ವಿಷಯಕ್ಕೆ ಹೋಗು

ಪುಟ:ನಡೆದದ್ದೇ ದಾರಿ.pdf/೪೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೭೮ ನಡೆದದ್ದೇ ದಾರಿ

 ಆನಂದಿಸುತ್ತ ನೀನು'-ದೂರದಿಂದ ಕೂಗಿತು ದೆವ್ವ...
      "ನಿರು, ನೀರು" ಎಂದು ತಡವರಿಸಿದ ಆತ. ಭಾಷಣ ಕೇಳಿಯೇ ಗಂಟಲೊಣಗಿತೇನೋ ಎಂದುಕೊಂಡ 
ಕಾಯ೯ದಶಿ೯ ನೀರು ತಂದುಕೊಟ್ಟ. ಗಟಗಟನೆ ಕುಡಿದು ನಂತರ ಬುದ್ದಿ ಸ್ವಲ್ಪ ಸ್ಥಿಮಿತಕ್ಕೆ ಬಂದಿತು. ಎಲ್ಲಾ ಬಿಟ್ಟು ಎದ್ದು  ದೂರ ಓಡಿ ಹೋಗುವ ಬಯಕೆಯನ್ನು ಅದಮಿಡಲೆತ್ನಿಸುತ್ತ ,ಎದುರಿಗೇ ಬಂದು ನಿಂತಂತಾಗುವ ಆ ಸ್ಪಷ್ಟ ಆಕೃತಿಯನ್ನು ಭ್ರಮೆಯೆಂದುಕೊಂಡು ಸಮಾಧಾನವಗಿರ ಬಯಸುತ್ತ ಆತ ತನಗೆ ಅಧ್ಯಕ್ಷರು ಹಾಕಿದ ದೊಡ್ದ ಹಾರವನ್ನು ಸ್ಟೈಲಿಶ್ ಆಗಿ ನಿಂತು ಸ್ವೀಕರಿಸಿದ.
   ನಾಟಕಕಾರರು ಕೊನೆಯದಾಗಿ ದಯವಿಟ್ತು ನಾಲ್ಕು ಮಾತು ಹೇಳಬೇಕೆಂದು ಅಧ್ಯಕ್ಷರು ಸವಿನಯ ಪ್ರಾಥ೯ನೆ
ಮಾಡಿದಾಗ ಆತ ಎದ್ದು ನಿಂತು ತನಗೆ ಅವರೆಲ್ಲ ತೋರಿದ ವಿಶ್ವಾಸಕ್ಕಾಗಿ ಋಣಿಯೆಂದು ತುಂಬಿದ ಕಂಠದಿಂದ 
ಹೇಳಿದ; ಅವರು ಹಾರೈಸಿದಂತೆ ಸಾಧ್ಯವಾದಷ್ಟೂ ಕಲೆಯ ಸೇವೆ ಮಾಡುವೆನೆಂದು ವಚನನ್ನಿತ್ತ; ತನ್ನ ಬಾಳೇ 
ಜನತೆಗೆ ಮೀಸಲೆಂದು ಘೋಷಿಸಿದ; ಅಧ್ಬುತ ಚಪ್ಪಾಳೆಯ ಸದ್ದಿನ ಮಧ್ಯದಲ್ಲಿ ಮಾತು ಮುಗಿಸಿ ಕುಚಿ೯ಯಲ್ಲಿ
ಧೊಪ್ಪನೆ ಕುಕ್ಕರಿಸಿದ...
    ಮತ್ತೆ ಆ ಹೆದರಿಸುವ ಆಕೃತಿ...'ನೀನು ಮನುಷ್ಯನೇ? ನಿನಗೆ ವಿವೇಕವೊಂದೆಂಬುದಿದೆಯೇ?' ಎಂದು
ಮುಂತಾಗಿ ಗೊಡ್ದು ಪುರಾಣದ ಪ್ರಶ್ನೆ ಕೇಳುತ್ತ. ಸಮೀಪಸುತ್ತ ಸಮೀಪ ಬರುತ್ತಿದೆ..ಛೆ, ಇದೇನು ಹುಚ್ಚು!ಇಂಥದಕ್ಕೆಲ್ಲ ಕೇರ್ ಮಾಡುವ ಸ್ಟೇಜನ್ನು ತಾನು ದಾಟಿ ಬಹಳ ಕಾಲವಾಯಿತೆಂದು ಅದಕ್ಕೆ ಗೊತ್ತಿಲ್ಲವೇನೋ ಪಾಪ, ಸ್ವಪ್ನಾ ದೇಶಪಾಂಡೆಯಂತೆ ಅದೂ ಮೋಸ ಹೋಗಿದೆ...
   ಹೆಂಡತಿ ಯಾರೋ ಹೆಂಗಸರೊಂದಿಗೆ ಮಾತಾಡುತ್ತಿದ್ದಾಗ ಮಿಸ್ ಗೋಖಲೆಯನ್ನು ಸಮೀಸಿದ ಆತ ಏನು
ಮಾತಾಡುವುದೆಂದು ವಿಚಾರಿಸಿ ನಿಧ೯ರಿಸಿ ಆತ ಬಾಯಿ ತೆರೆಯುವ ಮುಂಚೆಯೇ ಅವಳೆಂದಳು, ಮಿ-ಇವರೆ,ನಾ
ನಿಮ್ಮ ನಾಟಕಾ ಭಾsಳ like ಮಾಡ್ತೀನಿ. ನಾಡಹಬ್ಬಕ್ಕ ನೀವು ಮೊನ್ನೆ ಪಬ್ಲಿಶ್ ಮಾಡಿದ 'ಹಾಳುಗೋಡೆಯ ದೆವ್ವ' ನಾಟಕವನ್ನು ಅಭಿನಯಿಸಬೇಕು ಅನ್ಕೊಂಡಿವಿ.ಇವತ್ತ ರಾತ್ರಿ ನಮ್ಮ ಹಾಸ್ಟೆಲಿಗೆ ಬಂದು ರಿಯಸ೯ಲ್ ಒಮ್ಮೆ
ನೋಡತಿರೇನು ಪ್ಲೀಜ್?"
    ರಾತ್ರಿ..?ಹುಡಗಿಯರ ಹಾಸ್ಟೆಲಿಗೆ...?
    "ಓ ಯೆಸ್" ಅಂದ ಆತ ಒಮ್ಮೆಲೆ.
  "ಇದು ತಗೋಳ್ರಿ ನನ್ನ ಅಡ್ರೆಸ್."
 ತಾನಂದುಕೊಬ್ಂಡದ್ದಕತಿ್ಕಿಂತ ಹೆಚ್ಚ ಬುದ್ದಿವಂತೆಯಾಗಿದ್ದಳು ಮಿ್ ಗೋಖೆ.