ಗರುಡಿಯ ಕಟ್ಟಿ ಅರುವತ್ತುನಾಲ್ಕು ಕೋಲ ಅಭ್ಯಾಸವ ಮಾಡಿದೆನಯ್ಯಾ. ಇರಿವ ಘಾಯ ಕಂಡೆಯ ಭೇದವಿನ್ನೂ ತಿಳಿಯದು. ಪ್ರತಿಗರುಡಿಕಾರ ಬಿರಿದ ಪಾಡಿಂಗೊದನಗೆಫ ವೀರಪ[ಟ್ಟವ] ಕಟ್ಟಿ ತಿಗುರನೇರಿಸಿಕೊಂಡು ಗುರು ಕಳನನೇರಿ ಕಠಾರಿಯ ಕೊಂಡಲ್ಲಿ `ಹೋಯಿತ್ತು ಗಳೆ' ಎಂದಡೆ ಎನ್ನ ನಿನ್ನಲ್ಲಿ ನೋಡು ಕೂಡಲಸಂಗಮದೇವಾ.