ವಿಷಯಕ್ಕೆ ಹೋಗು

ಪುಟ:ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೨ ಸಾಮಾನ್ಯ ಶಸ್ತ್ರವೈದ್ಯದ ಕಾಯಿಲೆಗಳು

   ಕಣ್ಟರೆಯನ್ನು ತೆಗೆದ ನಂತರ ಕತ್ತರಿಕೆಯಿಂದಾದ ಗಾಯವನ್ನು ಅತ್ಯಂತ ಸೂಕ್ಷ್ಮವಾದ ದಾರಿಯಿಂದ ಹೊಲಿದು ಮುಚ್ಚಿ ಪಟ್ಟಿ ಕಟ್ಟುತ್ತಾರೆ. ಶಸ್ತ್ರಚಿಕಿತ್ಸೆಯ ನಂತರ ಹೆಚ್ಚಾಗಿ ಒದ್ದಾಡುವುದಾಗಲೀ, ಕೆಮ್ಮುವುದಾಗಲೀ ಸರಿಯಲ್ಲ. ಮಾರನೆಯ ದಿನ ಕಣ್ಣಿನ ಪಟ್ಟಿಯನ್ನು ಬಿಚ್ಚಿ, ಕಣ್ಣನ್ನು ಶುಚಿಗೊಳಿಸಿ, ಔಷಧಗಳ ತೋಟ್ಟುಗಳನ್ನು ಬಿಟ್ಟು ಮತ್ತೆ ಪಟ್ಟಿ ಕಟ್ಟುತ್ತಾರೆ. ಸುಮಾರು ಒಂದು ವಾರ ಈ ತರಹೆಯ ಚಿಕಿತ್ಸೆಯ ನಂತರ, ಮನೆಗೆ ಕಳುಹಿಸುತ್ತಾರೆ.
    
  ತೊಡಕುಗಳು
      ರಸ್ತಸ್ರಾವ : ಗಾಯವನ್ನು ಮುಚ್ಚುವಾಗ ಹೊಲಿಗೆಗಳು ಸರಿಯಾಗಿ ಬೀಳದಿದ್ದರೆ, ಕಣ್ಣಿನ ಒಳಗಡೆ ಅಪರೂಪಕ್ಕೆ ರಕ್ತಸ್ರಾವ ಉಂಟಾಗಬಹುದು.ಈಗ ಲಭ್ಯವಿರುವ ಅತೀ ಸೂಕ್ಷ್ಮದಾರಗಳ ಬಳಕೆಯಿಂದ ಇಂಥ ಪ್ರಕರಣಗಳು ಹೆಚ್ಚಾಗಿ ಆಗುತ್ತಿಲ್ಲ. ಸಣ್ಣ ಪ್ರಮಾಣದ ರಕ್ತಸ್ರಾವವಾದಾಗ ಕಣ್ಣಿನ ದೃಷ್ಟಿಗೇ ಸಂಚಕಾರವಾಗಬಹುದು.
      ಗಾಯ ಬಿಚ್ಚಿಕೊಳ್ಳುವುದು : ಅತ್ಯಂತ ಸೂಕ್ಷ್ಮ ಹೊಲಿಗೆಯ ದಾರಗಳ ಉಗಮನದಿಂದ ಈ ತೊಡಕೂ ಸಹ ತೀರಾ ಅಪರೂಪವಾಗುತ್ತಿದೆ.
     ರೋಗಾಣು ಸೋಂಕು : ಶುಚಿತ್ವ ಹಾಗೂ ಆಂಟಿಸೆಪ್ಟಿಕ್ ನಿಯಮಗಳ ಉಲ್ಲಂಘನೆಯಾದಾಗ ಗಾಯದಲ್ಲಿ ರೋಗಾಣು ಸೋಂಕು ಉಂಟಾಗಿ, ಕೀವುಗಟ್ಟಬಹುದು. ಸೂಕ್ತ ಜೀವಿರೋಧಕ ಮದ್ದುಗಳನ್ನು ಆರಂಭದ ಹಂತದಿಂದಲೇ ನೀಡುವುದರಿಂದ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಲು ಸಾಧ್ಯ. ಕೈ ಮೀರಿದ ಸಂದರ್ಭಗಳಲ್ಲಿ ದೃಷ್ಟಿಯ ಜೊತೆಗೇ ಇಡೀ ಕಣ್ಣೇ ನಾಶವಾಗುವ ಸಾಧ್ಯತೆ ಇರುತ್ತದೆ.
      ಒಂದು ಸಾರಿ ಕಣ್ಟರೆಯನ್ನು ತೆಗೆದ ಶೇ ೧೦ ರಷ್ಟು ಮಂದಿಯಲ್ಲಿ ಅದು ಮರಳಿ ಬೆಳೆಯಲೂ ಬಹುದು.
       
      ಕಣ್ಣಿನೊಳಗೆ ಬೆಳಕಿನ ಕಿರಣಗಳನ್ನು ಸಾಂದ್ರೀಕರಿಸುತ್ತಿದ್ದ ಮಸೂರವನ್ನು ತೆಗೆದ ನಂತರ ಬೆಳಕಿನ ಕಿರಣಗಳು ಚೆಲ್ಲಾಪಿಲ್ಲಿಯಾಗಿ ಸಹಜ ದೃಶ್ಯ ಮೂಡುವುದಿಲ್ಲ. ಅದಕ್ಕಾಗಿ ದಪ್ಪ ಗಾಜಿನ ಕನ್ನಡಗಳನ್ನು ಧರಿಸಬೇಕಾಗುತ್ತದೆ. ಆದರೂ ಬಹಳಷ್ಟು ಜನ ಹಿಂದಿನ ಸಹಜ ದೃಷ್ಟಿಬಾರದೆ ತಮ್ಮ ಆತೃಪ್ತಿಯನ್ನು ವ್ಯಕ್ತಪಡಿಸುತ್ತಾರೆ.

ಈಗ್ಗೆ ಕೆಲವು ವರ್ಷಗಳಿಂದ ಚಾಲ್ತಿಯಲ್ಲಿರುವ "ಸ್ಪರ್ಶ ಮಸೂರ" (Contact Lens)ಗಳನ್ನು ಧರಿಸುವುದರಿಂದ ಉತ್ತಮ ಫಲಿತಾಂಶಗಳುಂಟಾಗುತ್ತಿವೆ. ಇನ್ನೂ