ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣ್ಬರೆ ೬೧ ಸಂಘ ಸಂಸ್ಥಗಳು,ಸರ್ಕಾರ ಹಾಗೂ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳು ಸಹಾ ಇಂಥ ಶಿಬಿರಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ.ದೇಶದಲ್ಲಿ ಕಣ್ಪರೆಗಳ ಹಾವಳಿಯಿಂದ ಉಂಟಾಗುತ್ತಿರುವ ಅಂಧತ್ವದ ವಿರುದ್ಧ ಅವರೆಲ್ಲಾ ಸಮರ ಸಾರಿದ್ದಾರೆಂದೇ ಹೇಳಬಹುದು.ಶಸ್ತ್ರಚಿಕಿತ್ಸೆ ಜರುಗಿಸುವ ಜಾಗದ ವಿಷಯದಲ್ಲಿನ ನಿಯಮಗಳನ್ನು ಸ್ವಲ್ಪ ಸಡಿಲಗೊಳಿಸಿರಬಹುದಾದರೂ,ಇನ್ನುಳಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುತ್ತಾರೆ.ಅದರಿಂದ ಇಂಥಾ ಶಿಬಿರಗಳನ್ನು ಜರುಗುವ ಕಣ್ವರೆಗಳ ಚಿಕಿತ್ಸೆಗಳಿಂದ ಹೆಚ್ಚಿನ ತೊಡಕುಗಳುಂಟಾಗಿಲ್ಲವೆಂದೇ ಹೇಳಬಹುದು.ಯಾರದೋ ಅಚಾತುರ್ಯದಿಂದ ಒಂದೊಂದು ಸಾರಿ ನೂರಾರು ಜನರು ಕಣ್ಣು ಕಳೆದುಕೊಂಡರೆಂಬ ಸುದ್ದಿ ಕೇಳಿ ಬರುವುದೂ ಉಂಟು. ಭಾರತದಲ್ಲಿನ ಅಸಂಖ್ಯಾತ ಜನರ ಅಂಥತ್ವವನ್ನು ನೀಗಿಸುವಲ್ಲಿ ಇಂತಹ ಶಿಬಿರಗಳ ಉಪಯುಕ್ತತೆಯ ಬಗೆಗೆ ಜನರಲ್ಲಿ ನಂಬಿಕೆ ಉಳಿಯಲಾರದು‌. ಒಳ್ಳೆಯದಕ್ಕಾಗಿ ರಪಿಸಿದ ಇಂತಹ ಯೋಜನೆಗಳ ಫಲಿತಾಂಶಗಳು ಹಿಂದು-ಮುಂದಾಗಿ ಅಂಧರ ಸಂಖ್ಯೆ ಕಡಿಮೆಯಾಗುವುದರ ಬದಲು, ಇನ್ನೂ ಹೆಚ್ಚುತ್ತಾ ಹೋಗಬಹುದೂ. ಸರಿಯಾಗಿ ಬಲಿತು ನೆರೆಯದ ಕಣ್ವರೆಗಳನ್ನು ತಕ್ಷಣ ಶಸ್ತ್ರಚಿಕಿತ್ಸೆಗೂಳಪಡಿಸುವುದಿಲ್ಲ.ಅವು ಬಲಿತ ಮೇಲೂ ಬಹಳ ಸಮಯ ಕಾಯುವೂದೂ ಸರಿಯಲ್ಲ. ಪರೆಯ ಅಡಚಣಿಯಿಂದ ಬಹಳ ಕಾಲ ದೃಷ್ಟಿ ಮಂಜಾದವರ ಕಣ್ಣಿನ ನರಕ್ಕೆ ಕೆಲಸವಿರದಿರುವುದರಿಂದ,ಅದು ದುಬಲವಾಗುತ್ತದೆ. ನಂತರ ಪರೆ ತೆಗೆದರೂ, ನರಗಳಲ್ಲಿ ಹಿಂದಿನ ಕಾಯದಕ್ಷತೆ ಮರಳಿ ಬರುವುದಿಲ್ಲ. ಕಣ್ವರೆಯನ್ನು ತೆಗೆಯುವ ಎಲ್ಲಾ ವಿಧಗಳ ಶಸ್ತ್ರಚಿಕಿತ್ಸೆಗಳಲ್ಲೂ ಮಸೂರ ಇರುವ ಗೂಡನ್ನು ತೆರೆದು, ಬಲಿತ ಪರೆಯನ್ನ ಎಳೆದು ಹೂರಗೆ ತೆಗೆಯಲಾಗುತ್ತದೆ. ಕಣ್ಣಿನ ಬಿಳೀ ಪರೆ (Sclera) ಮತ್ತು ಕೋಡ್ವರೆಗಳು ಸಂಧಿಸುವೆಡೆಯಲ್ಲಿ ಸಣ್ಣ ಕತ್ತರಿಕೆಯನ್ನು ಮಾಡಿ ,ಕಣ್ವರೆಯಾದ ಮಸೂರವನ್ನು ಹೊರಗೆ ತರುತ್ತಾರೆ.ಇದೊಂದು ಅತ್ಯಂತ ಸೂಕ್ಷ್ಮ ಹಾಗೂ ಚಮತ್ಕಾರಿಕ ಶಸ್ತ್ರಚಿಕಿತ್ಸೆಯೆಂದು ಹೆಸರಗಿದೆ.ಚಿಕಿತ್ಸೆಯ ಸಮಯದಲ್ಲಿ ನೋವಾಗದಿರಲು ಮೊದಲೇ ಸ್ಥಳೀಯವಾಗಿ ಪ್ರಭಾವ ಬೀರುವ ಅರಿವಳಿಕೆಯ ಮದ್ದನ್ನು ನೀಡಿರುತ್ತಾರೆ.ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಸಹಕರಿಸಲಾರದ ತೀರಾ ಎಳಯರು ಮತ್ತು ವೃದ್ಧರಿಗೆ ಸಂಪೂರ್ಣವಾಗಿ ಪ್ರಜ್ಞ ತಪಿಸಬೇಕಾಗುತ್ತದೆ. ಚಿಕಿತ್ಸೆ ಕೇವಲ ೧೫-೨೦ ನಿಮಿಷಗಳಲ್ಲಿ ಮುಗಿದು ಹೋಗುತ್ತದೆ.