ವಿಷಯಕ್ಕೆ ಹೋಗು

ಗರುಡಿಯ ಕಟ್ಟಿ ಅರುವತ್ತುನಾಲ್ಕು

ವಿಕಿಸೋರ್ಸ್ದಿಂದ


ಲೇಖಕರು: ಬಸವಣ್ಣ
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಗರುಡಿಯ ಕಟ್ಟಿ ಅರುವತ್ತುನಾಲ್ಕು ಕೋಲ ಅಭ್ಯಾಸವ ಮಾಡಿದೆನಯ್ಯಾ. ಇರಿವ ಘಾಯ
ಕಂಡೆಯ ಭೇದವಿನ್ನೂ ತಿಳಿಯದು. ಪ್ರತಿಗರುಡಿಕಾರ ಬಿರಿದ ಪಾಡಿಂಗೊದನಗೆಫ ವೀರಪ[ಟ್ಟವ] ಕಟ್ಟಿ
ತಿಗುರನೇರಿಸಿಕೊಂಡು
ಗುರು ಕಳನನೇರಿ
ಕಠಾರಿಯ ಕೊಂಡಲ್ಲಿ `ಹೋಯಿತ್ತು ಗಳೆ' ಎಂದಡೆ ಎನ್ನ ನಿನ್ನಲ್ಲಿ ನೋಡು
ಕೂಡಲಸಂಗಮದೇವಾ.