೨೧೬ ನಡೆದದ್ದೇ ದಾರಿ
ಎಲ್ಲಿ ಸಿಕ್ಕಿತ್ತು. ಆದರೂ ಶ್ರಮಪಟ್ಟು ಹಗಲು ರಾತ್ರಿ ದುಡಿದು ಅರೆಹೊತ್ತೆ ಉಂಡು ಸಾಧ್ಯವಾದಷ್ಟು ಹಣವುಳಿಸಿ ತಿಂಗಳು ತಿಂಗಳೂ ಅವಳಿಗೆ ಕಳಿಸುತ್ತಿದ್ದ. ಎರಡೂ ಹೊತ್ತು ಪೋಸ್ಟ್ ಮನ್ ಬರುವ ದಾರಿಯಲ್ಲಿ ಕಣ್ಣುನೆತ್ತು ಕಾಯುತ್ತಿದ್ದ. ಲಕ್ಶ್ಮಿ ಆತನಿಗೆ ವಿಶೇಷವಾಗಿ ಪತ್ರ ಬರುತ್ತಿತ್ತು. ಆಗೆಲ್ಲ ಖುಶಿಯಿಂದ ಎರಡು ಕೈಯಿಂದಲೂ ಪತ್ರವನ್ನು ಎದೆಗವಚಿಕೊಂಡು ಆತ ಗೌಡರ ಮನೆಗೆ ಓಡುತ್ತಿದ್ದ. ಗೌಡರೋ ಗೌಡತಿಯೋ ಕೆಲಸದಿಂದ ಪುರುಸೊತ್ತು ಮಾಡಿಕೊಂಡು ಹೊರಬರುವ ವರೆಗೂ ಆತ ಪತ್ರವನ್ನು ಎದೆಗವಚಿಕೊಂಡು ಇರುತ್ತಿದ್ದ. 'ಬರೇ ರೊಕ್ಕ ಕಳ್ಸು ಅಂತ ಬರದಾಳಲ್ಲೋ ನಿನ್ನ್ಮಗಳು, ಮತ್ತೆನೂ ಬರದೇ ಇಲ್ಲ' ಅಂತ ಅವರಂದಾಗ ಕರಿಯನ ಕಪ್ಪು ಮುಖ ಇನ್ನೂ ಕಪ್ಪಗಾಗುತ್ತಿತ್ತು. ಆಗ ಅವರೇ ಮತ್ತೆ 'ಆಕಿ ಬಹಳ ಓದ್ತಾಳಂತೋ ಕರಿಯಾ, ಟೈಮೇ ಸಿಗಾಂಗಿಲ್ಲಂತ. ಅದಕ್ಕ ಬರ್ದಿರಾಕ್ಕಿಲ್ಲ. ಎಲ್ಲಾ ಪರೀಕ್ಷೆದಾಗೂ ಆಕಿದೇ ಪೈಲಾ ನಂಬರನ್ತ. ನಮ್ಮ ಸುಜಾತಾ ಬರದಾಳು'-ಅಂತ ಸಮಜಾಯಿಸಿದಾಗ ಕರಿಯ ಮತ್ತೆ ಗೆಲುವಾಗುತ್ತಿದ್ದ. ಮಗಳು ಕೈಯಾರೆ ಬರೆದ ಕಾಗದವನ್ನು ತನ್ನ ಹರಕು ಬನೀನಿನ ಒಳಕಿಸೆಯಲ್ಲಿ ಹೃದಯಕ್ಕೆ ತೀರಾ ಹತ್ತಿರವಾಗಿತ್ತುಕೊಂಡೇ ಇಡೀ ದಿನ ಕೆಲಸ ಮಾಡುತ್ತಿದ್ದ. ಆ ರಾತ್ರಿ ಅದನ್ನು ಮಣಕುದಿಂಬಿನ ಮೇಲೆ ತನ್ನ ಒರಟು ಕೆನ್ನೆಗಾನಿಸಿಕೊಂಡು ಇಟ್ಟುಕೊಳ್ಳುತ್ತಿದ್ದ. ಮರುದಿನ ಅದನ್ನು ಜೋಪಾನವಾಗಿ ತನ್ನಲ್ಲಿದ್ದ ಒಂದೇ ಒಂದು ಮುರುಕು ಕಬ್ಬಿಣ್ಣದ ಪೆಟ್ಟಿಗೆಯಲ್ಲಿ ತೆಗೆದಿಡುತ್ತಿದ್ದ. ಅನೇಕ ದಿನ ಇಂಥ ಸಾದಾ ಪತ್ರವೂ ಬರದಿದ್ದಾಗ, ಗೌಡರ ಮನೆಗೆ ಹೋಗಿ ಅವರ ಮಗಳಿಂದ ಬಂದ ಪತ್ರವನ್ನು ಅವರು ಓದುತ್ತಿದ್ದಾಗ ಅದನ್ನು ಕೇಳುತ್ತ ನಿಲ್ಲಿತ್ತಿದ್ದ. ಅದರಲ್ಲೇನಾದರೂ ಲಕ್ಶ್ಮಿಯ ಉಲ್ಲೇಖವಿದ್ದರೆ ಪುಳಕಿತನಾಗಿ ಧನ್ಯತೆ ಅನುಭವಿಸುತ್ತಿದ್ದ.
ವರ್ಷದ ಕೊನೆಗೆ ಮಗಳು ಬರಲಿರುವುದು ತಿಳಿದಾಗ ಕರಿಯ ಮತ್ತೆ ತುಂಬ ಹುರುಪಾದ. ಅವಳ ಅನಾದರ-ಔದಾಸೀನ್ಯ- ಆಲಕ್ಷ್ಯವೆಲ್ಲ ಆತನಿಗೆ ಮರೆತುಹೋಗಿ ಮಗಳ ಚೆಲುವಾದ ಮುಖವೊಂದೇ ಕಣ್ಮುಂದೆ ಕಟ್ಟೀ ತನ್ನ ಚಿಕ್ಕ ಮನೆಯನ್ನು ಶಕ್ತಿಮೀರಿ ಒಪ್ಪಗೊಳಿಸಿದ. ಅವಳಿಗಾಗಿ ವರ್ತನೆಯ ಹಾಲು ಗೊತ್ತುಮಾಡಿದ. ಒಳ್ಳೆಯ ಸಣ್ಣಕ್ಕಿಯನ್ನೂ, ತುಪ್ಪವನ್ನೂ ಗೌಡತಿಯಿಂದ ಕೇಳಿ ಪಡೆದು ತಂದಿಟ್ಟುಕೊಂಡ. ಒಂದು ಹೊಸ ಹೊರಸನ್ನೂ ಅವಳಿಗೊಂದು ತಾನೇ ಕೂತು ಹೆಣೆದು ತಯಾರು ಮಾಡಿದ. ಮೇಲೆ ಹಾಸಲು ತಾನೇ ರಾತ್ರಿಯೆಲ್ಲ ಕೂತು ಮೆತ್ತನ್ನ ಕೌದಿ ಹೊಲಿದ. ಮರೆಯದೆ ಒಂದು ಊದಿನಕಡ್ಡಿ ಪ್ಯಾಕೆಟ್ಟನ್ನೂ ತಂದಿಟ್ಟ.