಸೆಗೊಳಗಾದಗ ಕಣ್ಣಿಗೆ ರೋಗಾಣು ಸೋಂಕು
                         ತಗುಲಿದರೆ , ಇಡೀ ಕಣ್ಣಿಗೆ ನಂಜಾಗಿ,ಅದು ನಾಶವಾಗುವ ಸಾಧ್ಯತೆಗಳಿರುವುದರಿಂದ
                         ಈ ದಿಸೆಯಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.
                                     ಆದರೂ  ಇತ್ತೀಚಿನ ವರ್ಷಗಳಲ್ಲಿ ಕಣ್ಪರೆಯನ್ನು ತೆಗೆಯುವ ಶಸ್ತ್ರಚಿಕಿತ್ಸಾ
                        ಶಿಬಿರಗಳು ಎಲ್ಲೆಂದರಲ್ಲಿ ಜರುಗುವುದನ್ನು ನೋಡುತ್ತೇವೆ.ಹಳ್ಳಿಗಾಡುಗಳ ಸ್ಕೂಲು,
                        ಪಂಚಾಯಿತಿ ಕಚೇರಿಗಳಲ್ಲೇಲ್ಲಾ ಇಂತಹ ಚಿಕಿತ್ಸೆಗಳಾಗುತ್ತಿವೆ.ಅಂತರ ರಾಷ್ಟಿಯ