ತನು ಶುಚಿಯಿಲ್ಲದವನ ದೇಹಾರವೇಕೆ ದೇವರು ಕೊಡನೆಂಬ ಭ್ರಾಂತದೇಕೆ ಮನಕ್ಕೆ ಮನವೆ ಸಾಕ್ಷಿ ಸಾಲದೆ ಲಿಂಗ ತಂದೆ ಹೇಂಗೆ ಮನ ಹಾಂಗೆ ಘನ ತಪ್ಪದು ಕೂಡಲಸಂಗಮದೇವಾ.