ಶ್ರೀವಿಭೂತಿಯ ಹೂಸದವರ ಶ್ರೀರುದ್ರಾಕ್ಷಿಯ ಧರಿಸದವರ ನಿತ್ಯಲಿಂಗಾರ್ಚನೆಯ ಮಾಡದವರ ಜಂಗಮವೇ ಲಿಂಗವೆಂದರಿಯದವರ ಸದ್ಭಕ್ತರ ಸಂಗದಲ್ಲಿರದವರ ತೋರದಿರು. ಕೂಡಲಸಂಗಮದೇವಾ ಸೆರಗೊಡ್ಡಿ ಬೇಡುವೆನು. 455